ಬೆಂಗಳೂರು: ಫೆ.15ರಂದು ಮೈಸೂರಿನಲ್ಲಿ ನಡೆಯುವ ತಮ್ಮ ವಿವಾಹಕ್ಕೆ ಚಿತ್ರನಟ ಡಾಲಿ ಧನಂಜಯ (Daali Dhananjaya) ಭಾವಿ ಪತ್ನಿ ಧನ್ಯತಾ ಜೊತೆ ಆಗಮಿಸಿ ಸಿಎಂ ಸಿದ್ದರಾಮಯ್ಯನವರಿಗೆ (Siddaramaiah) ಮೊದಲ ಆಮಂತ್ರಣ ನೀಡಿದ್ದಾರೆ.
Advertisement
ಭಾವಿ ಪತ್ನಿ ಜೊತೆ ಕಾವೇರಿ ನಿವಾಸಕ್ಕೆ ಆಗಮಿಸಿದ ಡಾಲಿ ಸಿಎಂ ಸಿದ್ದರಾಮಯ್ಯನವರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಆ ಬಳಿಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೂ ಲಗ್ನಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಮೊಮ್ಮಗ ಬದುಕಿದ್ದಾನಾ? – ಮಾಧ್ಯಮದ ಮುಂದೆ ಕಣ್ಣೀರಿಟ್ಟ ಅತುಲ್ ತಂದೆ
Advertisement
Advertisement
ಡಾಲಿ ಹಾಗೂ ಧನ್ಯತಾ ಆಮಂತ್ರಣ ಪತ್ರಿಕೆ ‘ಓಲ್ಡ್ ಇಸ್ ಗೋಲ್ಡ್’ ಥೀಮ್‌ನಲ್ಲಿದೆ. ಅಂಚೆ ಪತ್ರದಲ್ಲಿ ವಿಶೇಷವಾಗಿ ಲಗ್ನಪತ್ರಿಕೆ ಮೂಡಿಬಂದಿದೆ. ಫೆ.15ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಫೆ.16ರಂದು ಡಾಲಿ-ಧನ್ಯತಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಕಲ್ಯಾಣ ನಡೆಯಲಿದೆ. ಇದನ್ನೂ ಓದಿ: ಹಾಸ್ಟೆಲ್ ಊಟದ ವಿಚಾರಕ್ಕೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದ ಪ್ರಿನ್ಸಿಪಲ್, ವಾರ್ಡನ್ ಅಮಾನತು
Advertisement