ಬೆಂಗಳೂರು: ಅಭಿಮಾನಿಗಳು ತಮ್ಮ ನೆಚ್ಚಿನ ನಟ ಹೆಸರು ಅಥವಾ ಮೊದಲ ಅಕ್ಷರವನ್ನು ತಮ್ಮ ಕೈ ಮೇಲೆ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾವಚಿತ್ರವನ್ನೇ ತನ್ನ ಮೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಆನಂದ ರಾಮ್ ನಟ ದರ್ಶನ್ ಅವರ ಭಾವಚಿತ್ರವನ್ನು ತನ್ನ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಮೂಲಕ ಆನಂದ್ ರಾವ್ ದರ್ಶನ್ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ನಟ ದರ್ಶನ್ ಹುಟ್ಟುಹಬ್ಬ ಮುಂದಿನ ತಿಂಗಳು 16 ರಂದು ಇದೆ. ಆದರೆ ಅಭಿಮಾನಿ ಆನಂದ್ ರಾಮ್ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ದರ್ಶನ್ ಅವರಿಗೆ ಈಗಲೇ ಉಡುಗೊರೆ ನೀಡಿದ್ದಾರೆ. ದರ್ಶನ್ ಅಭಿನಯಿಸಿದ್ದ ಸಿನಿಮಾವೊಂದರಲ್ಲಿ ಬೀಡಿ ಸೇದುತ್ತಿದ್ದ ಫೋಟೋವನ್ನು ಅಭಿಮಾನಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕೊನೆಯಲ್ಲಿ ‘ಯಜಮಾನ್ರು’ ಎಂಬ ಅಡಿ ಬರಹವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ಆನಂದ್ ‘ಕರುನಾಡ ಕುಲದೀಪ ದರ್ಶನ್ ತೂಗುದೀಪ ಅಭಿಮಾನಿ’ ಸಂಘದ ಅಧ್ಯಕ್ಷರಾಗಿದ್ದು, ಈ ಸಂಘದ ಮೂಲಕ ಆನಂದ್ ದರ್ಶನ್ ಅಭಿಮಾನಿಗಳೊಂದಿಗೆ ನಟನಿಗಾಗಿ ಕೆಲಸಗಳನ್ನು ಮಾಡುತ್ತಾರೆ. ಆನಂದ್ ರಾವ್ ಟ್ಯಾಟೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ದರ್ಶನ್ ಅಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಶೇರ್ ಮಾಡುತ್ತಿದ್ದಾರೆ.
ಟ್ಯಾಟೂ ಹಾಕಿಸಿಕೊಂಡಿರುವ ಆನಂದ್ ಜೊತೆ ಟ್ಯಾಟೂ ಹಾಕಿರುವ ಶಿವರಾಜ್ ಕೂಡ ದರ್ಶನ್ ಅಭಿಮಾನಿಯಾಗಿದ್ದಾರೆ. ಅಭಿಮಾನಿ ಹಾಕಿಸಿಕೊಂಡಿದ್ದ ದರ್ಶನ್ ಟ್ಯಾಟೂ ನೋಡಿ ನಟ ಅಭಿಷೇಕ್ ಕೂಡ ಆಶ್ಚರ್ಯ ಪಟ್ಟಿದ್ದಾರೆ. ಈ ಟ್ಯಾಟೂ ಸುಮಾರು 1.5 ಫೀಟ್ ಉದ್ದ, 1.5 ಅಗಲ ಇದೆ.
ದಚ್ಚು ಬರ್ತ್ಡೇಗೆ ಗಿಫ್ಟ್: ಅಭಿಮಾನಿ ಮೈಮೇಲೆ ಮೂಡಿದ ಚಾಲೆಂಜಿಂಗ್ ಸ್ಟಾರ್ #ಡಿಬಾಸ್????????#BoxofficeSultan#ChallengingStar#DBoss#DBossCraze #Yajamana@dasadarshan @Dbeatsmusik pic.twitter.com/ldrSq1dZwg
— Darshan Thoogudeepa Fans – CSDSK (@CSDSK1) January 29, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv