ಕಿರುತೆರೆ ಜನಪ್ರಿಯ Weekend With Ramesh-5 ಕಾರ್ಯಕ್ರಮಕ್ಕೆ ಖ್ಯಾತ ನಟ ಅವಿನಾಶ್ (Actor Avinash) ಅತಿಥಿಯಾಗಿ ಸಾಧಕರ ಸೀಟ್ ಅಲಂಕರಿಸಿದ್ದಾರೆ. ಈ ವಾರ ಅವಿನಾಶ್ ಅವರ ಬಾಲ್ಯ, ಕೆರಿಯರ್, ನಟಿ ಮಾಳವಿಕಾ ಜೊತೆಗಿನ ಮದುವೆ, ಪುತ್ರ ಗಾಲವ್ ಬಗ್ಗೆ ಅವಿನಾಶ್ ಮನಬಿಚ್ಚಿ ಮಾತನಾಡಿದ್ದಾರೆ.
Advertisement
ಸ್ಯಾಂಡಲ್‌ವುಡ್‌ನ ಸ್ಟಾರ್ ಜೋಡಿಗಳಲ್ಲಿ ಒಂದಾಗಿರುವ ಅವಿನಾಶ್- ಮಾಳವಿಕಾ (Actress Malavika) ಅವರದ್ದು ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದು, ಮೊದಲು ಭೇಟಿಯಾಗಿದ್ದು, ಮದುವೆ ಪ್ರಸ್ತಾಪ ಬಂದಿದ್ದು ಯಾರಿಂದ ಎಂಬ ಮಾಹಿತಿಯನ್ನ ನಟ ರಮೇಶ್ ಅರವಿಂದ್ (Ramesh Aravind) ಜೊತೆ ಅವಿನಾಶ್ ದಂಪತಿ ಹಂಚಿಕೊಂಡಿದ್ದಾರೆ. ಹಾಗೆಯೇ ದೇವರ ಮಗು ಗಾಲವ್ ಬಗ್ಗೆ ಭಾವುಕರಾಗಿದ್ದಾರೆ. ಇದನ್ನೂ ಓದಿ:‘ಅಗ್ನಿಸಾಕ್ಷಿ’ ಸೀರಿಯಲ್ ನಟ ಸಂಪತ್ ಜಯರಾಮ್ ಆತ್ಮಹತ್ಯೆ
Advertisement
Advertisement
ಕಿರುತೆರೆಯ ‘ಮಾಯಾಮೃಗ’ (Mayamruga) ಧಾರಾವಾಹಿಯಲ್ಲಿ ನಾವಿಬ್ಬರು ಒಟ್ಟಿಗೆ ಅಭಿನಯಿಸಿದ್ವಿ. ಸ್ನೇಹಿತರಾಗಿದ್ವಿ. ನಮ್ಮಿಬ್ಬರ ಮಧ್ಯೆ ವಯಸ್ಸಿನ ಅಂತರವಿತ್ತು. ಆದರೆ, ಇಬ್ಬರೂ ಯೋಚನೆ ಮಾಡುವ ರೀತಿ ಒಂದೇ ಇತ್ತು. ಒಟ್ಟಿಗೆ ಇರಬಹುದೇನೋ ಅಂತ ನನಗೆ ಅನಿಸಿತ್ತು. ಆದರೆ, ಕೇಳುವ ಧೈರ್ಯ ನನಗೆ ಇರಲಿಲ್ಲ ಎಂದರು ಅವಿನಾಶ್. ಮಾಳವಿಕಾ ಹಾಗೂ ಅವಿನಾಶ್ ಮಧ್ಯೆ ವಯಸ್ಸಿನ ಅಂತರ ಎಷ್ಟಿದೆ ಅಂದ್ರೆ. ಮಾಳವಿಕಾ 9 ವರ್ಷ ವಯಸ್ಸಿನಲ್ಲಿದ್ದಾಗ ಅವಿನಾಶ್ ಆಗಲೇ ಲೆಕ್ಚರರ್ ಆಗಿದ್ದರು. ಇವರಿಬ್ಬರು ಭೇಟಿಯಾಗಿದ್ದು ‘ಮಾಯಾಮೃಗ’ ಧಾರಾವಾಹಿಯ ಸೆಟ್‌ನಲ್ಲಿ.
Advertisement
ಮಾಯಾಮೃಗ ಶುರು ಆದ್ಮೇಲೆ ಇಬ್ಬರೂ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಒಂದು ದಿನ ಅವಿನಾಶ್ ಮನೆಗೆ ಮಾಳವಿಕಾ ಮನೆಗೆ ಬಂದಿದ್ದರು. ನನ್ನ ಮನಸ್ಸಿನಲ್ಲಿ ಬಂತು.. ನಮ್ಮ ಹುಡುಗಿನ ಮದುವೆ ಆಗ್ತೀಯಾ ಅಂತಾ ಮಾಳವಿಕಾ ತಾಯಿ ನೇರವಾಗಿ ಕೇಳಿದಾಗ ಅವಿನಾಶ್ ಶಾಕ್ ಆಗ್ಬಿಟ್ಟರು. ಮನೆಗೆ ಹೋಗಿ ಅಣ್ಣಂದಿರ ಜೊತೆ ಮಾತನಾಡಬೇಕು ಎಂದರು. ಹಾಂಗ್ ಕಾಂಗ್‌ನಿಂದ ಅಣ್ಣನನ್ನ ಕರೆಯಿಸಿ ಮಾಳವಿಕಾಳನ್ನ ನೋಡಿದರು. ನಾವು ಎಂಗೇಜ್‌ಮೆಂಟ್ ಮಾಡಲಿಲ್ಲ. ಫೆಬ್ರವರಿ 26ರಂದು ಮದುವೆ ಮಾಡಿಬಿಟ್ವಿ ಎಂದು ಮಾಳವಿಕಾ ತಾಯಿ ಸಾವಿತ್ರಿ ಮಾತನಾಡಿದರು.
ನಮ್ಮ ಮಗ ಗಾಲವ್. ದೈವ ಸಂಕಲ್ಪ ಇತ್ತು. ಅದಕ್ಕೆ ಗಾಲವ್ (Gaalav) ಹುಟ್ಟಿದ. ಗಾಲವ್ ಎಲ್ಲರಂತೆ ಅಲ್ಲ. ಅದು ಗೊತ್ತಾಗೋಕೆ ಒಂದಷ್ಟು ವರ್ಷ ಆಯ್ತು. 14 ವರ್ಷಗಳಲ್ಲಿ ಇದೇ ಮೊದಲ ಬಾರಿ ಗಾಲವ್ ಯಾವುದಾದರೂ ಸೆಟ್‌ಗೆ ಬಂದಿರೋದು. ಗಾಲವ್ ಹುಟ್ಟಿದಾಗ ಎಲ್ಲಾ ಮಕ್ಕಳ ತರಹ ಇರಲಿಲ್ಲ. ಒಬ್ಬೊಬ್ಬರು ಒಂದೊಂಥರ ಅವನ ಬಗ್ಗೆ ಮಾತನಾಡಿದರು. ಒಬ್ಬರು ಯಾವುದೋ ಯೋಗಿ ತರಹ ಇದ್ದಾನೆ ಅಂದರು. ಇನ್ನೊಬ್ಬರು ನಾರ್ಮಲ್ ಅಲ್ಲವೇ ಅಲ್ಲ ಎಂದರು. ಸುಮಾರು 50 ದಿನ ಐಸಿಯುನಲ್ಲಿದ್ದ. ನಂತರ ವಾಪಸ್ ಮನೆಗೆ ಬಂದ. ನಂತರ ಯಾವ ಅಪ್ಪ-ಅಮ್ಮನೂ ಮಾಡಿಸದೇ ಇರುವ ಒಂದು ಟೆಸ್ಟ್ ಮಾಡಿಸಿದ್ವಿ. ಯಾವ ಕಾರಣಕ್ಕೆ ಮಗು ಹೀಗೆ ಹುಟ್ಟತ್ತೆ ಅಂತ ತಿಳಿಯೋಕೆ. ಜೆನೆಟಿಕ್ ಟೆಸ್ಟ್ ಮಾಡಿದಾಗ ಗೊತ್ತಾಯಿತು Wolf Hirschhorn Syndrome ಇದೆ ಅಂತ. ಅದು ಯಾರಿಗೂ ಗೊತ್ತೇ ಇಲ್ಲ. ಯಾವ ನ್ಯೂರಾಲಜಿಸ್ಟ್ ಕೂಡ ನಮಗೆ ಹೇಳಲಿಲ್ಲ. ಈ ಸಿಂಡ್ರೋಮ್‌ನಲ್ಲಿ ಬುದ್ಧಿ ಮಾಂದ್ಯತೆ ಇದೆ. ಮಾತು ಬರೋದಿಲ್ಲ. ನಡಿಗೆ ಸ್ವಲ್ಪ ಮಟ್ಟಿಗೆ ಬರಬಹುದು. ಆಯಸ್ಸಿನ ಬಗ್ಗೆ ನಿಶ್ಚಿಯ ಇಲ್ಲ. ಜೆನೆಟಿಕ್ ಟೆಸ್ಟ್ ಬಳಿಕ ನಿಮ್ಮ ಕಾರಣಕ್ಕೂ ಮಗ ಹೀಗಿಲ್ಲ. ಅವಿನಾಶ್ ಕಾರಣಕ್ಕೂ ಮಗ ಹೀಗಿಲ್ಲ. ಯು ಆರ್ ಜಸ್ಟ್ ಅನ್‌ಲಕ್ಕಿ ಎಂದರು ಡಾಕ್ಟರ್. ಜಗತ್ತಿನಲ್ಲಿ 2000 ಮಕ್ಕಳು ಹೀಗಿದ್ದಾರೆ ಎಂದು ಡಾಕ್ಟರ್ ತಿಳಿಸಿದ್ದರು ಎಂದು ನಟಿ ಮಾಳವಿಕಾ ಮಾತನಾಡಿದ್ದಾರೆ.
ಗಾಲವ್‌ನ ನೋಡಿಕೊಳ್ಳೋದು ಕಾಳಿ ಎಂಬುವರು. ಅವರ ಬಗ್ಗೆ ಮಾತನಾಡಿದ ಮಾಳವಿಕಾ, ಕಾಳಿ ನಮ್ಮನೆ ಯಶೋದಾ. ನಾನು ಹೆತ್ತವಳು ಅಷ್ಟೇ. ಹುಟ್ಟಿದಾಗಿನಿಂದ ಗಾಲವ್‌ನ ನೋಡಿಕೊಂಡಿರುವುದು ಕಾಳಿ ಅವರು. ಇನ್ನೂ ಮಗನ ಬಗ್ಗೆ ಮಾತನಾಡಿದ ಅವಿನಾಶ್, ದೇವರು ನಮ್ಮ ಜೊತೆ ಇದ್ದಾನೆ. ಒಂದು ದಿನ ಇವನು ದೇವರ ಜೊತೆ ಹೋಗ್ತಾನೆ ಎಂದು ಮಾತನಾಡಿದ್ದಾರೆ.