ನಟ ಡಾಲಿ ಧನಂಜಯ್ (Daali Dhananjay) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಡಾಕ್ಟರ್ ಧನ್ಯತಾ ಅವರ ಜೊತೆ ನಟ ಡಾಲಿ ಹಸೆಮಣೆ ಏರಲಿದ್ದಾರೆ. ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ಇಂದು ಮದುವೆ ಶಾಸ್ತ್ರಗಳು ನಡೆಯುತ್ತಿದೆ. ಇಂದು ಸಂಜೆ ಆರತಕ್ಷತೆ, ನಾಳೆ ಧಾರಾ ಮುಹೂರ್ತ ಶುಭಕಾರ್ಯ ನಡೆಯಲಿದೆ. ಗಣ್ಯರು, ಸಿನಿ ತಾರೆಯರು, ಆಪ್ತರು ಡಾಲಿ ಮದುವೆಯಲ್ಲಿ ಪಾಲ್ಗೊಂಡು ಜೋಡಿಗೆ ಶುಭಹಾರೈಸುತ್ತಿದ್ದಾರೆ.