ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head Bus)ವಿವಾದ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅದರಲ್ಲೂ ಧನಂಜಯ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ‘ನಿಮ್ಮೊಂದಿಗೆ ನಾವಿದ್ದೇವೆ’ ಎನ್ನುವ ಹ್ಯಾಷ್ ಟ್ಯಾಗ್ ಕೂಡ ಟ್ರೆಂಡ್ ಆಗಿದೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಸಿನಿಮಾ ರಂಗದ ಅನೇಕರು ಧನಂಜಯ್ ಪರ ಧ್ವನಿ ಎತ್ತಿದ್ದಾರೆ.
Advertisement
ಈ ವಿವಾದದ (Controversy) ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿರುವ ನಟ ಚೇತನ್ (Chetan), ‘ನಾನು ಸಿನಿಮಾ ಅನ್ನು ವೀಕ್ಷಿಸಿದೆ. ಕೆಲವು ವಿಭಾಗಗಳಿಗೆ ಆಕ್ಷೇಪಾರ್ಹ ಎಂದು ಕರೆಯಬಹುದಾದ ಚಲನಚಿತ್ರದ ದೃಶ್ಯಗಳನ್ನು ಕತ್ತರಿಸುವಂತೆ ಒತ್ತಾಯಿಸಲಾಗಿದೆ. ಪ್ರಸ್ತುತ ಬೇಡಿಕೆಗಳು ಸೃಜನಶೀಲ ಸ್ವಾತಂತ್ರ್ಯಗಳಿಗೆ ವಿರುದ್ಧವಾಗಿವೆ. ಸೆನ್ಸಾರ್ ಮಂಡಳಿಯ ಅನುಮತಿ ಪಡೆದ ನಂತರ ಚಿತ್ರ ಮತ್ತು ಚಿತ್ರಣಕ್ಕೆ ಸ್ವಾತಂತ್ರ್ಯ ನೀಡಬೇಕು. ಭಿನ್ನಾಭಿಪ್ರಾಯವು ಪ್ರಜಾಸತ್ತಾತ್ಮಕವಾಗಿದೆ, ಹೊರತು ಬೆದರಿಕೆಗಳಲ್ಲ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ
Advertisement
Advertisement
ಹೆಡ್ ಬುಷ್ ಸಿನಿಮಾದ ವೀರಗಾಸೆ ವಿವಾದ ಸತತ ಎರಡು ದಿನಗಳಿಂದ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ವೀರಗಾಸೆ ಕಲೆ ಮತ್ತು ವೀರಭದ್ರ ದೇವರಿಗೆ ತಾವು ಅವಮಾನ ಮಾಡಿಲ್ಲ ಎಂದು ಧನಂಜಯ್ (Dolly Dhananjay) ಸೇರಿದಂತೆ ಇಡೀ ಸಿನಿಮಾ ತಂಡ ಹೇಳಿದರೂ, ಆ ದೃಶ್ಯವನ್ನು ಸಿನಿಮಾದಿಂದ ಕೈ ಬಿಡುವಂತೆ ಒತ್ತಾಯಿಸಲಾಗುತ್ತಿದೆ. ನಿನ್ನೆಯಷ್ಟೇ ಧನಂಜಯ್ ಮತ್ತು ನಿರ್ದೇಶಕ ಶೂನ್ಯ ಈ ವಿಚಾರವಾಗಿ ಕ್ಷಮೆ ಕೇಳಿದರೂ, ಪ್ರತಿಭಟನೆ ಮಾತ್ರ ನಿಂತಿಲ್ಲ.
Advertisement
ವೀರಗಾಸೆಗೆ ತಾವು ಅವಮಾನ ಮಾಡಿಲ್ಲದಿದ್ದರೂ, ಕ್ಷಮೆ ಕೇಳಿದ್ದೇವೆ. ಆದರೂ, ವಿವಾದ ಕಾವು ಕಡಿಮೆ ಆಗುತ್ತಿಲ್ಲ. ಸಿನಿಮಾದಿಂದ ದೃಶ್ಯವನ್ನೇ ಕತ್ತರಿಸುವಂತೆ ಒತ್ತಡ ಏರಲಾಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಆ ದೃಶ್ಯವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲವೆಂದು ಸಿನಿಮಾ ಟೀಮ್ ಹೇಳಿಕೊಂಡಿದೆ. ವಿರೋಧಿಸುವವರಿಗಿಂತಲೂ ಅದನ್ನು ಮೆಚ್ಚಿಕೊಂಡವರ ಸಂಖ್ಯೆ ದೊಡ್ಡದಿದೆ ಎನ್ನುವ ಕಾರಣಕ್ಕಾಗಿ ಅದನ್ನು ಸಿನಿಮಾದಲ್ಲಿ ಮುಂದುವರೆಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.