ಮೈಸೂರು: ಕಾವೇರಿ (Cauvery) ಹೋರಾಟಕ್ಕೆ ಕನ್ನಡ ನಟರು ಸಕ್ರಿಯರಾಗಿ ಬರುತ್ತಿಲ್ಲ ಎಂಬ ಕೂಗಿಗೆ ನಟ ದರ್ಶನ್ (Darshan) ಗರಂ ಆಗಿದ್ದಾರೆ.
ಮೈಸೂರು (Mysuru) ಜಿಲ್ಲೆಯ ಬನ್ನೂರಿನಲ್ಲಿ ಈ ಬಗ್ಗೆ ಮಾತನಾಡಿರೋ ನಟ ದರ್ಶನ್, ಕಾವೇರಿ ಹೋರಾಟದ ಬಗ್ಗೆ ಮೌನ ಮುರಿದಿದ್ದು ನಟರು ಹೋರಾಟಕ್ಕೆ ಬರುತ್ತಿಲ್ಲ ಎಂಬ ಕೂಗಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ದರ್ಶನ್, ಸುದೀಪ್, ಶಿವಣ್ಣ, ಯಶ್, ಅಭಿ ಮಾತ್ರ ನಿಮ್ಮ ಕಣ್ಣಿಗೆ ಕಾಣೋದಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಜನತಾ ದರ್ಶನ
ಮೊನ್ನೆ ಬಂದ ತಮಿಳು ಚಿತ್ರದಲ್ಲಿ ಕರ್ನಾಟಕದಲ್ಲೇ ಕೋಟಿ ಕೋಟಿ ಮಾಡಿದವನು ನಿಮಗೆ ಕಾಣ್ತಿಲ್ವ? ಕರ್ನಾಟಕದಲ್ಲೇ ಒಬ್ಬ ವಿತರಕ ತಮಿಳು ಚಿತ್ರದಿಂದ ಕರ್ನಾಟಕದದಲ್ಲೇ 36 ಕೋಟಿ ರೂ. ಮಾಡಿದ. 6 ಕೋಟಿ ಹಾಕಿ 36 ಕೋಟಿ ಮಾಡಿದ. ಅವನಿಗೆ ಯಾಕೆ ನೀವು ಕೇಳಲ್ಲ? ನಾವು ಮಾತ್ರ ನಿಮಗೆ ಕಾಣೋದಾ? ನಿಮಗೆ ಪ್ರಶ್ನೆ ಕೇಳ್ತಾ ಇದ್ದೀನಿ ಹೇಳಿ ಎಂದು ಜನರನ್ನು ದರ್ಶನ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]