ಹಾಸನ: ಚೆಕ್ ಬೌನ್ಸ್ (Check Bounce) ಕೇಸ್‌ನಲ್ಲಿ ಚಲನಚಿತ್ರ ನಟ ನೀನಾಸಂ ಅಶ್ವಥ್ (Ashwath Ninasam) ಅವರನ್ನು ಹಾಸನ (Hassan) ಪೊಲೀಸರು ಬಂಧಿಸಿದ್ದರು. ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರ ಬಳಿ ತಪ್ಪೊಪ್ಪಿಕೊಂಡು 25% ರಷ್ಟು ಹಣ ಪಾವತಿಸಿದ ಬಳಿಕ ನಟನನ್ನು ಬಿಡುಗಡೆ ಮಾಡಲಾಗಿದೆ.
ಹಾಸನ ಮೂಲದ ರೋಹಿತ್ ಎಂಬವರಿಂದ ನಟ ಅಶ್ವಥ್ ಹಸುಗಳನ್ನ ಖರೀದಿ ಮಾಡಿ 1.5 ಲಕ್ಷದ ಚೆಕ್ ನೀಡಿದ್ದರು. ರೋಹಿತ್ ಬ್ಯಾಂಕ್‌ಗೆ ಚೆಕ್ ಹಾಕಿದಾಗ ಬೌನ್ಸ್ ಆಗಿತ್ತು. ಈ ಸಂಬಂಧ ರೋಹಿತ್ ಹಾಸನದ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದು, ಕೋರ್ಟ್ ನಾಲ್ಕು ಬಾರಿ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ಇದನ್ನೂ ಓದಿ: ‘ಘೋಸ್ಟ್’ ಚಿತ್ರದ ಬಿಗ್ ಡ್ಯಾಡಿ ಪೋಸ್ಟರ್ ಔಟ್- ಕಿಕ್ ಕೊಡ್ತಿದೆ ಶಿವಣ್ಣ ಲುಕ್
Advertisement
Advertisement
ನಾಲ್ಕೂ ಬಾರಿಯೂ ನಟ ಅಶ್ವಥ್ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಐದನೇ ಬಾರಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಹಾಸನ ಬಡಾವಣೆ ಠಾಣೆ ಪೊಲೀಸರು ಶನಿವಾರ ರಾತ್ರಿ ಅಶ್ವಥ್ ಅವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
Advertisement
Advertisement
ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡ ಅಶ್ವಥ್ ಈಗಲೇ 25% ರಷ್ಟು ಹಣ ಪಾವತಿಸುತ್ತೇನೆ ಎಂದು ಉಳಿದ ಹಣ ನೀಡಲು ನ್ಯಾಯಾಧೀಶರಿಂದ ಸಮಯ ಪಡೆದಿದ್ದಾರೆ. 25% ರಷ್ಟು ಹಣ ಪಾವತಿ ಮಾಡಿದ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ನಟನನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಮನೆಗೆ ಉಮಾಶ್ರೀ- ಪದ್ಮಾವಾಸಂತಿ ಭೇಟಿ
Web Stories