ಮಿಲನ ಪ್ರಕಾಶ್ ನಿರ್ದೇಶನದ ಡೆವಿಲ್ ಸಿನಿಮಾದ ಶೂಟಿಂಗ್ ವೇಳೆ ನಟ ದರ್ಶನ್ (Darshan) ಅವರ ಕೈಗೆ ಪೆಟ್ಟಾಗಿದ್ದು, ಇಂದು ಅವರು ಆಪರೇಷನ್ ಗೆ ಒಳಗಾಗಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ದರ್ಶನ್ ಅವರೇ ಹೇಳಿಕೊಂಡಿದ್ದಾರೆ. ಮಂಡ್ಯದಲ್ಲಿ ನಡೆದ ಸುಮಲತಾ ಅಂಬರೀಶ್ ಅವರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು ಆಸ್ಪತ್ರೆಗೆ (Hospital) ಅಡ್ಮಿಟ್ ಆಗಿ ಆಪರೇಷನ್ ಗೆ ಒಳಗಾಗಲಿದ್ದೇನೆ ಎಂದಿದ್ದಾರೆ.
ಡೆವಿಲ್ ಸಿನಿಮಾದ ಸಾಹಸ ಸನ್ನಿವೇಶ ಶೂಟಿಂಗ್ ಸಮಯದಲ್ಲಿ ಅವರ ಕೈಗೆ ಏಟು ಬಿದ್ದಿದೆ ಎಂದು ಹೇಳಲಾಗುತ್ತಿದ್ದು, ಕೈಗೆ ಬೆಲ್ಟ್ ಕಟ್ಟಿಕೊಂಡು ಈವರೆಗೂ ಓಡಾಡುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಈಗ ಆಪರೇಷನ್ ಗೆ ಒಳಗಾಗಲು ಅವರು ಮುಂದಾಗಿದ್ದಾರೆ.
ಆಪರೇಷನ್ ಒಳಗಾಗುವ ಮುನ್ನ ಹಲವಾರು ಕಾರ್ಯಕ್ರಮಗಳಲ್ಲೂ ದರ್ಶನ್ ಭಾಗಿ ಆಗಿದ್ದಾರೆ. ನೀನಾಸಂ ಸತೀಶ್ ನಟನೆಯ ಮ್ಯಾಟ್ನಿ ಸಿನಿಮಾದ ಇವೆಂಟ್, ನಿನ್ನ ಜಾಜಿ ಹೆಸರಿನ ಕಾರ್ಯಕ್ರಮ ಹೀಗೆ ಕೈಗೆ ಬೆಲ್ಟ್ ಕಟ್ಟಿಕೊಂಡೇ ದರ್ಶನ್ ಭಾಗಿ ಆಗಿದ್ದಾರೆ.