ರಾಯಚೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ನಟ ದರ್ಶನ್ (Darshan) ಬಿಡುಗಡೆಯಾಗಲಿ ಎಂದು ರಾಯಚೂರಿನ ಅಭಿಮಾನಿಗಳು ದೇವರ ಮೊರೆಹೋಗಿದ್ದಾರೆ.
ಪಾದಯಾತ್ರೆ ಮೂಲಕ ಬಂದು ಲಿಂಗಸುಗೂರು ತಾಲ್ಲೂಕಿನ ಗುರಗುಂಟಾ ಅಮರೇಶ್ವರ ದೇವಸ್ಥಾನದಲ್ಲಿ ದರ್ಶನ್ ಫೋಟೋ ಹಿಡಿದು ಪೂಜೆ ಮಾಡಿಸಿದ್ದಾರೆ. ತಾಲೂಕಿನ ಯರಡೋಣಿ ಗ್ರಾಮದ ದರ್ಶನ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಸುಮಾರು 8 ಕಿಮೀ ಪಾದಯಾತ್ರೆ ಮೂಲಕ ದೇಗುಲಕ್ಕೆ ಬಂದು ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: Darshan Case: ಸೆಲೆಬ್ರಿಟಿ ಅಂತಲ್ಲ, ತಪ್ಪು ಯಾರೇ ಮಾಡಿದ್ರು ತಪ್ಪೇ- ಉಮಾಪತಿ ರಿಯಾಕ್ಷನ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್ ತಪ್ಪು ಮಾಡಿದ್ರೆ ಅದಕ್ಕೆ ಕಾನೂನು ಇದೆ, ಸರ್ಕಾರ ಇದೆ ನೋಡಿಕೊಳ್ಳುತ್ತೆ. ತಪ್ಪು ಮಾಡಿದ್ದರೆ ಅದರ ಪ್ರಕಾರ ಕ್ರಮ ಆಗಲಿ. ಆದರೆ ತಪ್ಪಿತಸ್ಥರೆಂದು ತೀರ್ಮಾನವಾಗದೇ ಅಭಿಮಾನಿಗಳಿಗೆ ಹಾಗೂ ದರ್ಶನ್‌ಗೆ ಯಾರೂ ನೋವು ಮಾಡಬೇಡಿ ಎಂದು ದರ್ಶನ್ ಅಭಿಮಾನಿಗಳು ಮನವಿ ಮಾಡಿದ್ದಾರೆ.