ಬೆಡ್ ರೂಂ, ಕ್ಲೋಸ್ ಅಪ್ ಸೀನ್ ಇದ್ದ ಚಿತ್ರವನ್ನ ಯಾಕೆ ಮಾಡ್ಬೇಕು – ಶ್ರುತಿ ವಿರುದ್ಧ ಅರ್ಜುನ್ ಸರ್ಜಾ ಅತ್ತೆ ಕಿಡಿ

Public TV
2 Min Read
ARJUN SARJA ATTE

ಬೆಂಗಳೂರು: ಬೆಡ್ ರೂಮ್ ಮತ್ತು ಕ್ಲೋಸ್ ಆಪ್ ಸೀನ್ ಇದ್ದ ಚಿತ್ರವನ್ನು ನಟಿಯರು ಒಪ್ಪಿಕೊಂಡು ಆಮೇಲೆ ಇಂತಹ ಆರೋಪ ಯಾಕೆ ಮಾಡಬೇಕು ಎಂದು ಅರ್ಜುನ್ ಸರ್ಜಾ ಅತ್ತೆ ಪಾರ್ವತಮ್ಮ ಶ್ರುತಿ ಹರಿಹರನ್‍ಗೆ ಟಾಂಗ್ ಕೊಟ್ಟಿದ್ದಾರೆ.

ಕಳೆದ ವರ್ಷ ‘ವಿಸ್ಮಯ’ ಸಿನಿಮಾದಲ್ಲಿ ನಟ ಅರ್ಜುನ್ ಸರ್ಜಾ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಶೃತಿ ಹರಿಹರನ್ ಗಂಭೀರ ಆರೋಪವನ್ನು ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕಿಯಿಸಿರುವ ಅರ್ಜುನ್ ಸರ್ಜಾ ಅವರ ಅತ್ತೆ ಪಾರ್ವತಮ್ಮ ಅವರು, ಬೆಡ್ ರೂಮ್ ಮತ್ತು ಕ್ಲೋಸ್ ಆಪ್ ಸೀನ್ ಇದ್ದ ಚಿತ್ರವನ್ನು ನಟಿಯರು ಒಪ್ಪಿಕೊಂಡು ಆಮೇಲೆ ಇಂತಹ ಆರೋಪ ಯಾಕೆ ಮಾಡಬೇಕು. ಈ ಸೀನ್ ಗಳಿಗೆ ಒಪ್ಪಿ ಆಮೇಲೆ ಅಯ್ಯೋ ನಂಗೆ ಹಂಗ್ ಮಾಡಿದರು, ಹಿಂಗ್ ಮಾಡಿದ್ರು ಅಂತ ದೂರುವ ಬದಲು ನಿಯತ್ತಾಗಿ ಸಂಸಾರ ಮಾಡಲಿ ಎಂದು ಶೃತಿ ಹರಿಹರನ್ ವಿರುದ್ಧ ಕಿಡಿ ಕಾರಿದ್ದಾರೆ.

SARJA SHRUTI

ನಮ್ಮ ಅರ್ಜುನ್ ಅಂತಹ ವ್ಯಕ್ತಿ ಅಲ್ಲ. ಅವರು ಗಟ್ಟಿ ಚಿನ್ನ. ಇದುವರೆಗೆ ಅಂತಹ ಆರೋಪ ಯಾರೂ ಕೂಡ ಮಾಡಿಲ್ಲ. ಈ ಆರೋಪವನ್ನು ಘಟನೆ ನಡೆದ ದಿನವೇ ಶ್ರುತಿ ಯಾಕೆ ಮಾಡಿಲ್ಲ. ಸತ್ತ ಪ್ರಕರಣಕ್ಕೆ ಈಗ ಯಾಕೆ ಮರುಜೀವ ಕೊಡಬೇಕು? ಇದೆಲ್ಲ ಪಬ್ಲಿಸಿಟಿ ಗಿಮಿಕ್ ಅಷ್ಟೇ. ಅರ್ಜುನ್ ಬಗ್ಗೆ ಯಾರು ಏನೇ ಹೇಳಿದರೂ ನಾವು ನಂಬಲ್ಲ. ಇದು ಚಿತ್ರರಂಗ, ನಟಿಯರು ಕೂಡ ತಮಗೆ ಅನ್ ಕಂಫರ್ಟಬೆಲ್ ಅನಿಸುವ ಪಾತ್ರಗಳನ್ನು ಒಪ್ಪಿಕೊಳ್ಳಲು ಹೋಗಬಾರದು. ಒಪ್ಪಿಕೊಂಡ ಮೇಲೆ ಈ ರೀತಿ ಆಪಾದನೆಯನ್ನು ಮಾಡಬಾರದು. ಈ ಘಟನೆಯಿಂದ ನಮಗೆ ನೋವಾಗಿದೆ. ನಾನು ಇನ್ನಷ್ಟೇ ಮಗಳು, ಅಳಿಯನ ಜೊತೆ ಮಾತಾನಾಡಬೇಕಾಗಿದೆ ಎಂದು ಹೇಳಿದ್ದಾರೆ.

ATTE

ಆರೋಪವೇನು?:
ಕಳೆದ ವರ್ಷ ‘ವಿಸ್ಮಯ’ ಅನ್ನೋ ಸಿನಿಮಾವೊಂದನ್ನು ನಾನು ಮಾಡಿದ್ದೆ. ಚಿತ್ರದಲ್ಲಿ ನಾನು ಅವರ ಹೆಂಡತಿಯಾಗಿ ನಟಿಸುತ್ತಿದ್ದೆ, ಅದರ ಪ್ರಾಕ್ಟೀಸ್ ಮಾಡುತ್ತಿದ್ದೆವು. ಆಗ ಸರ್ಜಾ ‘ಇನ್ನೊಂಚೂರು ಹೀಗೆ ಪ್ರಾಕ್ಟೀಸ್ ಮಾಡಬಹುದಲ್ವಾ?’ ಅಂತ ಹೇಳಿ ಅವರು ನನ್ನನ್ನು ಜೋರಾಗಿ ತಬ್ಬಿಕೊಂಡರು. ಅವರ ಆ ಅಪ್ಪುಗೆಯಿಂದ ಒಮ್ಮೆಲೆ ನಾನು ತಬ್ಬಿಬ್ಬಾಗಿದ್ದು, ಆ ವರ್ತನೆ ತುಂಬಾನೇ ಅಸಹ್ಯವಾಗಿತ್ತು. ಇದರಿಂದ ನನಗೆ ಇರಿಸು ಮುರುಸು ಉಂಟಾಗಿದ್ದು, ಕೂಡಲೇ ನಿರ್ದೇಶಕರ ಬಳಿ ತೆರಳಿ ‘ಇನ್ನು ಮುಂದೆ ನಾನು ರಿಹರ್ಸಲ್ ಗೆ ಬರಲ್ಲ, ಬರೀ ಶೂಟಿಂಗ್ ಗಷ್ಟೇ ಕರೆಯಿರಿ’ ಅಂತ ಹೇಳಿ ಬಂದುಬಿಟ್ಟೆ. ಆ ಬಳಿಕ ನಾನು ಬರೀ ಶೂಟಿಂಗ್ ಗೆ ಮಾತ್ರ ಹೋಗಿ ಬರುತ್ತಿದ್ದೆ ಅಂತ ಶೃತಿ ಹೇಳಿದ್ದರು.

Arjun Sarja Images

ಇಷ್ಟೆಲ್ಲಾ ಆದ್ರೂ ಅರ್ಜುನ್ ಸರ್ಜಾ ಮಾತ್ರ ವಿಚಲಿತನಾದಂತೆ ಕಾಣಲಿಲ್ಲ. ಯಾಕಂದ್ರೆ ಅದಾದ ಬಳಿಕ ಅವರು ನನ್ನ ಜೊತೆ ಮಾತನಾಡುವಾಗಲೂ ಬಳಸಿದ ಭಾಷೆ ಸಭ್ಯವಾಗಿರಲಿಲ್ಲ. ಪದೇ ಪದೇ ಡಿನ್ನರ್ ಗೆ ಕರೆಯುತ್ತಿದ್ದರು. ‘ರೆಸಾರ್ಟ್ ಗೆ ಹೋಗೋಣ ಬಾ’ ಎಂದು ಕರೆಯಲು ಆರಂಭಿಸಿದ್ರು. ಹೀಗೆ ಕರೆಯುವಾಗ ನಾನು ನೇರವಾಗಿ ‘ಇಲ್ಲ, ನಾನು ಬರಲ್ಲ’ ಅಂತ ಹೇಳುತ್ತಿದ್ದೆನು. ನನ್ನ ಈ ಮಾತುಗಳನ್ನೂ ಅವರು ಗಂಭೀರವಾಗಿ ತೆಗೆದುಕೊಳ್ಳುತ್ತಿರಲಿಲ್ಲ. ‘ನೋ ಅಂದ್ರೆ ನೋ’ ಎಂಬುದರ ಅರ್ಥವೇ ಅವರಿಗೆ ಆಗುತ್ತಿಲ್ಲವಲ್ಲ ಅಂತ ನನಗೆ ನಿಜವಾಗಿಯೂ ಅಚ್ಚರಿಯಾಗುತ್ತಿತ್ತು. ಯಾಕಂದ್ರೆ ಅವರಿಗೆ ಹೀಗೆ ಕರೆದಾಗ ಯಾರೂ `ನೋ’ ಅಂತ ಹೇಳಿರಲಿಲ್ಲವೋ ಏನೋ, ಅದಕ್ಕೆ ಅವರು ನನ್ನ ನೇರ ಮಾತುಗಳನ್ನು ಕಡೆಗಣಿಸುತ್ತಿದ್ದರು ಅಂತ ಅವರು ತನಗಾದ ಅನುಭವವನ್ನು ಬಿಚ್ಚಿಟ್ಟಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=Pvb9crCfEe4

https://www.youtube.com/watch?v=OT35pZGgGtY

Share This Article
Leave a Comment

Leave a Reply

Your email address will not be published. Required fields are marked *