Marriage Album: ನಟ ಆಶಿಶ್ ವಿದ್ಯಾರ್ಥಿ ಹಾಗೂ ರೂಪಾಲಿ ಮದುವೆ ಆಲ್ಬಂ

Public TV
2 Min Read
Ashish Vidyarthi 12

ನ್ನಡವೂ ಸೇರಿದಂತೆ ಭಾರತೀಯ ಸಿನಿಮಾ ರಂಗದ ನಾನಾ ಭಾಷೆಗಳಲ್ಲಿ ನಟಿಸಿರುವ ಹಿರಿಯ ನಟ ಆಶಿಶ್ ವಿದ್ಯಾರ್ಥಿಯು ತಮ್ಮ 60ನೇ ವಯಸ್ಸಿಗೆ 2ನೇ ಮದುವೆ ಆಗಿರುವ ವಿಚಾರ ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಜೊತೆಗೆ ಅಚ್ಚರಿಯನ್ನು ತಂದಿತ್ತು.

Ashish Vidyarthi 4

ಆಶಿಶ್ ವಿದ್ಯಾರ್ಥಿ (Ashish Vidyarthi) ತಮ್ಮ 60ನೇ ವಯಸ್ಸಿಗೆ 2ನೇ ಮದುವೆಯಾಗಿರೋದು ಚಿತ್ರೋದ್ಯಮಕ್ಕೆ ಮಾತ್ರವಲ್ಲ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಫ್ಯಾಷನ್ ಇಂಡಸ್ಟ್ರಿಯ ಉದ್ಯಮಿ ರೂಪಾಲಿ (Roopali) ಜೊತೆ ದಾಂಪತ್ಯ (Wedding) ಜೀವನಕ್ಕೆ ನಟ ಕಾಲಿಟ್ಟಿದ್ದಾರೆ.

Ashish Vidyarthi 5

ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಈ ಹಿಂದೆ ರಾಜೋಶಿ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಈಗ ಆ ದಾಂಪತ್ಯಕ್ಕೆ ಸಾಕಷ್ಟು ವರ್ಷಗಳ ಹಿಂದೆಯೇ ಬ್ರೇಕ್ ಬಿದ್ದಿದೆ. ಹಾಗಾಗಿ ಒಂಟಿಯಾಗಿಯೇ ಆಶಿಶ್ ಜೀವನ ನಡೆಸುತ್ತಿದ್ದರು.

Ashish Vidyarthi 6

ಮದುವೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ‘ಒಂಟಿ ಜೀವನ ಸಾಕೆನಿಸಿತು. ಅದೊಂದು ರೀತಿಯ ಜೀವನವೇ ಅಲ್ಲ ಅನಿಸಿತು. ಹಾಗಾಗಿ 2ನೇ ಮದುವೆ ಬಗ್ಗೆ ಯೋಚನೆ ಮಾಡಿದೆ. ಜೀವನ ಸಣ್ಣದು ಪ್ರೀತಿ ಹಂಚಿಕೊಂಡು ಬದುಕೋನ ಅನಿಸಿದ್ದರಿಂದ ಮತ್ತೊಂದು ಮದುವೆಯಾದೆ ಅಂದಿದ್ದರು.

Ashish Vidyarthi 7

ಉದ್ಯಮಿ ರೂಪಾಲಿ ಅವರನ್ನ ಆಶಿಶ್ ಕೊಲ್ಕತ್ತಾದ ಕ್ಲಬ್‌ನಲ್ಲಿ ಮೇ 25ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೇ 25 ರಂದು ಕ್ಲಬ್ ನಲ್ಲಿ ನಾನಾ ರೀತಿಯ ಮನರಂಜನೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

Ashish Vidyarthi 8

ನಮ್ಮ ಮದುವೆ ಸಿಂಪಲ್ ಆಗಿ ನಡೆಯಬೇಕೆಂದು ಆಸೆ ಇತ್ತು ಅದೇ ರೀತಿ ಆಯಿತು. ಖುಷಿಯಿದೆ. ಸದ್ಯದಲ್ಲೇ ನಮ್ಮಿಬ್ಬರ ಭೇಟಿ ಬಗ್ಗೆ ಎಲ್ಲವನ್ನೂ ಹೇಳುವೆ ಎಂದು ಆಶಿಶ್ ಮಾತನಾಡಿದ್ದಾರೆ. ಅಲ್ಲದೇ, ಹೊಸ ಜೀವನಕ್ಕೆ ಕಾಲಿಟ್ಟ ಖುಷಿಯಲ್ಲಿ ಹೆಂಡತಿಯ ಜೊತೆ ಕುಣಿದು ಕುಪ್ಪಳಿಸಿದ್ದಾರೆ.

Ashish Vidyarthi 1

ಇವರಿಬ್ಬರ ಮೊದಲ ಭೇಟಿ ಕೋಲ್ಕೊತ್ತಾದಲ್ಲಿ ಆಗಿದೆ ಎಂದು ವರದಿಯಾಗಿದೆ. ಪರಿಚಯ ನಂತರದ ದಿನಗಳಲ್ಲಿ ಸ್ನೇಹವಾಗಿ. ಆ ನಂತರ ಪ್ರೇಮಿಗಳಾಗಿ ಇದೀಗ ಸತಿ ಪತಿಗಳಾಗಿದ್ದಾರೆ. ಈ ವಿಷಯವನ್ನು ಸ್ವತಃ ಆಶಿಶ್ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

Ashish Vidyarthi 3

ಮದುವೆಯಲ್ಲಿ ಈ ದಂಪತಿ ಧರಿಸಿದ್ದ ವಸ್ತ್ರ ಮತ್ತು ಆಭರಣಗಳು ಕೂಡ ಗಮನ ಸೆಳೆದಿವೆ. ರೂಪಾಯಿ ಅಸ್ಸಾಂನ ಬಿಳಿ ಮತ್ತು ಗೋಲ್ಡನ್ ಮೆಖೇಲಾ ಚಾದರ್ ಧರಿಸಿದ್ದರು. ಜೊತೆಗೆ ದಕ್ಷಿಣ ಭಾರತದ ದೇವಾಲಯ ಕಲೆಯಿಂದ ಪ್ರೇರಿತವಾದ ಚಿನ್ನದ ಆಭರಣಗಳನ್ನು ಅಂದು ಧರಿಸಿದ್ದರು.

Share This Article