ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಹೊಸ ಜಾಗೃತಿ ಅಭಿಯಾನಕ್ಕೆ ಸಾಥ್ ನೀಡುವ ಮುಲಕ ತಮ್ಮ ಅಭಿಮಾನಿಗಳಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಕಾಡು ಉಳಿದರೆ ನಾಡು, ಪ್ರಾಣಿ ಪಕ್ಷಿ ಪೃಕೃತಿಯನ್ನ ಉಳಿಸೋದು ಮನುಷ್ಯನ ಜವಾಬ್ದಾರಿ. ಆದರೆ ಸರ್ಕಾರದಿಂದ ಇಂಥಹ ಎಷ್ಟೇ ಸಲಹೆ ಸೂಚನೆ ಜಾಗೃತಿ ಕಾರ್ಯಕ್ರಮ ನಡೆದರೂ ಅದ್ಯಾಕೋ ಜನರ ಕಿವಿಗೆ ಹೋಗೋದೇ ಇಲ್ಲ. ಪೃಕೃತಿ ವಿಕೋಪದಿಂದ ಮಳೆ ಸರಿಯಾದ ಪ್ರಮಾಣದಲ್ಲಿ ಆಗುತ್ತಿಲ್ಲ. ಇದರಿಂದ ಕಾಡು ಕ್ಷೀಣಿಸುತ್ತಲೇ ಇದೆ. ಆದರೆ ಈ ಬಾರಿ ಕಾಡಿನ ರಕ್ಷಣೆಗಾಗಿ ಸರ್ಕಾರ ಮಹಾನ್ ಪರಿಸರ ಪ್ರೇಮಿಯೊಬ್ಬರನ್ನ ಆಯ್ಕೆ ಮಾಡಿಕೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂಲಕ ಈ ಬಾರಿ ಅರಣ್ಯ ಸಂಪತ್ತಿನ ಮಹ್ವತ್ವ ಸಾರೋಕೆ ಹೊರಟಿದೆ.
Advertisement
Advertisement
ದಿನನಿತ್ಯದ ಜೀವನದಲ್ಲಿ ದರ್ಶನ್‍ಗೆ ಪ್ರಾಣಿ- ಪಕ್ಷಿಗಳು ಅವಿಭಾಜ್ಯ ಅಂಗ. ದರ್ಶನ್ ಲಕ್ಷಾಂತರ ಖರ್ಚು ಮಾಡಿ ಮೈಸೂರು ಮೃಗಾಲಯದಲ್ಲಿ ಹುಲಿ ಆನೆಯನ್ನ ದತ್ತು ಪಡೆದು ಸಲಹುತ್ತಿದ್ದಾರೆ. ವರ್ಷಕ್ಕೆ ಒಮ್ಮೆಯಾದ್ರೂ ಕಾಡಿಗೆ ಪ್ರವಾಸ ಬೆಳೆಸಿ ಪೃಕೃತಿ ಮಡಿಲಲ್ಲಿ ಆಶ್ರಯಿಸುತ್ತಾರೆ. ಆದ್ದರಿಂದ ಈಗ ದರ್ಶನ್ ಕೂಡ ಕಾಡು ರಕ್ಷಣಾ ಜಾಗೃತಿ ಅಭಿಯಾನಕ್ಕೆ ಮನಃಪೂರ್ತಿ ಕೈಜೋಡಿಸಿ ಎಂಡೋರ್ಸ್ ಮಾಡಲಿದ್ದಾರೆ.
Advertisement
Advertisement
ದರ್ಶನ್ ಎಂಡೋರ್ಸ್ ಮಾಡಿದ್ರೆ ಅದು ಹೆಚ್ಚಿನ ಜನಕ್ಕೆ ತಲುಪಬಲ್ಲದು ಅನ್ನೋದು ಅಭಿಪ್ರಾಯ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಅರಣ್ಯ ರಕ್ಷಣಾ ಸಮಿತಿ ದರ್ಶನ್ ಸಂದೇಶ ನೀಡಿರುವ ವಿಡಿಯೋ ಒಂದನ್ನ ಬಿಡುಗಡೆ ಮಾಡಿತ್ತು. ಇದೀಗ ಜೂನ್ 5 ರಂದು ಅರಣ್ಯ ರಕ್ಷಣಾ ಸಮಿತಿ ವತಿಯಿಂದ ನೂತನ ಸಂದೇಶವಿರುವ ಹೊಚ್ಚ ಹೊಸ ವೀಡಿಯೋವೊಂದು ರಿಲೀಸ್ ಆಗಲಿದೆ. ಈ ವೀಡಿಯೋವನ್ನ ಕರ್ನಾಟಕದ ಮಲೆ ಮಹದೇಶ್ವರ ಬೆಟ್ಟ, ಬಂಡೀಪುರ, ನಾಗರಹೊಳೆ ಅಭಯಾರಣ್ಯ ಮುಂತಾದ ಜಾಗದಲ್ಲಿ ಶೂಟ್ ಮಾಡಲಾಗಿದೆ.
ಈ ವಿಡಿಯೋದಲ್ಲಿ ದರ್ಶನ್ ಗಿಡ ನೆಡುವುದರ ಮೂಲಕ ಮಹತ್ವದ ಭೂಮಿಯ ರಕ್ಷಣೆಯ ಚುಟುಕು ಸಂದೇಶ ನೀಡುತ್ತಿದ್ದಾರೆ. ಸದ್ಯಕ್ಕೆ ಅವರು `ಯಜಮಾನ’ ಸಿನಿಮಾವನ್ನು ಮಾಡುತ್ತಿದ್ದಾರೆ. ತಮ್ಮ ಬ್ಯುಸಿ ಶೂಟಿಂಗ್ ನಲ್ಲೂ ಅರಣ್ಯ ರಕ್ಷಣೆಗೆ ಗಾಗಿ ಸಾಥ್ ನೀಡಿದ್ದಾರೆ.