ಸ್ಯಾಂಡಲ್‌ವುಡ್ ನಟ ಡಾಲಿ (Daali) ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಸುತ್ತೂರು ಮಠಕ್ಕೆ (Sri Suttur Mutt) ಭೇಟಿ ಕೊಟ್ಟಿದ್ದಾರೆ. ಈ ವೇಳೆ, ನಂದಿ ಕಂಬ ಹೊತ್ತು ಡಾಲಿ ಕುಣಿದಿದ್ದಾರೆ. ಇದನ್ನೂ ಓದಿ:ಮೈಸೂರಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ಕಿಚ್ಚ ಸುದೀಪ್
ಧನ್ಯತಾ (Dhanyatha) ಜೊತೆ ಡಾಲಿ ಮದುವೆಗೆ ಸಜ್ಜಾಗಿರುವ ಹಿನ್ನೆಲೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಶಿವರಾತ್ರಿ ಶಿವಯೋಗಿಗಳ 1065ನೇ ಜಯಂತಿ ಹಿನ್ನೆಲೆ ನಂದಿ ಧ್ವಜಕ್ಕೆ ಪೂಜೆ ಜರುಗಿದೆ. ಬಳಿಕ ನಂದಿ ಧ್ವಜ ಹಿಡಿದು ಡಾಲಿ ಕುಣಿದಿದ್ದಾರೆ. ಡಾಲಿ, ಧನ್ಯತಾ ಜೊತೆ ನಟ ನಾಗಭೂಷಣ್ ಕೂಡ ಸಾಥ್ ನೀಡಿದ್ದಾರೆ.
ಇನ್ನೂ ಫೆ.16ರಂದು ಮೈಸೂರಿನಲ್ಲಿ ಡಾಲಿ ಮದುವೆ ಜರುಗಲಿದೆ. ಈ ಮದುವೆಗೆ ರಾಜಕೀಯ ಗಣ್ಯರು, ಸಿನಿಮಾ ಸ್ಟಾರ್‌ಗಳು ಭಾಗಿಯಾಗಲಿದ್ದಾರೆ.