ಬೆಂಗಳೂರು: ‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಸದಾ ಹೊಸತನಕ್ಕೆ ತುಡಿಯುತ್ತಾರೆ. ಇದೀಗ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಿಶೇಷವಾಗಿ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ನಟ ಚೇತನ್ ಮತ್ತು ಮೇಘಾ ಮದುವೆ ಮುಂದಿನ ತಿಂಗಳು ಅಂದರೆ ಫೆಬ್ರವರಿ 2 ಭಾನುವಾರ ಸಂಜೆ ನಡೆಯಲಿದೆ. ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಇವರ ಮದುವೆ ಆಮಂತ್ರಣ ಪತ್ರಿಕೆ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಆಶ್ರಮದ ಮಕ್ಕಳು, ವೃದ್ಧರ ಸಮ್ಮುಖದಲ್ಲಿ ಪ್ರೇಯಸಿಯ ಜೊತೆ ಚೇತನ್ ಮದ್ವೆ
Advertisement
Advertisement
ಚೇತನ್ ಮದುವೆ ಆಮಂತ್ರಣ ಪತ್ರಿಕೆ ಪರಿಸರ ಸ್ನೇಹಿ ಆಮಂತ್ರಣ ಪತ್ರಿಕೆಯಾಗಿದೆ. ಈ ಲಗ್ನ ಪತ್ರಿಕೆಯೊಳಗೆ ಬೀಜವನ್ನು ಹುದುಗಿಸಿ ಇಡಲಾಗಿದೆ. ಪತ್ರಿಕೆಯನ್ನು ಓದಿ ಎಸೆದರೂ ಅದು ಅಲ್ಲೇ ಚಿಗುರೊಡೆಯುತ್ತೆ. ಅಷ್ಟೇ ಅಲ್ಲದೇ ಈ ಪತ್ರಿಕೆಯ ಮೇಲೆ ಸುಂದರ ಕಸೂತಿ ಕಲೆಯಿದೆ.
Advertisement
ಇವರ ಮದುವೆ ಯಾವುದೇ ಆಡಂಬರವಿಲ್ಲದೆ ಸರಳವಾಗಿ ನಡೆಯಲಿದೆ. ಜೊತೆಗೆ ಮದುವೆಯಲ್ಲಿ ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಮತ್ತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ.