ಥಾಯ್ಲೆಂಡ್‌ನಲ್ಲಿ ದರ್ಶನ್ ಕೂಲ್ ಕೂಲ್

Public TV
1 Min Read
Darshan 4

ನಟ ದರ್ಶನ್ (Darshan) ಥಾಯ್ಲೆಂಡ್‌ಗೆ ತೆರಳಿ 6 ದಿನಗಳು ಕಳೆದಿದೆ. ಮೂಲಗಳ ಪ್ರಕಾರ.. ಸಿನಿಮಾದ ಹಾಡಿನ ಚಿತ್ರೀಕರಣ ಮುಕ್ತಾಯವಾಗಿದ್ದು ಸೋಮವಾರದಿಂದ (ಜು.21) ಒಂದಷ್ಟು ದಿನ ದರ್ಶನ್ ಅಲ್ಲಿಯೇ ಇದ್ದು ವಿಶ್ರಾಂತಿ ಪಡೆಯಲಿದ್ದಾರೆ ಅಂತ ಹೇಳಲಾಗ್ತಿದೆ.

Darshan 3 1

ಥಾಯ್ಲೆಂಡ್‌ನ ಫುಕೆಟ್, ಬ್ಯಾಂಕಾಕ್‌ನಲ್ಲಿ ʻಡೆವಿಲ್ʼ ಚಿತ್ರದ ಹಾಡಿನ ಚಿತ್ರೀಕರಣ ನಡೆದಿದೆ. 10 ದಿನಕ್ಕಾಗಿ ದರ್ಶನ್ ವಿದೇಶಕ್ಕೆ ತೆರಳಿದ್ದರು. ಇದೇ ಮಂಗಳವಾರ ದರ್ಶನ್ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ (Supreme Court) ಸಲ್ಲಿಸಲಾಗಿದ್ದ ಅರ್ಜಿ ವಿಚಾರವಾಗಿ ಆದೇಶ ಹೊರಬೀಳಲಿದ್ದು ದರ್ಶನ್ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಈ ನಡುವೆ ದರ್ಶನ್ ಥಾಯ್ಲೆಂಡ್‌ನಲ್ಲಿ (Thailand) ಸ್ನೇಹಿತರ ಜೊತೆ ಆರಾಮಾಗಿ ಇರುವ ಒಂದಷ್ಟು ಫೋಟೋಗಳು ವೈರಲ್ ಆಗಿದೆ. ಇದನ್ನೂ ಓದಿ: ಧರ್ಮಸ್ಥಳ ಫೈಲ್ಸ್ – ಸಮಾಧಿಯೊಳಗಿನ `ಸತ್ಯ’ ಹೇಳುತ್ತಾ ಅಸ್ಥಿಪಂಜರ?

Darshan 2 1

`ಡೆವಿಲ್’ ಸಿನಿಮಾದ ಹಾಡಿನ ಚಿತ್ರೀಕರಕ್ಕಾಗಿ ಹೋಗಿದ್ದ ದರ್ಶನ್ ಆ ವೇಳೆ ಪತ್ನಿ ಹಾಗೂ ಪುತ್ರನನ್ನೂ ಕರೆದುಕೊಂಡು ಹೋಗಿದ್ದರು. ಸುದೀರ್ಘ ಗ್ಯಾಪ್ ಬಳಿಕ ದರ್ಶನ್ ವಿದೇಶಕ್ಕೆ ತೆರಳಿದ್ದಾರೆ. ಒಂದು ವೇಳೆ ಮತ್ತೆ ಹೋಗಬೇಕಂದ್ರೂ ಕೋರ್ಟ್ ಅನುಮತಿ ಪಡೆಯಲೇಬೇಕಾಗುತ್ತೆ. ಅದೇನೇ ಇದ್ರೂ ದರ್ಶನ್ ಬೇಲ್ ಭವಿಷ್ಯ ಮಂಗಳವಾರ ನಿರ್ಧಾರವಾಗುತ್ತೆ. ಅಲ್ಲಿಯವರೆಗೂ ದರ್ಶನ್‌ಗೂ ಕೂಡ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ಸಿಎಂ ಮೊದಲು ಆಡಳಿತ ಪಕ್ಷದ ಶಾಸಕರ ಪ್ರಶ್ನೆಗೆ ಉತ್ತರ ನೀಡಲಿ: ವಿಜಯೇಂದ್ರ ಸವಾಲು

Share This Article