ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದ ಹಿರಿಯ ನಟಿಗೆ ಇದೆಂಥಾ ಸ್ಥಿತಿ? ಆಶ್ರಯ ಇಲ್ಲದೇ ವೃದ್ಧಾಶ್ರಮ ಸೇರಿದ್ದ ನಟಿ ಶೈಲಶ್ರೀ ಸುದರ್ಶನ್ (Shailashri Sudarshan) ಅವರ ನೆರವಿಗೆ ನಟ ದರ್ಶನ್ ಧಾವಿಸಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಖಳನಟನಾಗಿ ಮಿಂಚಿದ್ದ ಸುದರ್ಶನ್ ಅವರ ಪತ್ನಿ ಹಿರಿಯ ನಟಿ ಶೈಲಶ್ರೀ ಅವರು ಸ್ವಂತ ಮನೆಯಿಲ್ಲದೇ ವೃದ್ಧಾಶ್ರಮ ಸೇರಿದ್ದರು. ಹಿರಿಯ ನಟಿ ಕಷ್ಟವನ್ನು ಅರಿತು ನಟ ದರ್ಶನ್ (Darshan) ಸಹಾಯಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ, ಪದ್ಮಶ್ರೀ ಪುರಸ್ಕೃತ ಬಾಲಿವುಡ್ ನಟ ಮನೋಜ್ ಕುಮಾರ್ ನಿಧನ
ಹಿರಿಯ ನಟಿ ಕಷ್ಟಕ್ಕೆ ಮಿಡಿದ ದರ್ಶನ್, ಜೈಲಿಂದ ಹೊರ ಬಂದಮೇಲೆ ನಟಿಗೆ ಧನ ಸಹಾಯ ಮಾಡಿದ್ದಾರೆ. ಸಹೋದರ ದಿನಕರ್ ಮೂಲಕ ದರ್ಶನ್ ನೆರವಾಗಿದ್ದಾರೆ. ಈ ಕುರಿತು ಸ್ವತಃ ನಟಿ ಶೈಲಶ್ರೀ ಅವರು ‘ಪಬ್ಲಿಕ್ ಟಿವಿ’ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಶೈಲಶ್ರೀ ಅವರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಿರಿಯ ಜೀವಿ ಆಶ್ರಯ ಇಲ್ಲದೇ ಬೆಂಗಳೂರಿನ ‘ಮಡಿಲು’ ವೃದ್ಧಾಶ್ರಮ ಸೇರಿದ್ದರು. ಈ ವಿಚಾರ ನಟ ದರ್ಶನ್‌ಗೆ ಗೊತ್ತಾಗಿ ನೆರವಿಗೆ ಧಾವಿಸಿದ್ದಾರೆ. ನಟಿಗೆ ಸಹೋದರನ ಮೂಲಕ 50,000 ರೂ. ಧನ ಸಹಾಯ ಮಾಡಿದ್ದಾರೆ. ಅಲ್ಲದೇ, ‘ಯಾವುದಾದರು ಬಾಡಿಗೆ ಮನೆಯಲ್ಲಿ ಇರುವುದಾದರೆ ನಾವು ಹಣ ನೀಡುತ್ತೇವೆ’ ಎಂದು ಸಹ ದರ್ಶನ್ ತಿಳಿಸಿದ್ದರಂತೆ. ಇದನ್ನೂ ಓದಿ: ಯಶ್ ನಟನೆಯ ‘ಟಾಕ್ಸಿಕ್’ ಚಿತ್ರೀಕರಣಕ್ಕಾಗಿ ಮುಂಬೈಗೆ ಬಂದಿಳಿದ ನಯನತಾರಾ
ತಮ್ಮ ಸ್ಥಿತಿ ಕುರಿತು ‘ಪಬ್ಲಿಕ್ ಟಿವಿ’ ಜೊತೆ ನಟಿ ಕಣ್ಣೀರು ಹಾಕಿದ್ದಾರೆ. ಇದೇ ವೇಳೆ, ನಟ ದರ್ಶನ್ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.