ತೆಲುಗಿನ ‘ಸಾವಿತ್ರಮ್ಮಗಾರು ಅಬ್ಬಾಯಿ’ ಧಾರಾವಾಹಿಯ ಶೂಟಿಂಗ್ ವೇಳೆ ಕನ್ನಡದ ಹೆಸರಾಂತ ಕಿರುತೆರೆ ನಟ ಚಂದನ್ ಮೇಲಿನ ಹಲ್ಲೆಗೆ ಹೊಸ ತಿರುವು ಸಿಕ್ಕಿದ್ದು, ಇದೊಂದು ಪೂರ್ವ ನಿಯೋಜಿತ ಕೃತ್ಯ ಎನ್ನಲಾಗುತ್ತಿದೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ವಿಶೇಷವಾಗಿ ಮಾತನಾಡಿರುವ ಅವರು, ಇದು ತಿಂಗಳು ಹಿಂದೆ ನಡೆದ ಘಟನೆಯಲ್ಲ ನಿನ್ನೆಯಷ್ಟೇ ನಡೆದದ್ದು ಎಂದು ತಿಳಿಸಿದ್ದಾರೆ.
Advertisement
‘ನಿನ್ನೆ ನನ್ನ ಕಾಲ್ ಶೀಟ್ ಇರಲಿಲ್ಲ. ಆದರೂ, ಶೂಟಿಂಗೆಗೆ ಹೋಗಿದ್ದೆ. ಅದು ನನ್ನ ವೃತ್ತಿ ಬದ್ಧತೆ ಆಗಿತ್ತು. ನನ್ನ ತಾಯಿಗೆ ಹುಷಾರಿಲ್ಲ ಎಂದರೂ, ನಾನು ಚಿತ್ರೀಕರಣದಲ್ಲಿ ಭಾಗಿ ಆಗುವ ಮೂಲಕ ಒಬ್ಬ ನಟನಾಗಿ ಮಾಡಬೇಕಾದ ಕರ್ತವ್ಯ ಮಾಡಿದೆ. ಆದರೆ, ಅವರು ಅದನ್ನು ಉಳಿಸಿಕೊಳ್ಳಲಿಲ್ಲ. ನನ್ನ ಮೇಲಿನ ಘಟನೆಯು ಪ್ರೀಪ್ಲ್ಯಾನ್ಡ್ ಅನ್ಸುತ್ತೆ. ಘಟನೆ ಏನೇ ನಡೆದಿದ್ದರೂ, ಕುಳಿತು ಮಾತನಾಡಬಹುದಿತ್ತು. ಹಾಗೆ ಮಾಡಲಿಲ್ಲ. ಎಲ್ಲರೂ ಒಟ್ಟಾಗಿ ಸೇರಿ ನನ್ನ ಮೇಲೆ ದುರ್ವರ್ತನೆ ತೋರಿದ್ದಾರೆ. ಹೊಡೆದಿದ್ದು ಸರಿ ಇಲ್ಲ ಅಂತ ಅಲ್ಲಿ ಯಾರೊಬ್ಬ ತಂತ್ರಜ್ಞರೂ ಹೇಳಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಿದ್ದರು’ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ ಚಂದನ್. ಇದನ್ನೂ ಓದಿ:ಡಿವೋರ್ಸ್ ನಂತರ ಮತ್ತೆ ಒಟ್ಟಿಗೆ ನಟಿಸಲಿದ್ದಾರೆ ನಾಗಚೈತನ್ಯ- ಸಮಂತಾ
Advertisement
Advertisement
‘ನಿನ್ನೆ ಶೂಟಿಂಗ್ ಸಮಯದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಬಂದು ಎದ್ದೇಳಿಸಿ ಏನೇನೋ ಮಾತನಾಡಿದ್ರು. ಹೋಗೋ ಬರ್ತೀನಿ ಅಂತ ತಳ್ಳಿದೆ ಅಷ್ಟೇ. ಆಮೇಲೆ ಆತ ಹೋಗಿ ಎಲ್ಲರನ್ನೂ ಸೇರಿಸಿ ಈ ರೀತಿ ವರ್ತಿಸಿದ್ದಾನೆ. ಧಾರಾವಾಹಿಯಲ್ಲಿ ನಟಿಸಲ್ಲ ಅಂತ ಹೇಳಿದಾಗಲೂ ಅವರೇ ನನ್ನನ್ನು ಕರೆದು ಆಕ್ಟ್ ಮಾಡಲು ಕೇಳಿಕೊಂಡಿದ್ದರು. ಹಾಗಾಗಿ ಹೋಗಿದ್ದೆ, ನಾನಾಗಿಯೇ ಅವಕಾಶ ಹುಡುಕಿಕೊಂಡು ಹೋಗಿಲ್ಲ. ಈ ಘಟನೆ ನಡೆದು ಬೆಂಗಳೂರಿಗೆ ವಾಪಸ್ ಬರಬೇಕು ಎಂದಾಗ ಮತ್ತೆ ಕಷ್ಟ ಕೊಟ್ಟರು. ಕ್ಯಾಬ್ ಬುಕ್ ಮಾಡಿಕೊಂಡು ಹೋಗೋಕೂ ಬಿಡಲಿಲ್ಲ. ರೂಮ್ ಕೊಡ್ಲಿಲ್ಲ’ ಎಂದು ಘಟನೆಯನ್ನು ವಿವರಿಸಿದರು ಚಂದನ್.