ಕನ್ನಡ ಚಿತ್ರರಂಗದ ಬಿಗ್ ಬಜೆಟ್ ‘ಹಲಗಲಿ’ (Halagali) ಸಿನಿಮಾ ಬಗ್ಗೆ ಇದೀಗ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ಡೇಟ್ಸ್ ಹೊಂದಾಣಿಕೆ ಆಗದ ಕಾರಣ ಡಾರ್ಲಿಂಗ್ ಕೃಷ್ಣ ಈ ಚಿತ್ರದಿಂದ ಹೊರನಡೆದಿದ್ದರು. ಈ ಬೆನ್ನಲ್ಲೇ ಚಿತ್ರದ ಲೀಡ್ ಪಾತ್ರಕ್ಕೆ ನಟರಾಕ್ಷಸ ಡಾಲಿ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹಬ್ಬಿದೆ.
ನಟ ಕಮ್ ನಿರ್ಮಾಪಕ ಡಾಲಿ ಧನಂಜಯ್ ಕನ್ನಡದ ಜೊತೆ ಪರಭಾಷಾ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳಿಗೆ ಡಾಲಿ ಅವಕಾಶ ನೀಡುತ್ತಿದ್ದಾರೆ. ಇದನ್ನೂ ಓದಿ:ಚಂದ್ರಕಾಂತ್, ಪವಿತ್ರಾ ಮದುವೆ ರೂಮರ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪುತ್ರ
‘ಹಲಗಲಿ’ ಸಿನಿಮಾ ಅತೀ ದೊಡ್ಡ ಪ್ರಾಜೆಕ್ಟ್ ಆಗಿದ್ದು, ಡಾಲಿ ಈ ಸಿನಿಮಾಗೆ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹಬ್ಬಿದೆ. ಸಿನಿಮಾ ಕಥೆ ಮತ್ತು ಪಾತ್ರದ ಬಗ್ಗೆ ಡಾಲಿ ಮಾತನಾಡಿ ಚಿತ್ರತಂಡ ಮಾತುಕತೆ ನಡೆಸಿದೆ. ಶೀಘ್ರದಲ್ಲೇ ಶೂಟಿಂಗ್‌ಗೆ ನಡೆಯಲಿದೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಚಿತ್ರತಂಡದಿಂದ ಹೊರಬರಬೇಕಿದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಗೆರಿಲ್ಲಾ ವಾರ್ ಮಾಡುವ ಮೂಲಕ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದ ಹಲಗಲಿ ಬೇಡರ ಕಥೆಯನ್ನು ಸಿನಿಮಾ ನಿರ್ದೇಶಕ ಸುಕೇಶ್ ಡಿ.ಕೆ. ಮಾಡುತ್ತಿದ್ದಾರೆ. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದರಿಂದ ಮತ್ತು ಆ ಕಾಲ ಘಟ್ಟವನ್ನು ಕಟ್ಟಿ ಕೊಡಬೇಕಾಗಿದ್ದರಿಂದ ಬರೋಬ್ಬರಿ 80 ಕೋಟಿ ರೂಪಾಯಿಯನ್ನು ಈ ಸಿನಿಮಾಗಾಗಿ ಖರ್ಚು ಮಾಡುತ್ತಿದ್ದಾರೆ ನಿರ್ಮಾಪಕ ಕಲ್ಯಾಣ್ ಚಕ್ರವರ್ತಿ ಧೂಳಿಪಳ್ಯ. ಇದೊಂದು ಅಪರೂಪದ ಕಥನವಾಗಿದ್ದರಿಂದ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.