ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2019ರ ಪೋಸ್ಟ್ ದಸರಾ ಇವೆಂಟ್ ಮೈಸೂರಿನ ಲಲಿತಮಹಾಲ್ ಹೆಲಿಪ್ಯಾಡ್ ಗ್ರೌಂಡ್‍ನಲ್ಲಿ ನಡೆಯುತ್ತಿದೆ. ಜೊತೆಗೆ ಗ್ರಾವೇಲ್ ಫೆಸ್ಟ್ ಕಾರ್ ರೇಸ್ ಕೂಡ ನಡೆಯುತ್ತಿದೆ.
ಕಾರ್ ರೇಸ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲನೆ ಕೊಟ್ಟಿದ್ದಾರೆ. ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಕಾರ್ ರೇಸ್‍ಗೆ ಚಾಲನೆ ನೀಡಿದ್ದಾರೆ. ಒಟ್ಟು 9 ವಿಭಾಗದಲ್ಲಿ ಗ್ರಾವೇಲ್ ಫೆಸ್ಟ್ ರೇಸ್ ನಡೆಯಲಿದೆ. ಕಾರ್ ರೇಸ್‍ನಲ್ಲಿ 120 ಕಾರುಗಳು ಮತ್ತು 170 ಡ್ರೈವರ್‌ಗಳು ಭಾಗಿಯಾಗಲಿದ್ದಾರೆ. ಈ ಮೂಲಕ ಗ್ರಾವೇಸ್ ಫೆಸ್ಟ್ ಕಾರ್ ರೇಸ್ ಸ್ಪರ್ಧೆ ರೋಚಕವಾಗಿರುತ್ತದೆ.
Advertisement
Advertisement
ನಟ ದರ್ಶನ್ ಆಯುಧ ಪೂಜೆ ಮುಗಿದ ನಂತರ ವಿಶೇಷವಾಗಿ ಹಬ್ಬವನ್ನು ಆಚರಣೆ ಮಾಡಿದ್ದರು. ಆರ್.ಆರ್. ನಗರದಲ್ಲಿರುವ ತೂಗುದೀಪ್ ಮನೆಯ ಮುಂದೆ ಕಾರುಗಳನ್ನು ಸಾಲಾಗಿ ನಿಲ್ಲಿಸಿ, ಹೂವಿನ ಹಾರ ಹಾಕಿ ಪೂಜೆ ಮಾಡುವ ಮೂಲಕ ಅದ್ಧೂರಿಯಾಗಿ ಆಯುಧ ಪೂಜೆಯನ್ನು ನೆರವೇರಿಸಿದ್ದರು. ಆಯುಧ ಪೂಜೆ ಮಾಡಿರುವ ದಾಸನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
Advertisement
ದರ್ಶನ್ ಬಳಿ ಬಿಎಂಡಬ್ಲು, ರೇಂಜ್ ರೋವರ್, ಜಾಗ್ವರ್, ಫಾರ್ಚ್ಯುನರ್ ಕಾರುಗಳಿವೆ. ಅಷ್ಟೇ ಅಲ್ಲದೆ ಲ್ಯಾಂಬೋರ್ಗಿನಿನ ನ್ಯೂ ಎಡಿಷನ್, ಫೋರ್ಡ್ ಮಸ್ಟಂಗ್ ಸ್ಪೋರ್ಟ್ಸ್ ಕಾರ್ ಗಳನ್ನು ದಚ್ಚು ಹೊಂದಿದ್ದಾರೆ. ಆಯುಧ ಪೂಜೆ ದಿನ ಒಟ್ಟು 11 ದುಬಾರಿ ಕಾರುಗಳಿಗೆ ಆಯುಧ ಪೂಜೆ ಮಾಡಿದ್ದರು.