ಸಿನಿಮಾ ಎಂಬ ಸುಂದರ ಲೋಕ ಎಂಥವರನ್ನು ಸೆಳೆದು ಬಿಡುತ್ತದೆ. ಎಷ್ಟೋ ಜನ ತಮಗಿರುವ ಫ್ಯಾಷನ್‌ಗೋಸ್ಕರ ಇಂಡಸ್ಟ್ರಿಗೆ ಬಂದರೆ ಇನ್ನು ಎಷ್ಟೋ ಜನ ತಮ್ಮ ಪ್ರತಿಭೆಯ ಅನಾವರಣಕ್ಕೋಸ್ಕರ ಕಾಲಿಡುತ್ತಾರೆ. ಇಲ್ಲಿ ನಿರ್ದೇಶಕರಿಗೆ ಪ್ರತಿಭೆ ಇರಬೇಕು. ನಿರ್ಮಾಪಕರಿಗೆ ಸಿನಿಮಾ ಮೇಲೆ ಜವಾಬ್ದಾರಿ ಇರಬೇಕು. ಆಗ ಮಾತ್ರ ಅದ್ಭುತವಾದೊಂದು ಸಿನಿಮಾ ಸೆಟ್ಟೇರುವುದಕ್ಕೆ ಸಾಧ್ಯ. ಇಷ್ಟೆಲ್ಲಾ ಪೀಠಿಕೆ ಹಾಕುವುದಕ್ಕೆ ಕಾರಣ ‘ಗಾಳಿಗುಡ್ಡ’ ಸಿನಿಮಾ. ಇದನ್ನೂ ಓದಿ:ಹೊಸ ಹೇರ್ ಸ್ಟೈಲಿನಲ್ಲಿ ಮಿಂಚಿದ ದುನಿಯಾ ವಿಜಯ್ ಪುತ್ರಿ
Advertisement
ಇತ್ತಿಚೆಗಷ್ಟೇ ‘ಗಾಳಿಗುಡ್ಡ’ (Galigudda Film) ಸಿನಿಮಾ ಮುಹುರ್ತ ಕಂಡಿದೆ. ನಾಗರಭಾವಿ ಹನುಮಗಿರಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ಮುಹೂರ್ತ ಮುಗಿಸಿದೆ. ಈ ಸಿನಿಮಾಕ್ಕೆ ರಘು ಅಥರ್ವ ಎಂಬುವವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಿರ್ದೇಶನಕ್ಕೆ ಹೊಸಬರೇ ಆದರೂ ಪ್ರತಿಭೆ ಉಳ್ಳವರು. ನಿರ್ದೇಶನದ ಕನಸು ಹೊತ್ತ ರಘು ಅಥರ್ವ ಅದಕ್ಕೆಂದೆ ಒಂದಷ್ಟು ತಯಾರಿ, ತರಬೇತಿಗಳನ್ನು ಮಾಡಿಕೊಂಡು ಒಂದೊಳ್ಳೆಯ ಚಿತ್ರಕ್ಕೆ ನಿರ್ದೇಶನ ಮಾಡಲು ರೆಡಿಯಾಗಿದ್ದಾರೆ.
Advertisement
ಈ ಸಿನಿಮಾಗೆ ರಘು ಪವನ್ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾ ಮೇಲಿನ ಆಸಕ್ತಿ ಇಂದು ನಿರ್ಮಾಣಕ್ಕೆ ಕರೆದು ನಿಲ್ಲಿಸಿದೆ. ರಘು ಪವನ್ ಒಬ್ಬ ಪ್ಯಾಷನೇಟ್ ನಿರ್ಮಾಪಕ ಎಂಬುದೇ ಇಡೀ ಚಿತ್ರತಂಡದ ಖುಷಿಗೆ ಕಾರಣವಾಗಿದೆ. ಸಿನಿಮಾ ಮೇಲೆ ಪ್ಯಾಷನ್ ನಿರ್ಮಾಪಕನಿಗಿದ್ದರೆ ಆ ಸಿನಿಮಾದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ತಂತ್ರಜ್ಞರು, ಕಲಾವಿದರು ಖುಷಿ ಖುಷಿಯಾಗಿ ಸಿನಿಮಾ ಮುಗಿಸುತ್ತಾರೆ. ರಘು ಪವನ್ ಕೂಡ ಅದೇ ರೀತಿ ಇರುವವರು. ಇದನ್ನೂ ಓದಿ:ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ವಿಜಯ್ ದೇವರಕೊಂಡ
Advertisement
ಮುಹೂರ್ತ ಮುಗಿಸಿಕೊಂಡಿರುವ ‘ಗಾಳಿಗುಡ್ಡ’ ಸಿನಿಮಾ ಕಳಸ, ಕುದರೆಮುಖ, ಚಿಕ್ಕಮಗಳೂರು ಮುಂತಾದ ಜಾಗಗಳಲ್ಲಿ ಶೂಟಿಂಗ್ ಮಾಡಲು ಪ್ಲ್ಯಾನ್ ಮಾಡಿದೆ. ಎಲ್ಲಾ ಅಂದುಕೊಂಡಂತೆ ಆದರೆ 2025 ಬೇಸಿಗೆಗೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
Advertisement
ಮಲ್ಯಾಳಮ್ ಸಂಗೀತ ನಿರ್ದೇಶಕ ರಾಹುಲ್ ಸುಬ್ರಮಣ್ಯನ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶಾಖಾಹಾರಿ ಖ್ಯಾತಿಯ ವಿಶ್ವಜಿತ್ ರಾವ್ ಛಾಯಾಗ್ರಹಣ ಜವಾಬ್ದಾರಿ ಹೊತ್ತಿದ್ದಾರೆ.
ಉಳಿದಂತೆ ‘ಗೌರಿ ಶಂಕರ’ ಖ್ಯಾತಿಯ ಯಶ್ವಂತ್ ಬೆಟ್ಟಸ್ವಾಮಿ, ದರ್ಶಕ್, ಅರ್ಚನಾ ಕೊಟ್ಟಿಗೆ (Archana Kottige), ಮಂಜುನಾಥ್ ಹೆಗ್ಡೆ, ದೀಪಕ್ ರೈ, ಶ್ರೀವತ್ಸ, ಸಂದ್ಯಾ, ರೇಖಾ ಕೂಡ್ಲಿಗೆ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ.