ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ (Daali Dhananjay) ಅವರು ಫೆ.16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಮಾಜಿ ಪಿಎಂ ಹೆಚ್.ಡಿ. ದೇವೇಗೌಡರನ್ನು ಮದುವೆಯ (Wedding) ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ ನೀಡಿದ್ದಾರೆ.
Advertisement
ಭಾವಿ ಪತ್ನಿ ಧನ್ಯತಾ ಜೊತೆ ಮಾಜಿ ಪಿಎಂ ಹೆಚ್.ಡಿ. ದೇವೇಗೌಡ (H. D. Deve Gowda) ನಿವಾಸಕ್ಕೆ ಭೇಟಿ ನೀಡಿ, ಮದುವೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ:ಚಿತ್ರರಂಗದ ವರ್ತನೆಗೆ ಆಕ್ಷೇಪ- ತೆಲುಗು ನಟರ ಕಿವಿ ಹಿಂಡಿದ ಸಿಎಂ ರೇವಂತ್ ರೆಡ್ಡಿ
Advertisement
Advertisement
ಅಂದಹಾಗೆ, ಇತ್ತೀಚೆಗೆ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಭಾವಿ ಪತ್ನಿಯ ಜೊತೆ ಭೇಟಿಯಾಗಿ ಮದುವೆಗೆ ಆಹ್ವಾನ ನೀಡಿದ್ದರು.
Advertisement
ಇನ್ನೂ ಡಾಕ್ಟರ್ ಧನ್ಯತಾ ಜೊತೆ ಡಾಲಿ ಮೈಸೂರಿನಲ್ಲಿ ಮದುವೆಯಾಗುತ್ತಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ. ಈ ಮದುವೆಯಲ್ಲಿ ಸ್ಯಾಂಡಲ್‌ವುಡ್ ಕಲಾವಿದರು, ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.