Cinema

ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

Published

on

ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್
Share this

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಚಕ್ರವರ್ತಿ ಟ್ರೇಲರ್ ಹೊಸ ದಾಖಲೆ ಬರೆದಿದೆ. ರಿಲೀಸ್ ಆದ 24 ಗಂಟೆಯಲ್ಲಿ 9 ಲಕ್ಷ ವ್ಯೂ ಕಂಡ ಮೊದಲ ಟ್ರೇಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

ಈ ಮೊದಲು ಕನ್ನಡದಲ್ಲಿ ರಾಜಕುಮಾರ ಚಿತ್ರದ ಅಪ್ಪು ಡ್ಯಾನ್ಸ್ ವಿಡಿಯೋ 24 ಗಂಟೆಯಲ್ಲಿ 7 ಲಕ್ಷ ವ್ಯೂ ಕಂಡಿತ್ತು. ಆದರೆ ಈಗ ಈ ದಾಖಲೆಯನ್ನು ಚಕ್ರವರ್ತಿ ಬ್ರೇಕ್ ಮಾಡಿದೆ. ಈಗ ಒಂದೂವರೆ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿದೆ. ಇಲ್ಲಿಯವರೆಗೆ ಚೌಕ ಚಿತ್ರದ ಅಲ್ಲಾಡ್ಸು ಅಲ್ಲಾಡ್ಸು ಹಾಡು ಯೂಟ್ಯೂಬ್‍ನಲ್ಲಿ ಒಂದೇ ದಿನದಲ್ಲಿ ನಾಲ್ಕು ಲಕ್ಷ ವೀಕ್ಷಣೆಯಾಗಿ ಸದ್ದು ಮಾಡಿತ್ತು.

ಟ್ರೇಲರ್‍ನಲ್ಲಿ ಏನಿದೆ?: ಯುಗಾದಿ ಹಬ್ಬದಂದು 1ಚಕ್ರವರ್ತಿ’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದು, ದರ್ಶನ್ ಅಭಿಮಾನಿಗಳಿಗೆ ರಸದೌತಣ ನೀಡಿದೆ. ಟ್ರೇಲರ್ ರಿಲೀಸ್ ಆದ ಕೇವಲ 2 ಗಂಟೆಯಲ್ಲಿ 2 ಲಕ್ಷ ಮಂದಿ ಹಬ್ಬದ ಸಂಭ್ರಮದ ಮಧ್ಯೆಯೂ ವೀಕ್ಷಿಸಿದ್ದಾರೆ. ಪ್ರತಿ ಸ್ಟಾರ್‍ಗಳ ಸಿನಿಮಾ ಟ್ರೇಲರ್ ಬಂದಾಗಲೂ ಹೀಗಾಗುತ್ತದೆ. ಆದ್ರೆ ಈ ಬಾರಿ ಚಕ್ರವರ್ತಿ ದಾಖಲೆ ನಿರ್ಮಿಸಿದೆ.

ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

ಟ್ರೇಲರ್ ಬಗ್ಗೆ: ಮೊದಲೇಟಿಗೆ `ಟ್ರೆಲರ್‍ನಲ್ಲೇ ಇಷ್ಟೊಂದು ಸ್ಟನ್ನಿಂಗ್ ಸೀನ್ ಇವೆಯಲ್ಲ ಅಂತಾ ಅನಿಸೋದು ಸಹಜ. ಇಡೀ ಟ್ರೇಲರ್‍ನಲ್ಲಿ ಒಂದೇ ಒಂದು ಡೈಲಾಗ್ ಇಲ್ಲ. ಬರೀ ಚಿಕ್ಕ ಚಿಕ್ಕ ಶಾಟ್‍ಗಳು. ಎಡಿಟರ್ ಮಾತ್ರ ಸಿನಿಮಾದ ಗುಟ್ಟನ್ನು ಪೂರ್ತಿ ಬಿಟ್ಟು ಕೊಟ್ಟಿಲ್ಲ. ಮತ್ತು ಕತೆ ಏನೆನ್ನುವ ಸೂಚೆನೆಯನ್ನೂ ಕೊಟ್ಟಿದ್ದಾನೆ. ಅದನ್ನು ನೋಡುತ್ತಿದ್ದರೆ ಇಡೀ ಸಿನಿಮಾ ಸಿಕ್ಕಾ ಪಟ್ಟೆ ರಿಚ್ ಆಗಿ ಬಂದಿರುವುದಲ್ಲಿ ಅನುಮಾನನೇ ಇಲ್ಲ. ಯಾಕೆಂದರೆ ಪ್ರತಿಯೊಂದು ಶಾಟ್‍ನಲ್ಲಿ ಅದು ಕಾಣುತ್ತದೆ. ಒಂದು ನಿಮಿಷದಷ್ಟಿರುವ ಈ ಟ್ರೇಲರ್‍ನಲ್ಲಿ ದರ್ಶನ್ ಫುಲ್ ಮಿಂಚಿಂಗೋ ಮಿಂಚಿಂಗು.

ಢಿಫರೆಂಟ್ ಸ್ಟೈಲಿನಲ್ಲಿ ದರ್ಶನ್: ಮೂರು ಶೇಡ್‍ನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ ಎಂದು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಮೂರು ಮೂರು ಗೆಟಪ್‍ನಲ್ಲಿ ದರ್ಶನ್ ಸ್ಟೈಲಿಶ್ ಲುಕ್ ಕೊಟ್ಟಿದ್ದಾರೆ. ಎಂಬತ್ತರ ದಶಕದ ಬೆಲ್ ಬಾಟಮ್ ಪ್ಯಾಂಟು, ದೊಡ್ಡ ಕೊರಳ ಪಟ್ಟಿಯ ಶರ್ಟ್ ತೊಟ್ಟು, ಮಚ್ಚು ಹಿಡಿದು ಮ್ಯಾಜಿಕ್ ಮಾಡುವುದನ್ನು ನೋಡುವುದೇ ಒಂದು ಹಬ್ಬ. ಅದಕ್ಕೆ ದರ್ಶನ್ ಸಂಪೂರ್ಣ ಜೀವ ತುಂಬಿದ್ದಾರೆ. ಒಟ್ಟಿನಲ್ಲಿ ಚಿತ್ರದಲ್ಲಿ ಫ್ಯಾನ್ಸ್‍ಗಳಿಗೆ ಫಿದಾ ಆಗುವಂತೆ ದರ್ಶನ್ ನಟಿಸಿದ್ದಾರೆ.

ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

ಇಡೀ ಟ್ರೇಲರ್‍ನಲ್ಲಿ ಒಂದು ಕ್ಷಣವೂ ಕಣ್ಣು ಮುಚ್ಚುವಂತಹ ಶಾಟ್‍ಗಳಿಲ್ಲ. ಬಹುತೇಕ ವಿದೇಶದಲ್ಲಿ ಶೂಟಿಂಗ್ ಮಾಡಿರುವುದು ಚಿತ್ರಕ್ಕೆ ರಿಚ್‍ನೆಸ್ ತಂದು ಕೊಟ್ಟಿದೆ. ಹೆಲಿಕಾಪ್ಟರ್, ರೇಸಿಂಗ್ ಬೋಟ್, ಅಪ್ ಡೇಟೆಡ್ ಕಾರುಗಳು. ಹೀಗೆ ಎಲ್ಲವೂ ಕತೆಗೆ ಹೊಸತನ ನೀಡಿವೆ. ಬೋಟ್ ಚೇಸಿಂಗ್ ದೃಶ್ಯವೂ ಇದೆ. ಗನ್‍ಗಳಿಂದ ಬುಲೆಟ್ ಹಾರುವುದು, ಮಚ್ಚಿನಿಂದ ಕೊಚ್ಚುವುದು, ಖಡಕ್ ಫೈಟಿಂಗ್ ದ್ರಶ್ಯಗಳು ಥ್ರಿಲ್ ಕೊಡುತ್ತವೆ. ಕಡುಗಂದು ಬಣ್ಣದ ಹೇರ್ ಸ್ಟೈಲ್‍ನಲ್ಲಂತೂ ದರ್ಶನ್ ಮಾಡುವ ಮೋಡಿಗೆ ಅಭಿಮಾನಿಗಳು ಬೌಲ್ಡ್ ಆಗಿದ್ದಾರೆ. ಈ ಕಾರಣಕ್ಕಾಗಿ ಬುಧವಾರ ಚಕ್ರವರ್ತಿ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೆಂಡಿಂಗ್ ಆಗಿತ್ತು.

ಯಾರಿಗೆ ಯಾವ ಪಾತ್ರ: ಬಹುತೇಕ ಎಲ್ಲಾ ಪಾತ್ರಗಳನ್ನು ಇದರಲ್ಲಿ ನೋಡಬಹುದು. ಅದರಲ್ಲೂ ಡೆಡ್ಲಿ ಆದಿತ್ಯಾ ಇಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿದ್ದಾರೆ. ಭೂಗತ ದೊರೆಯನ್ನು ಬೇಟೆಯಾಡುವ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಹಿಂದೆ ಸ್ನೇಹಾನಾ-ಪ್ರೀತಿನಾ ಎನ್ನುವ ಚಿತ್ರದಲ್ಲಿ ಇವರಿಬ್ಬರೂ ನಟಿಸಿದ್ದರು. ಆ ಬಳಿಕ ದೊಡ್ಡ ಬಜೆಟ್ ಚಿತ್ರದಲ್ಲಿ ಕಾಣಿಸಿರುವುದು ಇದರಲ್ಲೇ. ಶರತ್ ಲೋಹಿತಾಶ್ವ ಮತ್ತೊಬ್ಬ ಪೊಲೀಸ್ ಅಧಿಕಾರಿಯಾಗಿದ್ದಾರೆ. ಕಳೆದೇ ಹೋಗಿದ್ದ ಶಿವಧ್ವಜ ಇಲ್ಲಿ ರಿಚ್ ಲುಕ್‍ನಲ್ಲಿ ಅಚ್ಚರಿ ಮೂಡಿಸುತ್ತಾರೆ. ದರ್ಶನ್ ಕುಚಿಕು ಗೆಳೆಯ ಸೃಜನ್ ಲೋಕೇಶ್ ಕೂಡ ಒಂದು ಪಾತ್ರ ಮಾಡಿದ್ದಾರೆ.

ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

ಭೂಗತ ದೊರೆಯಾಗಿ ದರ್ಶನ್: ಕತೆಯ ಗುಟ್ಟನ್ನು ಬಿಚ್ಚಿಡುವ ಪಂಚಿಂಗ್ ಲೈನ್‍ಗಳು ಸಂಪೂರ್ಣ ಇಂಗ್ಲಿಷ್‍ಮಯ. ಕೆಲವರಿಗೆ ಅರ್ಥ ಆಗುವುದು ಕಷ್ಟ. ಒಟ್ಟು ಹೀಗೆ ಬರೋಬ್ಬರಿ ಹದಿನೆಂಟು ಲೈನ್‍ಗಳಿವೆ. ಒಂದೊಂದು ಸಾಲು ಒಂದೊಂದು ಕತೆಯನ್ನು ಹೇಳುತ್ತದೆ. ಮೊದಲ ನೋಟಕ್ಕೆ ಗೊತ್ತಾಗುವ ಸಂಗತಿ ಅಂದ್ರೆ, ಇದೊಂದು ಭೂಗತ ಲೋಕದ ಕತೆ ಎನ್ನುವುದು. ದರ್ಶನ್ ಇಲ್ಲಿ ಇಡೀ ವಿಶ್ವದ ಭೂಗತ ಲೋಕವನ್ನು ಆಳುವ ದೊರೆಯಾಗಿ ಕಾಣಿಸಿದ್ದಾರೆ. ಬುದ್ಧಿವಂತಿಕೆ ಮತ್ತು ಕ್ರೈಂ ಎರಡನ್ನೂ ಹೊಂದಿರುವ ಹೀರೊ ಆಗಿ ಕಾಣಿಸಿದ್ದಾರೆ. ನಾಯಕನಿಗೆ ಯಾವುದೇ ಕಾನೂನು ತಡೆಯುವುದಿಲ್ಲ ಎನ್ನುವ ಸಾಲು ಇನ್ನಷ್ಟು ಕುತೂಹಲ ಮೂಡಿಸುತ್ತದೆ.

ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಚಕ್ರವರ್ತಿ: ಧೂಳೆಬ್ಬಿಸಿದೆ ದಚ್ಚು ದರ್ಬಾರ್

ಈ ಚಿತ್ರವನ್ನು ಚಿಂತನ್ ನಿರ್ದೇಶಿಸಿದ್ದು, ಇದು ಅವರ ಮೊದಲ ಸಿನೆಮವಾಗಿದೆ. ಒಟ್ಟಿನಲ್ಲಿ ದರ್ಶನ್ ತುಂಬಾ ಇಷ್ಟ ಪಟ್ಟು ಮಾಡಿರುವ ಸಿನಿಮಾ ಇದು. ಈ ಹಿಂದಿನ ಜಗ್ಗುದಾದಾ ಗೆದ್ದರೂ ಅದರಲ್ಲಿ ದರ್ಶನ್ ಫ್ಯಾನ್ಸ್‍ಗೆ ಕಿಕ್ ಕೊಡುವ ಅಂಶಗಳು ಕಮ್ಮಿ ಇದ್ದವು. ಆದರೆ ಚಕ್ರವರ್ತಿ ಅಭಿಮಾನಿಗಳ ಆಸೆಯನ್ನು ಪೂರೈಸಲಿದೆ. ಟ್ರೇಲರ್ ನೋಡಿದರೆ ಅದು ಇನ್ನೂ ಪಕ್ಕಾ ಆಗುತ್ತದೆ. ಮುಂದಿನ ತಿಂಗಳು ಏಪ್ರಿಲ್ 14ಕ್ಕೆ ರಾಜ್ಯ ಮತ್ತು ವಿದೇಶಗಳಲ್ಲಿ ರಿಲೀಸ್ ಆಗುವ ತಯಾರಿ ನಡೆಸಿದೆ. ದರ್ಶನ್ ಅಭಿಮಾನಿಗಳು ಈ ಚಿತ್ರವನ್ನು ಹೇಗೆ ಸ್ವಾಗತಿಸಬೇಕೆನ್ನುವ ಉಮೇದಿನಲ್ಲಿದ್ದಾರೆ. ಚಕ್ರವರ್ತಿ ದರ್ಶನಕ್ಕೆ ಕಾಯುವುದೊಂದೆ ಇವರ ಸದ್ಯದ ಕೆಲಸ. ಏನೇ ಆಗಲಿ ಏಪ್ರಿಲ್‍ನಲ್ಲಿ ಬೆಳ್ಳಿತೆರೆ ಅಲಂಕರಿಸಲಿರುವ ಚಕ್ರವರ್ತಿ ಗೆದ್ದು ಬೀಗಲಿ. ಈಗಾಗಲೇ ಟ್ರೇಲರ್ ನಲ್ಲಿ ದಾಖಲೆ ಬರೆದಿರುವ ಈ ಚಿತ್ರ ಕಲೆಕ್ಷನ್ ನಲ್ಲೂ ದಾಖಲೆ ಬರೆಯಲಿ ಎಂದು ದರ್ಶನ್ ಅಭಿಮಾನಿಗಳು ಹಾರೈಸುತ್ತಿದ್ದಾರೆ.

 

Click to comment

Leave a Reply

Your email address will not be published. Required fields are marked *

Advertisement
Advertisement