ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಇಂದು (ಡಿ.16) ಅದ್ಧೂರಿಯಾಗಿ ಚಾಲನೆ ನೀಡಲಾಗಿದ್ದು, ಶಿವಣ್ಣ, ಡಾಲಿ, ದುನಿಯಾ ವಿಜಯ್ ಸೇರಿದಂತೆ ಅನೇಕರು ಭಾಗಿಯಾಗಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಈ ವೇಳೆ ಡಾಲಿ ಮಾತನಾಡಿ, ಉಪೇಂದ್ರ ಅವರ ಸಿನಿಮಾ ಕುರಿತಾದ ವಿಭಿನ್ನ ಯೋಚನೆಗಳ ಬಗ್ಗೆ ಕೊಂಡಾಡಿದ್ದಾರೆ. ಇದನ್ನೂ ಓದಿ:ಶಿವಣ್ಣ ನಟನೆಯ ಮತ್ತೊಂದು ಹೊಸ ಸಿನಿಮಾ ಘೋಷಣೆ- ಮಾಸ್ ಲೀಡರ್‌ಗೆ ಕೈ ಜೋಡಿಸಿದ ’ಗೂಗ್ಲಿ’ ಡೈರೆಕ್ಟರ್
Advertisement
ಡಾಲಿ ಮಾತನಾಡಿ, ಮುಹೂರ್ತಕ್ಕೆ ಬಂದಾಗ ತುಂಬಾ ಕುತೂಹಲದಿಂದ ಯೋಚನೆ ಮಾಡಿದೆ, ಟ್ರೋಲಾಗುತ್ತೆ ಹಾಡು ನೋಡಿದ್ಮೇಲೆ ಟ್ರೆಂಡ್ ಬಗ್ಗೆ ಸಿನಿಮಾ ಮಾಡಿದ್ದಾರೆ ಅನ್ಕೊಂಡೆ, ವಾರ್ನರ್ ನೋಡ್ದಾಗ ಇದು ಎಲ್ಲೋ ಫ್ಯೂಚರ್ ಹೊರಟೋದ್ರು ಅಂತ ತಲೆ ಕೆಡಿಸಿಕೊಂಡೆ ಎಂದರು ಡಾಲಿ. ಯುಐ ಚಿತ್ರದ ಮೂಲಕ ಉಪೇಂದ್ರ ಸರ್ ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ಅಂತಿದ್ದಾರೆ. ಯುಐ ನೋಡಲು ಕಾಯುತ್ತಿದ್ದೇವೆ. ಕಾಮನ್ ಮ್ಯಾನ್‌ಗೆ ಎದ್ದೇಳು ಅಂತ ಚಿವುಟುವ ಸಿನಿಮಾವಿದು. ಆ ಸಿನಿಮಾಗಳಲ್ಲಿ ಫಿಲಾಸಫಿ ಅವರು ತುಂಬಾ ಚೆನ್ನಾಗಿ ಕಥೆ ಹೇಳುತ್ತಾರೆ ಎಂದು ಡಾಲಿ ಹಾಡಿ ಹೊಗಳಿದರು.
Advertisement
Advertisement
ಎಲ್ಲರಿಗೂ ಒಳ್ಳೆಯದಾಗಲಿ, ಹೀರೋಯಿನ್ ರೀಷ್ಮಾರನ್ನು ನಮ್ಮ ಮುಂದಿನ ಸಿನಿಮಾಗೆ ಕಾಸ್ಟ್ ಮಾಡ್ಕೊಂಡಿದ್ದೀವಿ ಪ್ಯಾನ್ ಇಂಡಿಯಾ ದಾಟಿ ಹೋದ್ಮೇಲೆ ಸಿಗಲ್ಲ ಅಂತ ನಟಿಯ ಬಗ್ಗೆಯೂ ಮೆಚ್ಚುಗೆ ಸೂಚಿಸಿದರು.
Advertisement
ಅಂದಹಾಗೆ, UI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.
ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮನೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.