ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮಗಳ ಮೊದಲನೇ ವರ್ಷದ ಹುಟ್ಟುಹಬ್ಬವನ್ನ ದಂಪತಿ ವಿಶೇಷವಾಗಿ ಆಚರಿಸಿದ್ರು. ಮಗಳು ತ್ರಿದೇವಿ ಪೊನ್ನಕ್ಕ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ತಾರೆಗಳ ದಂಡೇ ಆಗಮಿಸಿತ್ತು. ತ್ರಿದೇವಿ ಜನಿಸಿದಾಗಿನಿಂದ ಭುವನ್ ಪೊನ್ನಣ್ಣ ಅದೃಷ್ಟವೇ ಬದಲಾಗಿದ್ದು, ಸಾಲು ಸಾಲು ಸಿನಿಮಾ ಆಫರ್‌ಗಳು ಬರ್ತಿದೆ.
ಹರ್ಷಿಕಾ, ಭುವನ್ ದಂಪತಿ ಮಗಳ ಹುಟ್ಟುಹಬ್ಬಕ್ಕೆ ಸಿನಿಮಾ, ರಾಜಕೀಯ ಗಣ್ಯರ ಉಪಸ್ಥಿತಿ ಇತ್ತು. ಈ ಸಂದರ್ಭದಲ್ಲಿ `ಬುಲ್ಲಿ’ ಸಿನಿಮಾ ತಂಡದಿಂದ ಭುವನ್‌ಗೆ ಮುಂಗಡ ಹಣದ ಚೆಕ್ ನೀಡಲಾಗಿದೆ. ಸದ್ಯಕ್ಕೆ ಭುವನ್ `ಹಲೋ 123′ ಚಿತ್ರದ ನಟನೆಯಲ್ಲಿ ತೊಡಗಿದ್ದಾರೆ.
ಖಾಸಗಿ ಹೋಟೇಲ್‌ನಲ್ಲಿ ಮಗಳ ಬರ್ತ್ಡೇ ಪಾರ್ಟಿ ಆಚರಿಸಿದ್ದ ಹರ್ಷಿಕಾ ಭುವನ್ ಆಹ್ವಾನಕ್ಕಾಗಿ ಸ್ಯಾಂಡಲ್‌ವುಡ್ ತಾರೆಗಳಾದ ರಮೇಶ್ ಅರವಿಂದ್, ಗಣೇಶ್, ಯೋಗರಾಜ್ ಭಟ್, ಕೆವಿಎನ್ ನಿರ್ಮಾಪಕ, ಜಯಮಾಲಾ, ಪ್ರಿಯಾಂಕ ಉಪೇಂದ್ರ, ಮಾಲಾಶ್ರೀ ಹಲವರು ಉಪಸ್ಥಿತರಿದ್ರು. ಇನ್ನು ರಾಜಕೀಯ ವಲಯದಿಂದ ಅಶ್ವಥ್ ನಾರಾಯಣ್, ಹ್ಯಾರಿಸ್, ರೋಷನ್ ಬೇಗ್ ಮುಂತಾದವರು ಆಗಮಿಸಿದ್ದರು. ಒಟ್ನಲ್ಲಿ ಮಗಳ ಆಗಮನದಿಂದ ನಟ ಭುವನ್ ಪೊನ್ನಣ್ಣಗೆ ಅದೃಷ್ಟ ಖುಲಾಯಿಸಿದೆ. ಪರಿಣಾಮ ಒಂದರ ಹಿಂದೊಂದು ಸಿನಿಮಾವನ್ನ ಘೋಷಿಸುತ್ತಿದ್ದಾರೆ.



