ಮೈಸೂರು: ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗವಹಿಸಿದ್ದರು. ಇದೇ ವೇಳೆ ಕಾರ್ಯಕ್ರಮದ ವೇದಿಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿದ ದರ್ಶನ್ ಆಶೀರ್ವಾದ ಪಡೆದು ಸರಳತೆ ಮೆರೆದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್, ನಾನು ಕೂಡ ಜೆಎಸ್‍ಎಸ್ ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದು, ಆದರೆ 6 ತಿಂಗಳು ಮಾತ್ರ ಇಲ್ಲಿ ಓದಿದೆ. ಅಲ್ಲದೇ ನಮ್ಮ ತಂದೆ ಅವರ ಅನಾರೋಗ್ಯದ ವೇಳೆ ಜೆಎಸ್‍ಎಸ್ ಆಸ್ಪತ್ರೆ ನನಗೆ ತುಂಬಾ ಸಹಾಯ ಮಾಡಿದೆ. ಅಲ್ಲದೇ ಸುತ್ತೂರು ಮಠ ಕೂಡ ಆತ್ಮೀಯವಾಯಿತು ಎಂದು ಹಿಂದಿನ ನೆನಪುಗಳನ್ನು ಸ್ಮರಿಸಿಕೊಂಡರು.
Advertisement
Advertisement
ಶಿಕ್ಷಣ ಮಹತ್ವದ ಬಗ್ಗೆ ಮಾತನಾಡಿದ ದರ್ಶನ್ ಅವರು, ನೀವು ಪಡೆಯುವ ಪದವಿ ಒಂದು ಕೋಟಿಗೆ ಸಮನಾಗಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಶಿಕ್ಷಣ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಶಿಕ್ಷಣ ಇಲ್ಲದಿದ್ದರೆ ಎಂತಹ ಸಮಸ್ಯೆಗಳು ಎದುರಾಗುತ್ತದೆ ಎಂಬುವುದು ನನಗೆ ಚೆನ್ನಾಗಿ ಗೊತ್ತಿದೆ. ಯಾವುದೇ ಕಾರಣಕ್ಕೂ ಎರಡು ದೋಣಿ ಮೇಲೆ ಕಾಲಿಡಬೇಡಿ ಎಂದು ಸಲಹೆ ನೀಡಿದರು.
Advertisement
ಸುತ್ತೂರು ಜಾತ್ರೆಯಲ್ಲಿ ನಾನು ಕೂಡ ಬಹಳಷ್ಟು ಬಾರಿ ಆರಾಮಾಗಿ ಓಡಾಡುತ್ತಿದ್ದೆ, ಆದರೆ ಈಗ ಅದು ಸಾಧ್ಯವಿಲ್ಲ. ಇಲ್ಲಿ ನೆರೆದಿರುವ ದನಗಳ ಜಾತ್ರೆ ನೋಡುವುದು ನನಗೆ ತುಂಬಾ ಇಷ್ಟ. ಸೆಲೆಬ್ರಿಟಿ ಆಗಿರುವ ಕಾರಣ ನೀವು ನನ್ನನ್ನು ಓಡಾಡಲು ಬಿಡೋಲ್ಲ. ಸಣ್ಣ ಪಾತ್ರಗಳನ್ನು ಮಾಡಿದ್ದ ನನ್ನನ್ನು ನೀವು ಇಲ್ಲಿಗೆ ತಂದು ನಿಲ್ಲಿಸಿದ್ದೀರಾ. ನಿಮ್ಮ ಪ್ರೀತಿ ಹೀಗೆ ಮುಂದುವರಿಯಲಿ ಎಂದರು. ಇತ್ತ ನಟ ದರ್ಶನ್ ಆಗಮಿಸುತ್ತಿದಂತೆ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಮತ್ತಷ್ಟು ಸಂತಸಗೊಂಡು ಸ್ವಾಗತಿಸಿದರು.
Advertisement
ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಆತ್ಮೀಯರು: ವಿಧಾನಸಭಾ ಚುನಾವಣೆಯ ಬಳಿಕ ಒಮ್ಮೆಯೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹೆಚ್ ಸಿ ಮಹದೇವಪ್ಪ ಅವರು ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು. ಈ ಹಿಂದೆ ಹಲವು ಬಾರಿ ನಮ್ಮ ಮಧ್ಯೆ ಯಾವುದೇ ಬಿನ್ನಭಿಪ್ರಾಯ ಇಲ್ಲ ಎಂದು ಹೇಳಿದ್ದ ನಾಯಕರು ಒಮ್ಮೆಯೂ ಸಾರ್ವಜನಿಕವಾಗಿ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಇಂದು ಸುತ್ತೂರು ವೇದಿಕೆಯಲ್ಲಿ ಹಲವು ದಿನಗಳ ನಂತರ ಭಾಗವಹಿಸಿದ್ದರು. ಸುತ್ತೂರು ಶ್ರೀಗಳ ಅಕ್ಕಪಕ್ಕದಲ್ಲಿ ಕುಳಿತು ಇಬ್ಬರು ಪರಸ್ಪರ ಮಾತುಕತೆ ನಡೆಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv