CrimeDistrictsKarnatakaLatestLeading NewsMain PostMysuruSandalwood
ಪತಿ, ಮಾವನ ವಿರುದ್ಧವೇ ದೂರು ದಾಖಲಿಸಿದ ನಟಿ ಚೈತ್ರಾ ಹಳ್ಳಿಕೇರಿ

ಮೈಸೂರು: ಪತಿ ಮತ್ತು ಮಾವನ ವಿರುದ್ಧವೇ ಚಲನಚಿತ್ರ ನಟಿ ಚೈತ್ರಾ ಹಳ್ಳಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪತಿ ಮತ್ತು ಮಾವ ತನ್ನ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿಕೊಂಡು ಗೋಲ್ಡ್ ಲೋನ್ ಪಡೆದಿದ್ದಾರೆ ಎಂದು ನಟಿ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ತಾಳಿ ಕಟ್ಟುವಾಗ ಕುಸಿದುಬಿದ್ದಂತೆ ವಧು ನಾಟಕ – ಕೊನೆ ಕ್ಷಣದಲ್ಲಿ ಮುರಿದುಬಿತ್ತು ಮದುವೆ
ಗಂಡ ಬಾಲಾಜಿ ಪೋತರಾಜ್ ಹಾಗೂ ಮಾವ ಪೋತರಾಜ್, ತಮ್ಮ ಸಹಿ ಫೋರ್ಜರಿ ಮಾಡಿ ಗೋಲ್ಡ್ ಪಡೆದಿದ್ದಾರೆ. ಇದರಲ್ಲಿ ಬ್ಯಾಂಕ್ ಮ್ಯಾನೇಜರ್ ಕೂಡಾ ಇದರಲ್ಲಿ ಶಾಮೀಲಾಗಿದ್ದಾರೆ. ನನಗೆ ವಂಚನೆ ಮಾಡಿ ಜೀವಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ನಟಿ ಉಲ್ಲೇಖಿಸಿದ್ದಾರೆ.