– ನಾಳೆ ರಕ್ತಚರಿತ್ರೆ ಕಥೆ ಮುಂದುವರಿಸ್ತೀನಿ ಎಂದ ಎಸ್‌ಪಿಪಿ
ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ (Darshan) ಇಂದು ಕೂಡ ಜಾಮೀನು ಸಿಗಲಿಲ್ಲ. ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಬುಧವಾರಕ್ಕೆ ಮುಂದೂಡಿದೆ.
57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಮಂಗಳವಾರ ವಿಚಾರಣೆ ನಡೆಯಿತು. ಆಕ್ಷೇಪಣಾ ವಾದವನ್ನು ಎಸ್‌ಪಿಪಿ ಪ್ರಸನ್ನಕುಮಾರ್ ಮಂಡಿಸಿದರು. ಪವಿತ್ರಗೌಡ, ದರ್ಶನ್ ಮತ್ತು ರವಿಶಂಕರ್ ಪಾತ್ರದ ಬಗ್ಗೆ ವಾದ ಮಂಡನೆ ಮಾಡಿದರು. ಇದನ್ನೂ ಓದಿ: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ, ಜನರ ತೀರ್ಪನ್ನು ಒಪ್ಪಿಕೊಳ್ತೀವಿ: ಡಿಸಿಎಂ ಡಿ.ಕೆ.ಶಿವಕುಮಾರ್
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಓದಿದ ಎಸ್‌ಪಿಪಿ, ಬಲ ಭಾಗದಲ್ಲಿ ರೇಣುಕಾಸ್ವಾಮಿ ಪಕ್ಕೆಲುಬು ಮುರಿದು ಶ್ವಾಸಕೋಶಕ್ಕೆ ಚುಚ್ಚಿದೆ. ಎಡಭಾಗದಲ್ಲಿ ಕೂಡ ಪಕ್ಕೆಲುಬುಗಳು ಮುರಿದಿದೆ. 17 ಬಲವಾದ ಪೆಟ್ಟುಗಳು ಶ್ವಾಸಕೋಶ, ಪಕ್ಕೆಲುಬುಗಳ ಬಳಿಯೇ ಬಿದ್ದಿದೆ. ಮರಣೋತ್ತರ ಪರೀಕ್ಷೆ ತಡ ಅಂದಿದ್ದಾರೆ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಉತ್ತರ ಬಂದಿದೆ. ರೇಣುಕಾಸ್ವಾಮಿ ಸಾವು ಸಂಭವಿಸುವ ಮುನ್ನ ಎಲ್ಲಾ ಪೆಟ್ಟುಗಳು ಬಿದ್ದಿವೆ ಅಂತಾ ಇದೆ. ಸಾವು ಸಂಭವಿಸಿದ ಬಳಿಕ ಯಾವುದೇ ಬಲವಾದ ಪೆಟ್ಟು ಬಿದ್ದಿಲ್ಲ ಎಂದು ತಿಳಿಸಿದರು.
ಸೋಡಿಯಂ ಪರೀಕ್ಷೆ ನಡೆಸಲಾಗಿದೆ. 39 ಮಾರಣಾಂತಿಕ ಹಲ್ಲೆ ಆಗಿದೆ. ಮರಣೋತ್ತರ ಪರೀಕ್ಷೆಯನ್ನು ವಿಡಿಯೋಗ್ರಫಿ ಮಾಡಲಾಗಿದೆ. ಇದರಲ್ಲಿ ಕೂಡ ಯಾವುದೇ ಮರೆಮಾಚುವ ಕೆಲಸ ಆಗಿಲ್ಲ. 13 ಬಲವಾದ ಪೆಟ್ಟುಗಳನ್ನು ವೈದ್ಯರು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಹಿಡಿದಿದ್ದಾರೆ. ಇದೆಲ್ಲವೂ ಕೂಡ ಬಹಿರಂಗವಾಗಿ ಕಾಣುವ ಗಾಯಗಳು. ತಲೆಗೆ ಲಾರಿಯನ್ನು ಬಲವಾಗಿ ಗುದ್ದಿಸಿರೋದು ಗೊತ್ತಾಗಿದೆ. ಇನ್ನೊಂದು ಬಲವಾದ ಪೆಟ್ಟು ಬಿದ್ದಿರೋದು ಎದೆಯ ಮೇಲೆ. ವೈದ್ಯರು ಹೇಳ್ತಾರೆ, ಇದು ಬಲವಾಗಿ ಮನುಷ್ಯ ತುಳಿದಿರೋದ್ರಿಂದ ಅಂತಾ. ಮರ್ಮಾಂಗದ ಮೇಲೂ ಕೂಡ ಭಯಂಕರವಾದ ಹಲ್ಲೆ ಮಾಡಿದ್ದಾರೆ. ಮರ್ಮಾಂಗದ ವೃಷಣ ಚೀಲದಲ್ಲೂ ರಕ್ತಸ್ರಾವ ಆಗಿದೆ. ಇದರಲ್ಲಿ ಗೊತ್ತಾಗ್ತಾ ಇದೆ. ದರ್ಶನ್ ಪವನ್‌ಗೆ ರೇಣುಕಾಸ್ವಾಮಿ ಪ್ಯಾಂಟ್ ಬಿಚ್ಚಲು ಹೇಳಿದ್ದ ಅಂತಾ. ಇದನ್ನ ಪ್ರತ್ಯಕ್ಷದರ್ಶಿ ಹೇಳಿದ್ದಾರೆ ಎಂದು ವಾದ ಮಂಡಿಸಿದರು. ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ನಟ ಶ್ರೀಮುರಳಿ
ರೇಣುಕಾಸ್ವಾಮಿಯ ಸಾವಿನ ಸಮಯ ತಿಳಿದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಊಟ ಮಾಡಿದ ಒಂದು ಅಥವಾ ಎರಡು ಗಂಟೆಯ ಬಳಿಕ ಸಾವು ಸಂಭವಿಸಿದೆ ಅಂತಾ. ರೇಣುಕಾಸ್ವಾಮಿ ಚಿತ್ರದುರ್ಗದಲ್ಲಿ ಯಾವುದೇ ಊಟ ಮಾಡಿಲ್ಲ. ಹಾಗಾದ್ರೆ ಪಟ್ಟಣಗೆರೆ ಶೆಡ್‌ನಲ್ಲಿಯೇ ಬಲವಂತವಾಗಿ ಊಟ ಮಾಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯೂ ಮತ್ತೊಂದು ಮಹತ್ವದ ಅಂಶವನ್ನು ಬಹಿರಂಗ ಪಡಿಸಿದೆ. 17 ಬಲವಾದ ಪೆಟ್ಟು ಪಕ್ಕೆಲುಬುಗಳ ಮೇಲೆ ಬಿದ್ದಿದೆ. 39 ಗಾಯಗಳು ದೇಹದ ಮೇಲೆ ಇದೆ. ಇದೊಂದು ಭಯಾನಕ ರಕ್ತ ಚರಿತ್ರೆ ಅಂತಾ ಕರೆಯಬೇಕು. ಪಕ್ಕೆಲುಬುಗಳು ಮುರಿದಿದೆ. ಶ್ವಾಸಕೋಶ ಪಂಚರ್ ಆಗಿದೆ. ತಲೆಯಲ್ಲಿ ತೀವ್ರ ರಕ್ತಸಾವ್ರ ಆಗಿದೆ. ಮರ್ಮಾಂಗದಲ್ಲಿ ರಕ್ತಸ್ರಾವ ಆಗಿದೆ. ಇದೆಲ್ಲವೂ ದರ್ಶನ್‌ರಿಂದ ಮತ್ತು ದರ್ಶನ್ ಅಣತಿಯಂತೆ ನಡೆದಿದೆ. ಇದು ಅರೇಬಿಯನ್ ನೈಟ್ಸ್ ಸ್ಟೋರಿ ಅಲ್ಲ ಎಂದು ಎಸ್‌ಪಿಪಿ ತಿಳಿಸಿದರು.
ಅರೇಬಿಯನ್ ನೈಟ್ಸ್ ಸ್ಟೋರಿ ಎಂದು ದರ್ಶನ್ ಪರ ವಕೀಲರು ಹೇಳಿದ್ದರು. ಅದಕ್ಕೆ ಪ್ರತಿಯಾಗಿ ವಾದಿಸಿದ ಎಸ್‌ಪಿಪಿ, ಈ ರೀತಿಯ ಕಥೆಗಳು ಅರೇಬಿಯನ್ ನೈಟ್ಸ್ಗಳಲ್ಲೂ ಕೇಳಿಲ್ಲ. ನಾಳೆ ರಕ್ತಚರಿತ್ರೆ ಕಥೆ ಮುಂದುವರೆಸ್ತೇನೆ ಎಂದರು. ಅರ್ಜಿ ವಿಚಾರಣೆಯನ್ನು 57ನೇ ಸಿಸಿಎಚ್ ಕೋರ್ಟ್ ನಾಳೆ ಮಧ್ಯಾಹ್ನ 12 ಗಂಟೆಗೆ ಮುಂದೂಡಿದೆ. ಇದನ್ನೂ ಓದಿ: 70th National Film Awards: ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ