ಕನ್ನಡ- ತೆಲುಗು ಕಿರುತೆರೆಯ ಜನಪ್ರಿಯ ನಟ ಚಂದುಗೌಡ ಈಗ ‘ಗೌರಿ’ (Gowri Film) ಸಿನಿಮಾದಲ್ಲಿ ವಿಲನ್ ಆಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ (Indrajit Lankesh) ನಿರ್ದೇಶನದ ಸಿನಿಮಾದಲ್ಲಿ ನಟ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಚಂದು ಗೌಡ, ಪಬ್ಲಿಕ್ ಟಿವಿ ಡಿಜಿಟಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ಗೌರಿ’ (Gowri Film) ಚಿತ್ರತಂಡದಿಂದ ಚಂದು ಗೌಡಗೆ ಅಪ್ರೋಚ್ ಮಾಡಿದ್ದು, ಕಥೆ ಮತ್ತು ಪಾತ್ರ ಕೇಳಿ ಒಪ್ಪಿಕೊಂಡೆ. ಇಂದ್ರಜಿತ್ ಅವರ ನಿರ್ದೇಶನದಲ್ಲಿ ನಟಿಸುವುದು ಖುಷಿಯ ವಿಚಾರ. ಸಾಕಷ್ಟು ನವಪ್ರತಿಭೆಗಳನ್ನ ಇಂದ್ರಜಿತ್ ಲಾಂಚ್ ಮಾಡಿದ್ದಾರೆ. ಅವರ ನಿರ್ದೇಶನದಲ್ಲಿ ನಾನು ನಟಿಸಬೇಕು ಎಂದು ನನ್ನ ಬಹುಕಾಲದ ಕನಸಾಗಿತ್ತು. ಈಗ ನನಸಾಗಿದೆ ಎಂದು ಖುಷಿಯಿಂದ ಮಾತನಾಡಿದ್ದಾರೆ.


ಇನ್ನೂ ಗೌರಿ (Gowri Film) ಸಿನಿಮಾದಲ್ಲಿ ಸಮರ್ಜಿತ್- ಸಾನ್ಯ ಅಯ್ಯರ್ (Saanya Iyer) ಜೋಡಿಯಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ಕಿರುತೆರೆಯಲ್ಲಿ ‘ಕಥೆಯೊಂದು ಶುರುವಾಗಿದೆ’ ಮತ್ತು ತೆಲುಗಿನಲ್ಲಿ ‘ತ್ರಿನಯನಿ’ ಎಂಬ ಸೀರಿಯಲ್‌ನಲ್ಲಿ ಲೀಡ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಕನ್ನಡ ಸಿನಿಮಾ ಜೊತೆ ತೆಲುಗಿನಲ್ಲೂ ಒಳ್ಳೆಯ ಪ್ರಾಜೆಕ್ಟ್ ಸಿಗುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ಹಂಚಿಕೊಳ್ಳಲಿದ್ದಾರೆ.
ಶೃತಿ ನಾಗೇಶ್, ಪಬ್ಲಿಕ್ ಟಿವಿ ಡಿಜಿಟಲ್
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


