– ನಟ ದರ್ಶನ್ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಿ 25 ವಸಂತ
– ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಡಿ-25 ಅದ್ಧೂರಿ ಕಾರ್ಯಕ್ರಮ
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ (Darshan) ಅವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟು ಇಲ್ಲಿಗೆ 25 ವಸಂತ ತುಂಬಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ D-25 (Belli Parva D-25) ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿದೆ.
Advertisement
ಸಂಗೀತ ನಿರ್ದೇಶಕ ಹರಿಕೃಷ್ಣ ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟಿತು. ದರ್ಶನ್ ನಟಿಸಿರುವ ಚಿತ್ರಗಳ ಗೀತೆಗಳಿಗೆ ನೃತ್ಯ ಕಲಾವಿದರು ಹೆಜ್ಜೆ ಹಾಕಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿ ಜರ್ನಿಯ 25 ವಸಂತಗಳು ಒಂದೇ ವೇದಿಕೆಯಲ್ಲಿ ರಿವೀಲ್ ಆಯಿತು. ಸಮಾರಂಭದಲ್ಲಿ ತಾರಾ ಬಳಗವೇ ಭಾಗಿಯಾಗಿತ್ತು. ಅಲ್ಲದೇ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಹ ಪಾಲ್ಗೊಂಡಿದ್ದರು. ಇದನ್ನೂ ಓದಿ: ಜಗ್ಗೇಶ್ ಹುಲಿ ಉಗುರು ಕೇಸ್ ನಲ್ಲಿ ಸಹಾಯಕ್ಕೆ ಬಂದಿದ್ದು ಡಿಕೆಶಿ
Advertisement
Advertisement
ರಂಗನಾಥಸ್ವಾಮಿ ದೇವಾಲಯದ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ ಬಾಸ್‌ಗೆ ಅಭಿನಂದನೆ ಸಲ್ಲಿಸುವುದನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಅಭಿಮಾನಿಗಳ ಆಗಮಿಸಿದ್ದರು. ಇಂಡವಾಳು ಸಚ್ಚಿದಾನಂದರು ಕಾರ್ಯಕ್ರಮ ಆಯೋಜಿಸಿದ್ದಾರೆ.
Advertisement
ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮಕ್ಕೆ ಆಗಮಿಸಿದ ದರ್ಶನ್ ಮೊದಲಿಗೆ ಸುತ್ತೂರು ಶ್ರೀಗಳ ಪಾದ ಮುಟ್ಟಿ ಆಶೀರ್ವಾದ ಪಡೆದರು. ದಾಸ ಎಂಟ್ರಿಯಾಗ್ತಿದ್ದಂತೆ ಅಭಿಮಾನಿಗಳಿಂದ ಜೈಕಾರದ ಸುರಿಮಳೆ ಸುರಿಸಿದರು. ಪಟಾಕಿಗಳು ಸಿಡಿಸಲಾಯಿತು. ಶಿಳ್ಳೆ, ಚಪ್ಪಾಳೆ ಮೂಲಕ ದರ್ಶನ್‌ಗೆ ಗ್ರ್ಯಾಂಡ್ ವೆಲ್‌ಕಮ್ ಕೋರಲಾಯಿತು. ಇದನ್ನೂ ಓದಿ: ‘ಸಿಂಧೂರ ಲಕ್ಷ್ಮಣ’ನಿಗೆ ನಿರ್ಮಾಪಕ ಯಾರು?: ದರ್ಶನ್ ಚಿತ್ರದ ಬಗ್ಗೆ ಚರ್ಚೆ
ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸಿದ ದರ್ಶನ್‌ಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಸುತ್ತೂರು ಶ್ರೀಗಳು ಅಭಿನಂದಿಸಿದರು. ಚಾಮುಂಡೇಶ್ವರಿ ವಿಗ್ರಹ ನೀಡಿ ಹರಸಿದರು. ರಜತ ಮಹೋತ್ಸವದಂತೆ ಸುವರ್ಣ ಮಹೋತ್ಸವ ಪೂರೈಸಲಿ ಎಂದು ಹಾರೈಸಿದರು.
ಡಿ-25 ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಮಾತನಾಡಿ, ಕಲಾಕ್ಷೇತ್ರಕ್ಕೆ ಕಲಾವಿದರ ಕೊಡುಗೆ ಅಪಾರ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಮನೆ ಮಾತಾಗಿದ್ದರು. ಮೇರು ಕಲಾವಿದ ದರ್ಶನ್ ಮೈಸೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಅದು ಸಂತೋಷ ತಂದಿದೆ. ಸುವರ್ಣ ಮಹೋತ್ಸವ ಕೂಡ ಆಚರಿಸಿ ದರ್ಶನ್. ಭಗವಂತನ ಆಶೀರ್ವಾದ ಅವರ ಮೇಲೆ ಇರಲಿ ಎಂದ ಶ್ರೀಗಳು ಹರಸಿದರು. ಇದನ್ನೂ ಓದಿ: ದರ್ಶನ್ ಚಿತ್ರಜೀವನದ ಬೆಳ್ಳಿ ಹಬ್ಬ: ಶ್ರೀರಂಗಪಟ್ಟಣದತ್ತ ಸೆಲೆಬ್ರಿಟಿಗಳು
ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಕಲೆಗೆ ಸಾಕಷ್ಟು ಶಕ್ತಿ ಇದೆ. ದರ್ಶನ್ ಕಲೆಗಾಗಿ ತಮ್ಮ ಬದುಕನ್ನ ಅರ್ಪಿಸಿದ್ದಾರೆ. ಸಾಧನೆ ಮೂಲಕ ಎತ್ತರ ಏರಬಹುದು. ಆದರೆ ಯಶಸ್ಸು ಉಳಿಸಿಕೊಳ್ಳುವುದು ಕಷ್ಟ. ಅಭಿಮಾನಿಗಳ ಆಶೀರ್ವಾದ ನಿಮ್ಮ ಮೇಲಿದೆ ಎಂದು ನುಡಿದರು.