ಕನ್ನಡ ಮಾತ್ರವಲ್ಲದೇ ಬಹುಭಾಷೆಯಲ್ಲಿ ನಟಿಸಿರುವ ಆಶಿಶ್ ವಿದ್ಯಾರ್ಥಿ (Ashish Vidyarthi) ಅವರು ತಮ್ಮ 60ನೇ ವಯಸ್ಸಿಗೆ 2ನೇ ಮದುವೆಯಾಗಿರೋದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಫ್ಯಾಷನ್ ಇಂಡಸ್ಟ್ರಿಯ ಉದ್ಯಮಿ ರೂಪಾಲಿ (Roopali) ಜೊತೆ ದಾಂಪತ್ಯ (Wedding) ಜೀವನಕ್ಕೆ ನಟ ಕಾಲಿಟ್ಟಿದ್ದಾರೆ.
ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ ಅವರು ಈ ಹಿಂದೆ ರಾಜೋಶಿ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಈಗ ಆ ದಾಂಪತ್ಯಕ್ಕೆ ಸಾಕಷ್ಟು ವರ್ಷಗಳ ಹಿಂದೆಯೇ ಬ್ರೇಕ್ ಬಿದ್ದಿದೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್ಗೆ ಸಿಕ್ತು ಸಿಹಿಸುದ್ದಿ
ಉದ್ಯಮಿ ರೂಪಾಲಿ ಅವರನ್ನ ಇದೀಗ ನಟ ಆಶಿಶ್ 2ನೇ ಮದುವೆಯಾಗಿದ್ದಾರೆ. ಕೊಲ್ಕತ್ತಾದ ಕ್ಲಬ್ನಲ್ಲಿ ಮೇ25ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ನಟ ಆಶಿಶ್ ಮದುವೆಯಾಗಿದ್ದಾರೆ. ನಮ್ಮ ಮದುವೆ ಸಿಂಪಲ್ ಆಗಿ ನಡೆಯಬೇಕೆಂದು ಆಸೆ ಇತ್ತು ಅದೇ ರೀತಿ ಆಯಿತು. ಖುಷಿಯಿದೆ. ಸದ್ಯದಲ್ಲೇ ನಮ್ಮಿಬ್ಬರ ಭೇಟಿ ಬಗ್ಗೆ ಎಲ್ಲವನ್ನೂ ಹೇಳುವೆ ಎಂದು ಆಶಿಶ್ ಮಾತನಾಡಿದ್ದಾರೆ.