ಭಾವಿ ಪತ್ನಿ ಜೊತೆ ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆ ನೀಡಿದ ನಟ ಚೇತನ್

Public TV
1 Min Read
chethan 1

ಬೆಂಗಳೂರು: ‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ಸಾಮಾಜಿಕ ಕೆಲಸಗಳ ಮೂಲಕ ಗುರುತಿಸಿಕೊಂಡವರು. ಅವರ ನಿಸ್ವಾರ್ಥ ಸೇವೆಗೆ ಈಗ ಅವರ ಭಾವಿ ಪತ್ನಿ ಮೇಘಾ ಕೂಡ ಸಾಥ್ ನೀಡಿದ್ದಾರೆ.

ಚೇತನ್ ಹಾಗೂ ಮೇಘಾ ಒಟ್ಟಿಗೆ ಸೇರಿ ತಂದೆ-ತಾಯಿ ಇಲ್ಲದೆ ಅನಾಥಾಶ್ರಮದಲ್ಲಿ ಇರುವ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆಗಳನ್ನು ನೀಡಿ ಮಕ್ಕಳು ಸರಿಯಾಗಿ ಮಲಗಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಹೀಗೆ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಈ ಜೋಡಿ ಖುಷಿಪಟ್ಟಿದ್ದಾರೆ. ಈ ಬಗ್ಗೆ ಚೇತನ್ ತಮ್ಮ ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದು, ಜೋಡಿಯ ಈ ಸೇವೆಗೆ ಅಭಿಮಾನಿಗಳು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅನಾಥ ಮಕ್ಕಳ ಜೊತೆ ನಟ ಚೇತನ್ ಪ್ರೀವೆಡ್ಡಿಂಗ್ ಫೋಟೋಶೂಟ್

https://www.facebook.com/chetanahimsa/posts/4114619898563628

ಪೋಸ್ಟ್ ನಲ್ಲಿ ಏನಿದೆ?
ಮೇಘ, ವಿನಯ್, ಮತ್ತು ನಾನು ಕೆಲಸ ಮಾಡುತ್ತಿದ್ದೇವೆ. ಆಶ್ರಮ ಮಕ್ಕಳಿಗೆ ಹಾಸಿಗೆ ನೀಡಲು ನಾವು ತಯಾರಾಗುತ್ತಿದ್ದೇವೆ ಎಂದು ಬರೆದು, ಅನಾಥಾಶ್ರಮಕ್ಕೆ ಹಾಸಿಗೆ ಹೊತ್ತ ಹೋಗುತ್ತಿವ ಫೋಟೋ ಹಾಗೂ ಹಾಸಿಗೆಗಳನ್ನು ಜೋಡಿಸಿಟ್ಟಿರುವ ಫೋಟೋಗಳನ್ನು ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಕೆಲಸಕ್ಕೆ ಸಹಕಾರ ನೀಡಿದ ಪುನೀತ್ ಎಂಬವರಿಗೆ ಚೇತನ್ ಧನ್ಯವಾದ ತಿಳಿಸಿದ್ದಾರೆ.

ಚೇತನ್ ಹಾಗೂ ಮೇಘ ಮದುವೆಗೆ ಕೆಲವೇ ದಿನಗಳು ಬಾಕಿ ಇದೆ. ಫೆಬ್ರವರಿ 2 ರಂದು ಚೇತನ್ ಮತ್ತು ಮೇಘ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅನಾಥಾಶ್ರಮದಲ್ಲಿ ಅವರ ವಿವಾಹ ಮಹೋತ್ಸವ ನಡೆಯಲಿದೆ.

chethan 1 1

ಮದುವೆ ಸಂಭ್ರಮದಲ್ಲಿರುವ ಚೇತನ್ ಹಾಗೂ ಮೇಘಾ ಇತ್ತೇಚೆಗೆ ಸ್ಪೆಷಲ್ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿದ್ದರು. ಅನಾಥ ಮಕ್ಕಳ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿರುವ ನವಜೋಡಿಗಳ ಫೋಟೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಮಕ್ಕಳ ಜೊತೆ ಬಣ್ಣದ ಓಕುಳಿಯ ಚಿತ್ತಾರ ಬಿಡಿಸಿ, ಬುಗುರಿ ಆಟವಾಡಿ, ಪೇಟಿಂಗ್ ಮಾಡಿ ನವಜೋಡಿ ಫೋಟೋ ಶೂಟ್ ಮಾಡಿಸಿದ್ದರು. ಪುಟಾಣಿ ಮಕ್ಕಳ ನಗುವಿನೊಂದಿಗೆ ಹೊಸ ಜೀವನದ ಆರಂಭದ ಸಂಭ್ರಮದಲ್ಲಿದ್ದಾರೆ ಚೇತನ್ ಮೇಘಾ. ಈ ಸ್ಪೆಷಲ್ ಫೋಟೋ ಶೂಟ್ ಎಲ್ಲರ ಗಮನ ಸೆಳೆದಿತ್ತು.

Share This Article
Leave a Comment

Leave a Reply

Your email address will not be published. Required fields are marked *