ಮೈಸೂರು: ಕಾರ್ ಅಪಘಾತಕ್ಕೂ ಮುನ್ನ ನಟ ದರ್ಶನ್ ಹಾಗೂ ತಂಡ ಪಾರ್ಟಿಯಲ್ಲಿ ಪಾಲ್ಗೊಂಡಿತ್ತು ಎಂಬುದಾಗಿ ಇದೀಗ ತಿಳೀದುಬಂದಿದೆ.
ಹೌದು. ಮೈಸೂರಿನಲ್ಲಿ ಹಿರಿಯ ನಟ ದೇವರಾಜ್ ಅವರ ಹುಟ್ಟುಹಬ್ಬದ ಪಾರ್ಟಿಯಿತ್ತು. ಇನ್ಫೋಸಿಸ್ ಬಳಿಯಿರುವ ಹೊಸ ಪಬ್ ಒಂದರಲ್ಲಿ ನಡೆದ ಪಾರ್ಟಿಯಲ್ಲಿ ದರ್ಶನ್, ದೇವರಾಜ್, ಪ್ರಜ್ವಲ್, ಪ್ರಣಮ್, ಹಾಸ್ಯನಟ ವಿಶ್ವ ಮತ್ತಿತರರು ಭಾಗಿಯಾಗಿದ್ದರು. ದರ್ಶನ್ ಅಂಡ್ ಟೀಂ ದೇವರಾಜ್‍ಗೆ ಶುಭಾಶಯ ತಿಳಿಸಿ ಪಾರ್ಟಿ ಮಾಡಲಾಗಿತ್ತು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಪಾರ್ಟಿಯ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಪಾರ್ಟಿ ಮುಗಿಸಿಕೊಂಡು ಸ್ನೇಹಿತರೊಬ್ಬರ ಮನೆಯಲ್ಲಿ ಊಟ ಮಾಡಿದ್ದಾರೆ. ನಂತರ ಎಲ್ಲರೂ ಅಲ್ಲಿಂದ ಸೋಮವಾರ ನಸುಕಿನ ಜಾವ ಬೆಂಗಳೂರಿನತ್ತ ಹೊರಟಿದ್ದ ಸಂದರ್ಭದಲ್ಲಿ 2.30ರರ ವೇಳೆಗೆ ಈ ಅವಘಡ ಸಂಭವಿಸಿದೆ. ಇದನ್ನೂ ಓದಿ: ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಿಕ್ತು ಬಿಗ್ ಟ್ವಿಸ್ಟ್- ಸ್ನೇಹಿತನ ವಿರುದ್ಧವೇ ದೂರು ಕೊಡಿಸಿದ ದಾಸ
Advertisement
ಈ ಪಾರ್ಟಿಯಲ್ಲಿ ಮದ್ಯಪಾನ ಸೇವನೆ ಮಾಡಿದ್ದಾರೆಯೋ ಇಲ್ಲವೋ ಎನ್ನುವುದು ವೈದ್ಯಕೀಯ ಪರಿಕ್ಷೆಯ ವರಂದಿ ಪ್ರಕಟವಾದ ನಂತರವಷ್ಟೇ ಗೊತ್ತಾಗಲಿದೆ.
Advertisement
ಘಟನೆಯೇನು?:
ಶನಿವಾರ ನಟರಾದ ದರ್ಶನ್, ಸೃಜನ್ ಲೋಕೇಶ್ ಹಾಗೂ ದೇವರಾಜ್ ಕುಟುಂಬ ಮೈಸೂರು ಮೃಗಾಲಯಕ್ಕೆ ತೆರಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದರು. ಆ ಬಳಿಕ ಮೈಸೂರಿನಲ್ಲೇ ಉಳಿದುಕೊಂಡು ಸೋಮವಾರ ಮುಂಜಾನೆ ಅಲ್ಲಿಂದ ಹೊರಟಿದ್ದರು ಎನ್ನಲಾಗಿತ್ತು. ಇದನ್ನೂ ಓದಿ: ದರ್ಶನ್ ಅಪಘಾತವಾಗಿದ್ದ ಕಾರ್ ಮಿಸ್ಸಿಂಗ್ ಸ್ಟೋರಿಯ ಇನ್‍ಸೈಡ್ ಸ್ಟೋರಿ ಇಲ್ಲಿದೆ
ಕಾರ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮೈಸೂರು ಹೊರವಲಯದ ಹಿನಕಲ್ ಬಳಿ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದರ್ಶನ್ ಅವರ ಬಲಗೈನ ಮೂಳೆ ಮುರಿದಿತ್ತು. ದರ್ಶನ್ ಜೊತೆಗೆ ದೇವರಾಜ್ ಹಾಗೂ ಅವರ ಪುತ್ರ ಪ್ರಜ್ವಲ್ ದೇವರಾಜ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿತ್ತು. ಕೂಡಲೇ ಎಲ್ಲರನ್ನೂ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಬಲಗೈಗೆ ರಾಡ್ ಅಳವಡಿಸಲಾಗಿದ್ದು, 24 ಹೊಲಿಗೆ ಹಾಕಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ದೇವರಾಜ್ ಹಾಗೂ ಪುತ್ರ ಪ್ರಜ್ವಲ್ ದೇವರಾಜ್ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿದ್ದು, ನಟ ದರ್ಶನ್ ಇಂದು ಆಸ್ಪತ್ರೆಯಲ್ಲೇ ಉಳಿದುಕೊಳ್ಳಲಿದ್ದಾರೆ ಎಂಬುದಾಗಿ ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಲಗೈಗೆ ರಾಡ್ ಅಳವಡಿಸಿ 24 ಹೊಲಿಗೆ- ಯಜಮಾನನ ಶಸ್ತ್ರಚಿಕಿತ್ಸೆ ಯಶಸ್ವಿ
ಅಭಿಮಾನಿಗಳಿಗೆ ದರ್ಶನ್ ಮನವಿ:
ದರ್ಶನ್ ಆಸ್ಪತ್ರೆ ಸೇರುತ್ತಿದ್ದಂತೆಯೇ ಇತ್ತ ಅಭಿಮಾನಿಗಳು ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದರು, ಹೀಗಾಗಿ ದರ್ಶನ್ ಅವರು ಆಸ್ಪತ್ರೆಯಿಂದಲೇ ವಾಯ್ಸ್ ರೆಕಾರ್ಡ್ ಮಾಡಿ ಅದನ್ನು ವಾಟ್ಸಪ್ ನಲ್ಲಿ ಕಳುಹಿಸುವ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವೈದ್ಯರಿಂದ ದರ್ಶನ್, ದೇವರಾಜ್ X-RAY ಬಿಡುಗಡೆ: ಎಲ್ಲೆಲ್ಲಿ ಗಾಯವಾಗಿದೆ?
ಎಲ್ಲರಿಗೂ ನಮಸ್ಕಾರಪ್ಪ ನನ್ನ ಅನ್ನದಾತರು, ಅಭಿಮಾನಿಗಳಲ್ಲಿ ನನ್ನದೊಂದು ರಿಕ್ವೆಸ್ಟ್. ದಯವಿಟ್ಟು ನನಗೆ ಏನೂ ಆಗಿಲ್ಲ. ಆರಾಮಾಗಿರಿ.. ಇನ್ನು ಒಂದು ದಿನ ಆಸ್ಪತ್ರೆಯಲ್ಲಿದ್ದು, ನಾಳೆ ಬರುತ್ತೇನೆ. ಆ ಬಳಿಕ ಎಲ್ಲರಿಗೂ ಸಿಗುತ್ತೇನೆ. ಹೀಗಾಗಿ ದಯವಿಟ್ಟು ಯಾರೂ ಆಸ್ಪತ್ರೆಯತ್ತ ಬರಬೇಡಿ. ಇದೊಂದು ನನ್ನ ಮನವಿ ಅಂತಾನೇ ತಿಳಿದುಕೊಳ್ಳಿ. ಯಾಕಂದ್ರೆ ಬೇರೆ ರೋಗಿಗಳು ಆಸ್ಪತ್ರೆಯಲ್ಲಿದ್ದಾರೆ. ಹೀಗಾಗಿ ಅವರಿಗೆ ತೊಂದರೆಯಾಗುತ್ತದೆ ಎಂಬುದು ನನ್ನ ಭಾವನೆ. ಒಟ್ಟಿನಲ್ಲಿ ಎಲ್ಲರೂ ಆರಾಮಾಗಿರಿ. ನಿಮ್ಮ ದರ್ಶನ್ ಗೆ ಏನೂ ಆಗಿಲ್ಲ. ಧನ್ಯವಾದ ಅಂತ ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv