ರಾಯಚೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ (Darshan) ಬಳ್ಳಾರಿ ಜೈಲಿಗೆ ಸ್ಥಳಾಂತರ ಹಿನ್ನೆಲೆ ರಾಯಚೂರಿನ ಸಿಂಧನೂರು ತಾಲ್ಲೂಕಿನ ಚಿರತನಾಳ ಗ್ರಾಮದಲ್ಲಿ ದರ್ಶನ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ತಮಿಳು ನಟಿ ರೇಖಾ ನಾಯರ್ ಕಾರು ಅಪಘಾತ: ವ್ಯಕ್ತಿಯೋರ್ವ ಸಾವು
ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ನಿನ್ನೆ (ಆ.28) ರಾತ್ರಿ ದರ್ಶನ್ ಹೆಸರಿನಲ್ಲಿ ದೇವರಿಗೆ ಪೂಜೆ ಸಲ್ಲಿಸಲಾಗಿದೆ. ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಹಿನ್ನೆಲೆ ನಿನ್ನೆ ರಾತ್ರೋ ರಾತ್ರಿ ಪೂಜೆ ಮಾಡಿಸಿದ್ದಾರೆ. ಶರಣಬಸವೇಶ್ವರ ದೇವರ ಮೂರ್ತಿ ಪಕ್ಕ ದರ್ಶನ್ ಫೋಟೋ ಇಟ್ಟು ವಿಶೇಷ ಪೂಜೆ ಸಲ್ಲಿಸಿ ಅಭಿಮಾನ (Fans) ಮೆರೆದಿದ್ದಾರೆ.
ದರ್ಶನ್ ಸೇಫಾಗಿ ಬರಲಿ, ಶೀಘ್ರವೇ ಜೈಲಿನಿಂದ ಬಿಡುಗಡೆ ಆಗಲಿ ಅಂತ ಪೂಜೆ ಮಾಡಲಾಗಿದೆ. ಪೂಜೆ ಬಳಿಕ ಗ್ರಾಮದಲ್ಲಿ ಅನ್ನ ಸಂತರ್ಪಣೆ ಮಾಡಿದ್ದಾರೆ. ಶ್ರಾವಣ ಮಾಸದ ಪೂಜೆಯ ಜೊತೆ ದರ್ಶನ್‌ಗಾಗಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.