ಮುಂಬೈ: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಭಾರತದಲ್ಲೂ ಕೊರೊನಾ ಹಾವಳಿ ಹೆಚ್ಚಾಗಿದ್ದು, ಈ ಸಂಕಷ್ಟದ ಸಮಯದಲ್ಲಿ ಕೆಲ ನಟ-ನಟಿಯರು ನರ್ಸ್ ಆಗಿ, ಕಾಲ್ ಸೆಂಟರ್‍ನಲ್ಲಿ ಕೆಲಸ ಮಾಡುತ್ತಾ, ಬಡವರಿಗೆ ಸಹಾಯ ಮಾಡುತ್ತಾ ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಕೈಜೊಡಿಸಿದ್ದಾರೆ.
Advertisement
ಈಗ ಬಾಲಿವುಡ್ ನಟ ಆಶೀಶ್ ಗೋಕಲೆ ಕೂಡ ಕೊರೊನಾ ಹೋರಾಟದಲ್ಲಿ ದೇಶಕ್ಕೆ ಸಾಥ್ ನೀಡುತ್ತಿದ್ದು, ವೈದ್ಯಕೀಯ ವೃತ್ತಿ ಮಾಡುತ್ತಾ ಸೋಂಕಿತರ ಸೇವೆ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಆಶೀಶ್ ಅವರು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಾ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ.
Advertisement
https://www.instagram.com/p/B9yG-4kJVqg/
Advertisement
ಈ ಬಗ್ಗೆ ಆಶೀಶ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಜನರ ಸೇವೆ ಮಾಡುತ್ತಿರುವುದರಿಂದ ನನಗೆ ನೆಮ್ಮದಿ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್ ನಲ್ಲಿ `ಎಲ್ಲರೂ ಕಣ್ಣು ಬಿಟ್ಟು ನೋಡಿ, ಮೆಕ್ಕಾ ಮತ್ತು ಮದೀನಾ ಬಂದ್ ಆಗಿದೆ. ವ್ಯಾಟಿಕನ್ ಬಂದ್ ಆಗಿದೆ. ತಿರುಪತಿ ಮತ್ತು ಶಿರಡಿ ಕೂಡ ಬಂದ್ ಆಗಿದೆ. ಆದರೆ ಆಸ್ಪತ್ರೆ ಸಿಬ್ಬಂದಿ, ನರ್ಸ್‍ಗಳು ಮತ್ತು ವೈದ್ಯರು 24*7 ಕೆಲಸ ಮಾಡುತ್ತಿದ್ದಾರೆ ಎಂದು ಬರೆದುಕೊಂಡು ತಮ್ಮ ವೃತ್ತಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
Advertisement
https://www.instagram.com/p/B94JQmYJwTQ/
ಸದ್ಯ ಕೊರೊನಾ ಮಾಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತದ ಜೊತೆಗೆ ಆಶೀಶ್ ನಿಂತಿದ್ದು, ವೈದ್ಯರಾಗಿ ಸೇವೆ ಸಲ್ಲಿಸುತ್ತ ರಣಕೇಕೆ ಹಾಕುತ್ತಿರುವ ಕೊರೊನಾ ವಿರುದ್ಧ ಹಗಲಿರುಳು ಹೋರಾಡುತ್ತಿದ್ದಾರೆ.
ವೈದ್ಯಕೀಯ ವೃತ್ತಿ ಜೊತೆಗೆ ಆಶೀಶ್ ಧಾರಾವಾಹಿ, ಸಿನಿಮಾದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಜೊತೆಗೆ ಈ ಹಿಂದೆ ಆಶೀಶ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಅವಕಾಶ ಸಿಕ್ಕ ಬಳಿಕ ಆಶೀಶ್ ಸಿನಿಮಾರಂಗದಲ್ಲೇ ಉಳಿಯಲಿಲ್ಲ. ಬದಲಿಗೆ ತಮ್ಮ ವೈದ್ಯಕೀಯ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದು, ಇಂದು ಸಂಕಷ್ಟದಲ್ಲಿರುವ ದೇಶಕ್ಕೆ ಭರವಸೆಯ ಬೆಳಕಾಗಿ, ರೋಗಿಗಳ ಪ್ರಾಣ ಕಾಪಾಡುವ ಮಾಹತ್ಕಾರ್ಯ ಮಾಡುತ್ತಿದ್ದಾರೆ.
https://www.instagram.com/p/B-CQvc0phBx/