– ಇಂದು, ನಾಳೆ ಮೈಸೂರಲ್ಲಿ ನಟ ಡಾಲಿ ವಿವಾಹ ಕಾರ್ಯಕ್ರಮ
ಮೈಸೂರು: ನಟ ಡಾಲಿ ಧನಂಜಯ್ (Daali Dhananjay) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಧನಂಜಯ್ ಮತ್ತು ಡಾಕ್ಟರ್ ಧನ್ಯತಾ (Dhanyatha) ಜೋಡಿ ಹಳದಿ ಶಾಸ್ತ್ರದ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.
Advertisement
ನಟನ ಹಳದಿ ಶಾಸ್ತ್ರ ಸಮಾರಂಭಕ್ಕೆ ಹಿರಿಯ ನಟ, ಮಾಜಿ ಸಚಿವ ಬಿ.ಸಿ.ಪಾಟೀಲ್ ಮತ್ತು ಕುಟುಂಬದವರು ಆಗಮಿಸಿ ಶುಭಕೋರಿದ್ದಾರೆ.
Advertisement
Advertisement
ಜರ್ಮನಿಯ ರಂಗ ನಿರ್ದೇಶಕ ಕ್ರಿಸ್ಟೆನ್ ಭಾಗವಹಿಸಿದ್ದು ಕೂಡ ವಿಶೇಷವಾಗಿತ್ತು. ಹಳದಿ ಶಾಸ್ತ್ರ ಸಮಾರಂಭದಲ್ಲಿ ಧನಂಜಯ್ ಮತ್ತು ಧನ್ಯತಾ ಜೋಡಿ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಪಾಲ್ಗೊಂಡು ಶುಭಹಾರೈಸಿದ್ದಾರೆ.
Advertisement
ಇಂದು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಟ ಮತ್ತು ಡಾಕ್ಟರ್ ಜೋಡಿ ಆರತಕ್ಷತೆ ನಡೆಯಲಿದೆ. ಇಂದು ಬೆಳಗ್ಗೆಯಿಂದಲೇ ಶಾಸ್ತ್ರಗಳು ನಡೆಯಲಿವೆ. ಸಂಜೆ 6 ಗಂಟೆಯ ನಂತರ ಆರತಕ್ಷತೆ ಕಾರ್ಯಕ್ರಮ ಇರಲಿದೆ.
ನಾಳೆ ಬೆಳಗ್ಗೆ ಧಾರಾ ಮುಹೂರ್ತ ನಡೆಯಲಿದೆ. ಆರತಕ್ಷತೆಗೆ ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ರಂಗದ ಗಣ್ಯರು ಹಾಗೂ ಅಭಿಮಾನಿಗಳು ಭಾಗವಹಿಸಲಿದ್ದಾರೆ.