Connect with us

Bengaluru City

ವಿಡಿಯೋ: ಟ್ವಿಟ್ಟರ್‍ನಲ್ಲಿ ಆ ರೀತಿ ಸಾಲುಗಳು ಹಾಕಿದ್ದು ಯಾಕೆ? ಬುಲೆಟ್ ಪ್ರಕಾಶ್ ಹೇಳಿದ್ದಿಷ್ಟು

Published

on

ಬೆಂಗಳೂರು: ದೊಡ್ಡ ನಟನ ಸಣ್ಣತನ ಬಯಲು ಮಾಡ್ತೀನಿ ಎಂದಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಇದೀಗ ಆ ವ್ಯಕ್ತಿಯ ಹೆಸರು ಹೇಳಲ್ಲ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ವರದಿಗಾರರೊಂದಿಗೆ ಮಾತನಾಡಿದ ಬುಲೆಟ್ ಪ್ರಕಾಶ್, ಫಸ್ಟ್ ನನ್ನನ್ನು ನಾನು ಎಮೋಶನಲ್ ಆಗುವುದನ್ನು ನಿಲ್ಲಿಸಬೇಕು. ಹಾಗಾದ್ರೆ ಮಾತ್ರ ಇಂತಹ ಯಾವುದೇ ಘಟನೆ ನಡೆಯಲ್ಲ. ನನ್ನ ನೋವುಗಳನ್ನು ಎಲ್ಲರ ಮುಂದೆ ತೋಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿ ಆ ರೀತಿಯ ಸಾಲುಗಳನ್ನು ಟ್ವಿಟರ್ ನಲ್ಲಿ ಹಾಕಿಕೊಂಡಿದ್ದೆ ಎಂದು ಹೇಳಿದ್ದಾರೆ.

ಆದರೆ ಚಿತ್ರರಂಗದ ಹಿರಿಯರ ಮಾತಿನಂತೆ ನಾನು ಯಾವುದೇ ವಿಷಯವನ್ನು ಬಹಿರಂಗ ಮಾಡಲ್ಲ. ಹಾಗಾಗಿ ನನ್ನ ಹೇಳಿಕೆಯಿಂದ ಹಿಂದೆ ಸರೀತಿಲ್ಲ. ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಎಲ್ಲರೂ ಒಟ್ಟಾಗಿಯೇ ಇರ್ತೀವಿ. ನನ್ನ ಕಡೆಯಿಂದ ದಯವಿಟ್ಟು ಕ್ಷಮೆಯಿರಲಿ. ಯಾರಿಗಾದ್ರೂ ನನ್ನ ಹೇಳಿಕೆಯಿಂದ ನೋವಾಗಿದ್ರೆ ನನ್ನಿಂದ ದೊಡ್ಡ ಕ್ಷಮೆಯಿರಲಿ ಎಂದು ಕೇಳಿಕೊಂಡರು.

ಇದನ್ನೂ ಓದಿ: ಯಾರಿಗೂ ಹೆದ್ರೋ ಅವಶ್ಯಕತೆಯಿಲ್ಲ, ಆದ್ರೆ ಆ ವ್ಯಕ್ತಿಯ ಹೆಸ್ರು ಹೇಳಲ್ಲ: ಬುಲೆಟ್ ಪ್ರಕಾಶ್

ಎಲ್ಲ ಇಂಡಸ್ಟ್ರಿಗಳಲ್ಲಿ ಸಣ್ಣ ಪುಟ್ಟ ತೊಂದರೆಗಳಿರುತ್ತವೆ. ನಾವು ಹೆತ್ತ ಮಕ್ಕಳೇ ನಮ್ಮ ಮಾತು ಕೇಳಲ್ಲ. ಮನೆಯಲ್ಲಿ ನಾವು ಸಾಕಿರುವ ನಾಯಿಯೇ ಕೆಲವೊಂದು ಸಾರಿ ನಮ್ಮ ಮಾತನ್ನ ಕೇಳಲ್ಲ. ಅಂತಹ ವಿಚಾರಗಳೆಲ್ಲ ಹೇಳಕ್ಕಾಗಲ್ಲ. ಕೆಲವೊಬ್ಬರಿಗೆ ನಾವ್ಯಾಕೆ ಬೇರೆಯವರ ಮಾತು ಕೇಳಬೇಕು ಎಂಬ ಈಗೋ ಇರುತ್ತದೆ. ಈ ರೀತಿಯ ಈಗೋಗಳೆಲ್ಲ ಬಿಟ್ಟು ಕೆಲಸ ಮಾಡಿದ್ರೆ ಇಂಡಸ್ಟ್ರಿಯೂ ಚೆನ್ನಾಗಿ ಬೆಳೆಯುತ್ತದೆ ಹಾಗು ನಾವು ಬೆಳೀತೀವಿ ಅಂದ್ರು.

ಇದನ್ನೂ ಓದಿ: ಆ ‘ವ್ಯಕ್ತಿ’ಯಿಂದಾಗಿ ಕನ್ನಡ ಚಿತ್ರರಂಗ ಹಾಳಾಗಿದೆ: ಬುಧವಾರ ಸಿಡಿಯಲಿದೆ ಬುಲೆಟ್ ಬಾಂಬ್

ನನ್ನ ಬಗ್ಗೆ ಅಪ್ರಚಾರ ಮಾಡುತ್ತಿರುವರಿಗೆ ಖುಷಿ ಸಿಗುವ ಹಾಗೆ ಕಾಣುತ್ತಿದೆ. ಅವರಿಗೆಲ್ಲಾ ದೇವರು ಒಳ್ಳೇದು ಮಾಡ್ಲಿ. ಜನಗಳ ಪ್ರೀತಿಯಿಂದಾಗಿ ನಾನು ಇಲ್ಲಿಯವರೆಗೂ ಬಂದಿದ್ದೀನಿ. ಯಾವಾಗ ಹಿರಿಯರು ನನ್ನ ಕರೀತಾರೆ ಆ ವೇಳೆ ನಮ್ಮ ಗೊಂದಲಗಳನ್ನು ಬಗೆಹರಿಸಿಕೊಳ್ತಿವಿ ಅಂತ ಬುಲೆಟ್ ಪ್ರಕಾಶ್ ಹೇಳಿದ್ರು.

 

https://youtu.be/T7gvzCidopg

https://www.youtube.com/watch?v=2UMKw7vfQJ4

Click to comment

Leave a Reply

Your email address will not be published. Required fields are marked *