ನನ್ನ ಪ್ರೀತಿಯ ಹಿರಿಯ ಮಗ ದರ್ಶನ್ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಕನ್ನಡ ಚಿತ್ರರಂಗಕ್ಕೆ ದರ್ಶನ್ ಪದಾರ್ಪಣೆ ಮಾಡಿ ಇಲ್ಲಿಗೆ 25 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಡಿ-25 ಸಮಾರಂಭದಲ್ಲಿ ಸುಮಲತಾ ಅಂಬರೀಶ್ ಪಾಲ್ಗೊಂಡು ಮಾತನಾಡಿದ್ದಾರೆ.
ಮಂಡ್ಯದ ಮಣ್ಣಿನ ತಿಲಕ ಇಟ್ಟು ಅಂಬರೀಶ್‌ರನ್ನು ಬೀಳ್ಕೊಟ್ಟೆವು. ಸುಮಲತಾ ಕೂಡ ಈ ಮಣ್ಣನ್ನ ಬಿಡಲ್ಲ. ಮಂಡ್ಯವನ್ನ ಎಂದಿಗೂ ಬಿಡೋದಿಲ್ಲ ಎಂದು ಶ್ರೀರಂಗಪಟ್ಟಣದಲ್ಲಿ ಸುಮಲತಾ ಅಂಬರೀಶ್ ಭಾವುಕರಾಗಿ ನುಡಿದಿದ್ದಾರೆ.
Advertisement
ನನ್ನ ಪ್ರೀತಿಯ ಹಿರಿಯ ಮಗ ದರ್ಶನ್. D-25 ಮಾತ್ರವಲ್ಲ, ನಿನ್ನೆಯಷ್ಟೇ ಹುಟ್ಟು ಆಚರಿಸಿಕೊಂಡಿದ್ದಾರೆ. ಕಾಟೇರ 50 ದಿನ ಸಂಭ್ರಮ ಆಗಿದೆ. ಕಾಟೇರ ಪ್ರೀ ರಿಲೀಸ್ ಇವೆಂಟ್ ಮಂಡ್ಯದಲ್ಲಿ ನಡೆದಿತ್ತು. ಈ ಸಿನಿಮಾ ದೊಡ್ಡ ಹಿಟ್ ಆಗುತ್ತೆ ಎಂದು ಅವತ್ತೆ ಹೇಳಿದ್ದೆ. ಅದರ ಸಂಭ್ರಮವೂ ಮಂಡ್ಯದಲ್ಲೇ ಆಗ್ತಿದೆ. ಕಾಟೇರ ದರ್ಶನ್ ಅವ್ರನ್ನ ಎಲ್ಲೋ ಕರೆದುಕೊಂಡು ಹೋಗಿ ಕೂರಿಸಿದೆ. 25 ವರ್ಷ ಸುಮ್ಮನೆ ಹಾಗೇ ಬಂದ ಜರ್ನಿ ಅಲ್ಲ. ದರ್ಶನ್ ಮೊದಲ ಸಿನಿಮಾ ಮುಹೂರ್ತಕ್ಕೆ ನಾನು ಅಂಬರೀಶ್ ಹೋಗಿದ್ದೆವು. ದರ್ಶನ್ ಆಗ ಇನ್ನೂ ಚಿಕ್ಕ ಹುಡುಗ. ಈಗಲೂ 47 ಅಲ್ಲ, ದರ್ಶನ್‌ಗೆ 27 ವರ್ಷ ಎಂದು ಮಾತನಾಡಿದ್ದಾರೆ.
Advertisement
ದರ್ಶನ್ ಬದುಕಿನಲ್ಲಿ ಸವಾಲು ಎದುರಿಸಿ ನಿಂತವನು. ಶ್ರಮದಿಂದ ಬೆಳೆದು ಅಭಿಮಾನಿಗಳ ಪ್ರೀತಿಗಳಿಸಿದ್ದಾನೆ. ಸಾರ್ವಜನಿಕ ಜೀವನದಲ್ಲಿ ಇರುವವರು ಮಾದರಿಯಾಗಬೇಕು. ದರ್ಶನ್ ಕಷ್ಟಪಟ್ಟು ಬೆಳೆದ ರೀತಿ ನಿಮಗೆ ಸ್ಪೂರ್ತಿ ಆಗಬೇಕು. ಬರ್ತ್‌ಡೇ ಆಚರಣೆ ಬದಲು ಬಡವರಿಗೆ ಸಹಾಯ ಮಾಡಲು ದರ್ಶನ್ ಕೋರಿದ್ದರು. ಮಕ್ಕಳ ಯಶಸ್ಸು ತಾಯಿಗೆ ಸಂತೋಷ. ಅಭಿಷೇಕ್‌ಗೆ ದರ್ಶನ್ ಗೈಡ್ ಮಾಡ್ತಾನೆ. ಅಭಿ ಜೊತೆ ದರ್ಶನ್ ಇದ್ದಾನೆ, ಇರ್ತಾನೆ. ಎಲೆಕ್ಷನ್ ಟೈಮಲ್ಲಿ ನನ್ನ ಜೊತೆಗಿದ್ದವರು ದರ್ಶನ್, ಯಶ್. ನನ್ನ ಕಷ್ಟಕಾಲದಲ್ಲಿ ಜೊತೆಗೆ ನಿಂತು ಧೈರ್ಯ ತುಂಬಿದರು. ಅಂಬರೀಶ್ ಇದ್ದಾಗ ಇದ್ದವರು ಕೊನೆವರೆಗೂ ಜೊತೆಯಲ್ಲಿ ನಿಂತಿಲ್ಲ. ಅವರಿಂದ ಸಹಾಯದ ನಿರೀಕ್ಷೆಯನ್ನು ನಾವು ಮಾಡಲ್ಲ ಎಂದು ನುಡಿದಿದ್ದಾರೆ.
Advertisement
ನಡೆದು ಬಂದ ದಾರಿ ಯಾವತ್ತೂ ಮರೆಯಬಾರದು. ಅದು ದರ್ಶನ್‌ಗೆ ಇದೆ. ಆ ಕಾರಣಕ್ಕಾಗಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾನೆ. ಅಭಿ ಅಥವಾ ಸಚ್ಚಿಗೆ ಟಿಕೆಟ್ ಕೇಳ್ತೀರಾ ಅಂದ್ರೆ. ನಾನು ಸಚ್ಚಿದಾನಂದಗೆ ಟಿಕೆಟ್ ಕೇಳ್ತೀನಿ. ಸಚ್ಚಿ ನನ್ನ ಪರ ಎಲೆಕ್ಷನ್ ಮಾಡಿದ್ದಾನೆ. ನನ್ನ ಪರ ನಿಂತವರನ್ನ, ನಾವು ನಡೆದು ಬಂದ ದಾರಿ ಯಾವತ್ತು ಮರೆಯಬಾರದು. ಆ ಗುಣ ದರ್ಶನ್‌ನಲ್ಲಿದೆ. ಎಲ್ಲರನ್ನು ಜೊತೆಗೂಡಿಸಿಕೊಂಡು ಬೆಳೆಸುವ ಗುಣ ದರ್ಶನ್‌ಗೆ ಇದೆ. ಅಂಬರೀಶ್ ಅವರಲ್ಲಿ ಬಿಟ್ಟರೆ ಆ ಗುಣ ಕಂಡದ್ದು ದರ್ಶನ್‌ನಲ್ಲಿ ಮಾತ್ರ. ನನ್ನ ಜೊತೆ ಅಂಬರೀಶ್ ಇದ್ದಾರೆ. ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ. 5 ವರ್ಷ ನಿಮ್ಮ ಪ್ರೀತಿಗಳಿಸಿದ್ದೇನೆ ಎಂದು ಜನರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.