ಸ್ಯಾಂಡಲ್‌ವುಡ್‌ನ(Sandalwood) `ಆ ದಿನಗಳು’ ಖ್ಯಾತಿಯ ನಟ ಚೇತನ್ ಕುಮಾರ್ (Chetan Kumar) ಸದಾ ಒಂದಲ್ಲಾ ಒಂದು ವಿವಾದದ ಮೂಲಕ ಸುದ್ದಿಯಾಗಲೇ ಇರುತ್ತಾರೆ. `ಕಾಂತಾರ’ ಚಿತ್ರದ ವಿರುದ್ಧ ಕಿಡಿಕಾರಿದ ನಂತರ ಜೆಡಿಎಸ್ ರಾಜಕಾರಣಿ ಸಿಎಂ ಇಬ್ರಾಹಿಂ(Ibrahim) ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಜೆಡಿಎಸ್ ರಾಜಕಾರಣಿ ಸಿಎಂ ಇಬ್ರಾಹಿಂ ಟಿಪ್ಪು ಸುಲ್ತಾನ್ ಪ್ರತಿಮೆ ಬೇಡ ಪ್ರತಿಮೆ ಸ್ಥಾಪಿಸುವುದನ್ನು ಇಸ್ಲಾಂ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಇದು ಅವರ ಅವಿವೇಕ ಮತ್ತು ಮೂರ್ಖತನದ ಹೇಳಿಕೆಯಾಗಿದೆ ಎಂದು ಚೇತನ್ ಕಿಡಿಕಾರಿದ್ದಾರೆ. ಇದನ್ನೂ ಓದಿ:`ಕಾಂತಾರ’ ಮುಂದೆ ಬೆದರಿದ ಬಾಲಿವುಡ್: ಥಿಯೇಟರ್‌ಗೆ `ಗುಡ್ ಬೈ’ ಹೇಳಿದ ರಶ್ಮಿಕಾ ಚಿತ್ರ
Advertisement
Advertisement
ಮುಸಲ್ಮಾನರಾಗಿ ಹುಟ್ಟಿದ ಟಿಪ್ಪುವಿನ ಮೇಲೆ ಹಿಂದುತ್ವದ ದ್ವೇಷವನ್ನು ನಾವು ಖಂಡಿಸಲೇಬೇಕು ಮತ್ತು ಟಿಪ್ಪುವಿನ ಮೇಲೆ ಇಸ್ಲಾಮಿಸ್ಟ್ ಲಾಬಿಗಳ ಇಸ್ಲಾಮಿನ ಹೇರಿಕೆಯನ್ನು ಕೂಡ ನಾವು ವಿರೋಧಿಸಬೇಕು. ಟಿಪ್ಪು ಸುಲ್ತಾನ್ ಆಧುನಿಕ ಕರ್ನಾಟಕದ ಐಕಾನ್ ಎಂದು ಬರೆದುಕೊಂಡಿದ್ದಾರೆ.
Advertisement
ಈ ಹಿಂದೆ ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂಬ ಚೇತನ್ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.