ಬೆಂಗಳೂರು: ಚಾಲೆಂಚಿಂಗ್ ಸ್ಟಾರ್ ದರ್ಶನ್ ರವರು ಕುಸ್ತಿಪಟುವಾಗಿ ಕಣಕ್ಕಿಳಿಯೋಕೆ ಮನಸ್ಸು ಮಾಡಿದ್ದು, ರಾಣಿಬೆನ್ನೂರು ಕುಸ್ತಿಪಟುವಿನಿಂದ ತರಬೇತಿ ಪಡೆದು ಕುಸ್ತಿ ಅಖಾಡಕ್ಕೆ ಇಳಿಯಲು ದರ್ಶನ್ ಸಜ್ಜಾಗಿದ್ದಾರೆ.
ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುದೀಪ್, ದುನಿಯಾ ವಿಜಯ್ ನಂತರ ಕುಸ್ತಿ ಕಲಿಯಲು ಮುಂದಾಗಿದ್ದು, ಕುಸ್ತಿಯಲ್ಲಿ ಅವರು ಬಹಳ ಆಸಕ್ತಿಹೊಂದಿದ್ದು, ಈಗ ರಾಣಿಬೆನ್ನೂರು ಮೂಲಕ ಕುಸ್ತಿಪಟುವಾದ ಕಾರ್ತಿಕ್ ಕಾಟೆಯಿಂದ ತರಬೇತಿ ಪಡೆಯಲು ಮುಂದಾಗುತ್ತಿದ್ದಾರೆ. ಅಲ್ಲದೇ ತಮ್ಮ ನೂತನ ಚಿತ್ರಕ್ಕೆ ಕಾಟೇರ ಎನ್ನುವ ಟೈಟಲ್ ಇಡೋದಕ್ಕೆ ದರ್ಶನ್ ಪ್ಲ್ಯಾನ್ ಮಾಡಿದ್ದು, ಈಗಾಗಲೇ ಟೈಟಲ್ ಕೂಡಾ ರಿಜಿಸ್ಟ್ರರ್ ಮಾಡಿಸಿದ್ದಾರೆ.
Advertisement
Advertisement
ದರ್ಶನ್‍ರವರು ಪೈಲ್ವಾನ್ ಪಾತ್ರಗಳಲ್ಲಿ ಮಿಂಚಬೇಕು ಅನ್ನೋದು ಅವರ ಬಹಳ ವರ್ಷಗಳ ಕನಸಾಗಿತ್ತು. ಅದರಲ್ಲೂ ಖ್ಯಾತ ಕುಸ್ತಿಪಟು ಕಾರ್ತಿಕ್ ಕಾಟೆಯನ್ನ ನೋಡಿದ ಮೇಲೆ ದರ್ಶನ್ ಕುಸ್ತಿಗೆ ಫಿದಾ ಆಗಿ ಹೋಗಿದ್ದಾರೆ. ತನ್ನ ಸಿನಿ ಕೆರಿಯರ್ ನಲ್ಲಿ ಕುಸ್ತಿ ಸಿನಿಮಾ ಮಾಡಿದರೆ, ಕಾರ್ತಿಕ್ ಕಾಟೆಯಿಂದಲೇ ಟ್ರೈನಿಂಗ್ ಪಡೆಯಬೇಕು ಅಂದುಕೊಂಡಿದ್ದರು. ಈ ಕುರಿತು ಕಾಟೆಯ ಬಳಿ ಇನ್ನೂ ಚರ್ಚೆ ಮಾಡಿಲ್ಲ, ಆದರೆ ದಾಸನಿಗೆ ತರಬೇತಿ ಕೊಡೋದಕ್ಕೆ ಕಾಟೆ ರೆಡಿಯಾಗಿ ನಿಂತಿದ್ದಾರೆ.
Advertisement
ಯಾರಿದು ಕಾರ್ತಿಕ್ ಕಾಟೆ?
ದಾವಣಗೆರೆಯ ಕುಸ್ತಿ ಪೈಲ್ವಾನ್ ಆದ ಕಾರ್ತಿಕ ಕಾಟೆ, ಮೂಲತಃ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ನಿವಾಸಿಯಾಗಿದ್ದಾರೆ. ಇವರ ತಂದೆ ರಾಣಿಬೆನ್ನೂರು ಪುರಸಭೆ ಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ 8ನೇ ವಯಸ್ಸಿಗೆ ಕುಸ್ತಿ ಅಖಾಡಕ್ಕೆ ಇಳಿದು, ರಾಣಿಬೆನ್ನೂರಿನಲ್ಲಿ ಗರಡಿ ಮನೆಯಲ್ಲಿ ಕುಸ್ತಿಯಾಡುತ್ತ ಬೆಳೆದಿದ್ದಾರೆ. ಕಾರ್ತಿಕ್ ನ ಕುಸ್ತಿ ನೋಡಿ ಕುಸ್ತಿ ಕೋಚ್ ಶಿವಾನಂದ್ ದಾವಣಗೆರೆ ಕುಸ್ತಿ ಹಾಸ್ಟೆಲ್ ಗೆ ಸೇರಿಸಿಕೊಂಡು ತರಬೇತಿ ನೀಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ದಾವಣಗೆರೆಯ ಕುಸ್ತಿ ಹಾಸ್ಟೆಲ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
Advertisement
ದಾವಣಗೆರೆಯ ದುಗ್ಗಮ್ಮ ದೇವಿಯ ಜಾತ್ರೆಯಲ್ಲಿ ಗದೆ ಹೊಡೆದು ಜಿಲ್ಲೆಗೆ ಹೆಸರು ತಂದುಕೊಟ್ಟ ಕೀರ್ತಿ ಕಾರ್ತಿಕ್ ರವರದ್ದು. ಕಳೆದ 25 ವರ್ಷಗಳಿಂದ ದಾವಣಗೆರೆಯ ದುಗ್ಗಮ್ಮ ಜಾತ್ರೆಯಲ್ಲಿ ಯಾರು ಸಹ ಕುಸ್ತಿಯಲ್ಲಿ ಗದೆ ಹೊಡೆದಿರಲಿಲ್ಲ. ಅಲ್ಲದೇ ಬೇರೆ ಬೇರೆ ರಾಜ್ಯಗಳಿಂದ ಬಂದ ಪೈಲ್ವಾನರು ಗೆಲುವು ಸಾಧಿಸಿಕೊಂಡು ಹೋಗುತ್ತಿದ್ದರು. 25 ವರ್ಷಗಳ ನಂತರ ಮೊದಲ ಬಾರಿಗೆ ತಮ್ಮ ಸಾಮಥ್ರ್ಯವನ್ನು ತೋರಿಸಿ ಕಾರ್ತಿಕ್ ಕುಸ್ತಿಯಲ್ಲಿ ಗೆದ್ದಿದ್ದಾರೆ.
2013 – 14ರಲ್ಲಿ ದಸರಾ ಕೇಸರಿ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಕಾರ್ತಿಕ್ 2014 ರಲ್ಲಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಯನ್ನು ಅಂದಿನ ಸಿಎಂ ಸಿದ್ದರಾಮಯ್ಯರಿಂದ ಪಡೆದಿದ್ದಾರೆ. 2017ರಲ್ಲಿಯೂ ಸಹ ದಸರಾ ಕಂಠೀರವ ಬಿರುದನ್ನು ಪಡೆದುಕೊಂಡಿದ್ದಾರೆ.