ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ರನ್ನು (Darshan) ನೋಡಲು ನಟ ಅಭಿಷೇಕ್ ಅಂಬರೀಶ್(Abhishek Ambareesh), ಧನ್ವೀರ್ ಗೌಡ (Dhanveer Gowda), ಚಿಕ್ಕಣ್ಣ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ದರ್ಶನ್ ಪ್ರಕರಣ: ಬಿಯರ್ ಬಾಟಲಿ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆ
ದರ್ಶನ್ ಜೈಲು ಪಾಲಾದ ಬಳಿಕ ಇದೀಗ ಬಾರಿಗೆ ನಟ ಅಭಿಷೇಕ್ ಜೈಲಿಗೆ ಭೇಟಿ ನೀಡಿದ್ದಾರೆ. ಚಿತ್ರರಂಗದ ಏಳಿಗೆಗಾಗಿ ನಡೆಯುತ್ತಿರುವ ಪೂಜೆಯಲ್ಲಿ ಭಾಗಿಯಾದ ಬಳಿಕ ಚಿಕ್ಕಣ್ಣ (Chikkanna) ಮತ್ತು ಧನ್ವೀರ್ ಜೊತೆ ಅಭಿಷೇಕ್ ಅಂಬರೀಶ್ ಜೈಲಿಗೆ ಭೇಟಿ ಕೊಟ್ಟಿದ್ದಾರೆ.
ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ 2 ಬಾರಿಯಷ್ಟೇ ಭೇಟಿಯಾಗಲು ಅವಕಾಶವಿರುತ್ತದೆ. ಆ.12ರಂದು ದರ್ಶನ್ ಕುಟುಂಬ ಜೈಲಿಗೆ ಭೇಟಿ ನೀಡಿದ್ದರು.