ಮಂಡ್ಯ: ಕಳೆದ ವಿಧಾನಸಭಾ ಚುನಾವಣೆಯಂತೆ ಈ ಬಾರಿಯ ಲೋಕಸಭಾ (Lok Sabha Election) ಅಖಾಡದಲ್ಲೂ ಮಂಡ್ಯದಲ್ಲಿ ದಳಪತಿಗಳನ್ನು ಕಟ್ಟಿ ಹಾಕಬೇಕೆಂದು ಕಾಂಗ್ರೆಸ್ (Congress) ನಾಯಕರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿಯನ್ನು (HD Kumaraswamy) ಮಂಡ್ಯದಲ್ಲಿ ಸೋಲಿಸೋದು ಅಷ್ಟು ಸುಲಭದ ಮಾತಲ್ಲ ಎಂದು ಕೈ ನಾಯಕರಿಗೂ ತಿಳಿದಿದೆ. ಅದೇ ಕಾರಣಕ್ಕೆ ಕೈ ನಾಯಕರು ಕುಮಾರಸ್ವಾಮಿ ಮಣಿಸಲು ತಂತ್ರ ರೂಪಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ (Sumalata Ambareesh) ಪರ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಬ್ಬರದ ಪ್ರಚಾರ ಮಾಡಿದ್ದರು. ಇವರಿಬ್ಬರ ಪ್ರಚಾರ ಸುಮಲತಾ ಅಂಬರೀಶ್ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು.
ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನು (Darshan) ಮಂಡ್ಯ ಲೋಕಸಭಾ ಚುನಾವಣೆಯ ಪ್ರಚಾರದ ಅಖಾಡಕ್ಕೆ ಕಾಂಗ್ರೆಸ್ ಇಂದು ಕರೆತರುತ್ತಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಬೆನ್ನಿಗೆ ನಿಂತಿದ್ದ ದರ್ಶನ್ ಈ ಬಾರಿ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಉರುಫ್ ಸ್ಟಾರ್ ಚಂದ್ರು (Star Chandru) ಪರ ಅಬ್ಬರದ ಪ್ರಚಾರ ಮಾಡಲು ಮುಂದಾಗಿದ್ದಾರೆ. ಸುಮಲತಾ ಅವರು ದರ್ಶನ್ ಅವರನ್ನು ತಮ್ಮ ಮೊದಲ ಮಗ ಎಂದು ಹೇಳುತ್ತಿದ್ದರು. ಸುಮಲತಾ ಅವರು ತಮ್ಮ ನಿಲುವು ಘೋಷಣೆ ಮಾಡುವ ವೇಳೆಯೂ ದರ್ಶನ್ ಅವರೊಂದಿಗೆ ಬೆನ್ನಿಗೆ ನಿಂತಿದ್ದರು. ಸುಮಲತಾ ಅವರು ಬಿಜೆಪಿ ಸೇರ್ಪಡೆಯಾಗಿ ಬಿಜೆಪಿ-ಜೆಡಿಎಸ್‌ಗೆ ಬೆಂಬಲ ಸಹ ಘೋಷಣೆ ಮಾಡಿದ್ದಾರೆ. ಇದೀಗ ದರ್ಶನ್ ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧವಾಗಿ ಮಂಡ್ಯದಲ್ಲಿ ದರ್ಶನ್ ಅವರು ಪ್ರಚಾರಕ್ಕೆ ಧುಮುಕಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಹಲ್ಲೆ ಪ್ರಕರಣ; ನಾಲ್ವರ ಬಂಧನ
Advertisement
Advertisement
ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಉರುಫ್ ಸ್ಟಾರ್ ಚಂದ್ರು ಪರ ಸ್ಥಳೀಯ ಶಾಸಕ ನರೇಂದ್ರಸ್ವಾಮಿ ಜೊತೆಗೂಡಿ ಸ್ಟಾರ್ ಚಂದ್ರು ಮುಂದೆ ಇಟ್ಟುಕೊಂಡು ಪ್ರಚಾರ ಮಾಡಲಿದ್ದಾರೆ. ಇಂದು ಬೆಳಗ್ಗೆ 9:45ರಿಂದ ಸಂಜೆ 4:45ರವರೆಗೆ ನಟ ದರ್ಶನ್ ಸ್ಟಾರ್ ಚಂದ್ರು ಪರ 17 ಗ್ರಾಮಗಳಲ್ಲಿ ಅಬ್ಬರದ ಮತಯಾಚನೆ ಮಾಡಲಿದ್ದಾರೆ. ಇದನ್ನೂ ಓದಿ: ಜೈ ಶ್ರೀರಾಮ್ ಅಂದಿದ್ದಕ್ಕೆ ಕಿರಿಕ್- ಅಲ್ಲಾಹು ಮಾತ್ರ ಕೂಗಬೇಕು ಅಂತೇಳಿ ಅಟ್ಯಾಕ್
Advertisement
ದರ್ಶನ್ ಪ್ರಚಾರ ನಡೆಸುವ ಸಮಯ ಮತ್ತು ಗ್ರಾಮ:
9:45 – ಹಲಗೂರು
10:15 – ಟಿ.ಕೆ.ಹಳ್ಳಿ
11:00 – ಹುಸ್ಕೂರು
11:45 – ಹಾಡ್ಲಿ ಸರ್ಕಲ್
12:15 – ಬೆಳವಾಡಿ
12.45 – ಬಿಜಿ ಪುರ
1:00 – ಸರಗೂರು ಹ್ಯಾಂಡ್ ಪೋಸ್ಟ್
1:15 – ಪೂರಿಗಾಲಿ
2:30 – ಟಿ.ಕಾಗೇಪುರ
2:45 – ದುಗ್ಗನಹಳ್ಳಿ
3:00 – ಬಂಡೂರು
3:15 – ಹಿಟ್ಟನಹಳ್ಳಿ ಕೊಪ್ಪಲು
3:30 – ಮಿಕ್ಕೆರೆ
3:45 – ಕಿರುಗಾವಲು
4:00 – ಕಿರುಗಾವಲು ಸಂತೇಮಾಳ
4:30 – ಚನ್ನಪಿಳ್ಳೆ ಕೊಪ್ಪಲು
4:45 – ಮಳವಳ್ಳಿ ಟೌನ್
Advertisement
ಒಟ್ಟಾರೆ ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರ ಮಾಡಿದ್ದ ದರ್ಶನ್ ಇಂದು ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡಲಿದ್ದಾರೆ. ದರ್ಶನ್ ಪ್ರಚಾರ ಹೆಚ್‌ಡಿಕೆ ಕಟ್ಟಿ ಹಾಕಲು ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತೆ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಪ್ರೆಸಿಡೆಂಟ್ ಸಿದ್ದರಾಮಯ್ಯ, ಸಿಎಂ ಡಿಕೆ ಶಿವಕುಮಾರ್- ಚರ್ಚೆಗೆ ಗ್ರಾಸವಾಯ್ತು ರಾಗಾ ಭಾಷಣ