ಬುದ್ದಿಜೀವಿ ವಲಯಕ್ಕೆ ನಟ ಚೇತನ್ ‘ಚಮಚ’ ಅಂದಿದ್ದು ಯಾಕೆ ಮತ್ತು ಯಾರಿಗೆ?

Public TV
1 Min Read
chetan 13 4

ಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್, ಸಾಮಾಜಿಕ ಜಾಲತಾಣದಲ್ಲಿ ಒಂದು ವಿಚಿತ್ರವಾದ ಪೋಸ್ಟ್ ಮಾಡಿದ್ದಾರೆ. ಅದು ಈಗ ವಿವಾದಕ್ಕೂ ಮತ್ತು ಚರ್ಚೆಗೆ ಕಾರಣವಾಗಿದೆ. ಅವರು ಫೇಸ್ ಬುಕ್ ಪೇಜ್ ನಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪೋಸ್ಟ್ ಮಾಡಿದ್ದು, “ಕರ್ನಾಟಕ ಕಾಂಗ್ರೆಸ್ ಮತ್ತು ಚಮಚಾ ಬುದ್ದಿಜೀವಿ ವಲಯ ಬಾಬಾಸಾಹೇಬರ ಕೆಲವು ಜೀವನದ ಅಂಶಗಳನ್ನು ಪಠ್ಯಪುಸ್ತಕದಿಂದ ತಗೆದಿದ್ದಾರೆ ಅಂತ ಬೊಬ್ಬೆ ಹಾಕುತ್ತಿದ್ದಾರೆ. ಬಾಬಾ ಸಾಹೇಬರ ಬಗ್ಗೆ ಅವರ ಕಾಳಜಿ ನೋಡಿ ಖುಷಿಯಾಗುತ್ತಿದೆ. ಕಾಂಗ್ರೆಸ್ ಮಾಡುವ ಪರಿಷ್ಕೃತ ಪಠ್ಯದಲ್ಲಿ ಬಾಬಾ ಸಾಹೇಬರ ಕಾಂಗ್ರೆಸ್ ಮತ್ತು ಗಾಂಧಿ ಅಸ್ಪ್ರಶಸ್ಯರಿಗೆ ಏನು ಮಾಡಿದರು ಎಂಬ ಪಾಠ ಇರಲಿದೆಯಾ” ಎಂದು ಪ್ರಶ್ನೆ ಮಾಡಿದ್ದಾರೆ.

chetan 13 1

ಮತ್ತೊಂದು ಪೋಸ್ಟ್ ನಲ್ಲಿ ಬಿಜೆಪಿ ವಿರೋಧಿ ನಿಲುವಿನ ಮತ್ತು ಕಾಂಗ್ರೆಸ್ ಬೆಂಬಲಿಸುವ ಕರ್ನಾಟಕದ ಬುದ್ಧಿಜೀವಿ ವಲಯ ಲಿಬರಲ್ಗಳು ಅಥವಾ ನಡುಪಂಥೀಯರಿಗೆ, ಬ್ರಾಹ್ಮಣ್ಯದ ಅರಿವು ತುಂಬಾ ಕಡಿಮೆ. ಎಂದು ಹೇಳುತ್ತಾ ನಾವು ಇಡೀ ರಾಜಕೀಯ ವ್ಯವಸ್ಥೆಯನ್ನೇ ಎದುರಿಸಬೇಕು. ಒಂದು ಪಾರ್ಟಿಯನ್ನಲ್ಲ ಎಂದು ಕರ್ನಾಟಕರ ಮೂರು ಪಾರ್ಟಿಗಳಿಗೂ ಚೇತನ್ ತಿವಿದಿದ್ದಾರೆ. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

Actor chetan (1)

ಈವರೆಗೂ ಬುದ್ಧಿಜೀವಿ ವಲಯದಲ್ಲಿ ಗುರುತಿಸಿಕೊಂಡಿದ್ದ ಚೇತನ್ ಅವರ ಪೋಸ್ಟ್ ನೋಡಿ ಸ್ವತಃ ಬುದ್ದಿಜೀವಿ ವಲಯವೇ ಗೊಂದಲಕ್ಕೀಡಾಗಿದೆ. ಚೇತನ್ ಯಾರ ಪರ ಮಾತನಾಡುತ್ತಿದ್ದಾರೆ? ಅವರು ಯಾರ ಪರ? ಯಾರ ವಿರೋಧಿ ಎನ್ನುವುದನ್ನು ಸ್ಪಷ್ಟ ಪಡಿಸಲಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ನಾಳೆ ಪ್ರಗತಿಪರರು, ಕುವೆಂಪು, ಬಸವಣ್ಣನ ಅನುಯಾಯಿಗಳು  ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಆದ ಪಠ್ಯಪುಸ್ತಕ ಪರಿಷ್ಕೃತ ವಿರುದ್ಧ ದೊಡ್ಡ ಮಟ್ಟದಲ್ಲಿ ಚಳವಳಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ಬೆಂಗಳೂರು ರೈಲು ನಿಲ್ದಾಣದಿಂದ ಸ್ವಾತಂತ್ರ್ಯ  ಉದ್ಯಾನದವರೆಗೂ ಪ್ರತಿಭಟನೆ ಜಾತಾ ಹಮ್ಮಿಕೊಳ್ಳಲಾಗಿದೆ. ಅದಕ್ಕೂ ಒಂದು ದಿನ ಮುನ್ನ ಚೇತನ್ ಹಾಕಿದ ಈ ಪೋಸ್ಟ್ ಮಹತ್ವ ಪಡೆದುಕೊಂಡಿವೆ.

Live Tv

Share This Article