ಭಾರತೀಯರ ಒಗ್ಗಟ್ಟಿನಿಂದ ಮಾತ್ರ ಈ ಕಷ್ಟದಿಂದ ಹೊರಬರಲು ಸಾಧ್ಯ – ಮೋದಿಗೆ ದರ್ಶನ್ ಬೆಂಬಲ

Public TV
1 Min Read
DARSHAN

ಬೆಂಗಳೂರು: ಪ್ರಧಾನಿ ಮೋದಿ ಅವರ ದೀಪ ಬೆಳಗಿಸೋ ಅಭಿಮಾನಕ್ಕೆ ಅನೇಕ ನಟ-ನಟಿಯರು ಬೆಂಬಲ ಸೂಚಿಸುತ್ತಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಧಾನಿ ಮೋದಿಯವರ ಕತ್ತಲೆಯನ್ನು ಕಳೆಯುವ ಬೆಳಕಿನ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

ದರ್ಶನ್ ಅವರು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿಯವರ ಬೆಳಕಿನ ಅಭಿಯಾನಕ್ಕೆ ಬೆನ್ನೆಲುಬಾಗಿ ಎಂದು ಜನರಿಗೆ ಕರೆ ಕೊಟ್ಟಿದ್ದಾರೆ. ಮೊದಲಿಗೆ “ನಮ್ಮ ಪ್ರಧಾನಿಗಳ ಕರೆಯಂತೆ ಕೊರೊನಾ ವೈರಸ್‌ನಿಂದ ತುಂಬಿರುವ ಅಂಧಕಾರವನ್ನು ಏಪ್ರಿಲ್ 5, ರಾತ್ರಿ 9 ಗಂಟೆಗೆ ನಿಮ್ಮ ಮನೆಯಂಗಳದಿಂದಲೇ ಮೋಂಬತ್ತಿ ಅಥವಾ ದೀಪಗಳನ್ನು ಹಚ್ಚುವ ಮೂಲಕ ಆದಷ್ಟು ಬೇಗ ಈ ಪಿಡುಗಿನಿಂದ ಪಾರಾಗುವ ಭರವಸೆಯನ್ನು ಎಲ್ಲರಲ್ಲೂ ಮೂಡಿಸೋಣ” ಎಂದು ಬರೆದುಕೊಂಡಿದ್ದಾರೆ.

ಮತ್ತೊಂದು ಟ್ವೀಟ್ ಮಾಡಿ “ಎಲ್ಲಾ ಭಾರತೀಯರ ಒಗ್ಗಟ್ಟಿನಿಂದ ಮಾತ್ರ ಈ ಕಷ್ಟಕರ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ. ಮನೆಯಲ್ಲಿಯೇ ಭದ್ರವಾಗಿರಿ, ನಿಮ್ಮ ನೆರೆಹೊರೆಯ ಜನರಿಗೆ ಬೆನ್ನೆಲುಬಾಗಿರಿ” ಎಂದು ಅಭಿಮಾನಿಗಳಗೆ ದರ್ಶನ್ ಕರೆ ನೀಡಿದ್ದಾರೆ.

ಈ ಹಿಂದೆಯೂ ಕೂಡ “ಈ ಸಮಯದಲ್ಲಿ ನಾನೊಂದು ಸಣ್ಣ ಸಲಹೆ ನೀಡಲು ಇಚ್ಚಿಸುತ್ತೇನೆ. ದಿನನಿತ್ಯ ನೀವು ಮಾಡುವ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಜನರಿಗಾಗುವಂತೆ ಮಾಡಿ, ನಿಮ್ಮ ಅಕ್ಕಪಕ್ಕದ ಬಡಜನರಿಗೆ ಒಪ್ಪೊತ್ತು ಕೂಳಿಗಾದರೂ ನೆರವಾದರೆ ಒಳಿತು ಎಂಬುದು ನನ್ನ ಭಾವನೆ. ಸಾಧ್ಯವಾದಷ್ಟು ನಿಮ್ಮ ಕೈಲಾಗುವ ಈ ಕೆಲಸದಿಂದ ಅನೇಕ ಕುಟುಂಬಗಳು ಚೇತರಿಸಿಕೊಳ್ಳಬಹುದು” ಎಂದು ಬಡವರಿಗೆ ಸಹಾಯ ಮಾಡುವಂತೆ ದರ್ಶನ್ ಮನವಿ ಮಾಡಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *