ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ತಾರಾ ಜೋಡಿಯ ಮದುವೆ ಸುದ್ದಿ ಹಬ್ಬಿದೆ. ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಹಸೆಮಣೆ ಏರೋಕೆ ಸಜ್ಜಾಗಿದ್ದು ಇದೇ ತಿಂಗಳು 22ಕ್ಕೆ ಮದುವೆ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ ಎಂದು ಚಂದನವನದಲ್ಲಿ ಹರಿದಾಡುತ್ತಿದೆ.
Advertisement
ಮನೆಯಲ್ಲಿ ಸರಳವಾಗಿ ಮದುವೆ ನಿಶ್ಚಯ ಮಾಡಿಕೊಂಡು ಲೀಲಾ ಪ್ಯಾಲೇಸ್‍ನಲ್ಲಿ ತಾರೆಗಳು ಹಾಗೂ ಬಂಧು ಮಿತ್ರರಿಗೆ ಔತಣಕೂಟ ಏರ್ಪಡಿಸಲಾಗಿದೆ. ಇದೇ ಡಿಸೆಂಬರ್‍ನಲ್ಲಿ ಮೇಘನಾ ಮತ್ತು ಚಿರಂಜೀವಿ ಸರ್ಜಾ ಮದುವೆ ದಿನಾಂಕ ನಿಗದಿಯಾಗಿದ್ದು ಬೆಂಗಳೂರಿನಲ್ಲಿಯೇ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.
Advertisement
Advertisement
ಸ್ಯಾಂಡಲ್‍ವುಡ್‍ನ ತಾರಾ ಜೋಡಿಗಳಾದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಮಗಳು ಮೇಘನಾ ರಾಜ್. ಕನ್ನಡ ಮತ್ತು ಮಲೆಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದಾರೆ. ಇನ್ನು ಚಿರಂಜೀವಿ ಖ್ಯಾತ ನಟ ಅರ್ಜುನ್ ಸರ್ಜಾ ಸೋದರಳಿಯನಾಗಿದ್ದು ವಾಯುಪುತ್ರ, ವರದನಾಯಕ, ಆಟಗಾರ ಮುಂತಾದ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
Advertisement
ರಾಜಾಹುಲಿ, ಬಹುಪರಾಕ್, ಜಿಂದಾ, ನೂರೊಂದು ನೆನಪು ಮುಂತಾದ ಚಿತ್ರಗಳಲ್ಲಿ ಮೇಘನಾ ರಾಜ್ ಅಭಿನಯಿಸಿದ್ದಾರೆ. ಅಂದಹಾಗೆ ಕಳೆದ ಎರಡು ವರ್ಷಗಳಿಂದ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಪ್ರೀತಿಸುತ್ತಿದ್ದರು ಅನ್ನುವ ಸುದ್ದಿ ಇತ್ತು. ಇದೀಗ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.