ತನಗಿಂತ 12 ವರ್ಷ ಹಿರಿಯ ನಟಿಯ ಜೊತೆ ಅರ್ಜುನ್ ಕಪೂರ್ ಮದುವೆ?

Public TV
1 Min Read
Arjun kapoor 1

ಮುಂಬೈ: ಪ್ರೀತಿಗೆ ಕಣ್ಣಿಲ್ಲ. ಪ್ರೇಮಿಗಳು ಒಬ್ಬರಿಗೊಬ್ಬರು ಇಷ್ಟಪಟ್ಟರೆ ವಯಸ್ಸಿನ ಅಂತರವೂ ಗೊತ್ತಾಗಲ್ಲ ಎಂಬ ಮಾತನ್ನು ಕೇಳಿರುತ್ತೇವೆ. ಇತ್ತೀಚೆಗೆ ನಟಿ ಪ್ರಿಯಾಂಕ ಚೋಪ್ರಾ ತಮಗಿಂತ 10 ವರ್ಷ ಚಿಕ್ಕವನಾದ ನಿಕ್ ಜೋನ್ಸ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಇದೀಗ ನಿರ್ಮಾಪಕ ಬೋನಿ ಕಪೂರ್ ಮಗ, 33 ವರ್ಷದ ಅರ್ಜುನ್ ಕಪೂರ್ ತನಗಿಂತ 12 ವರ್ಷ ಹಿರಿಯ ನಟಿ ಮಲೈಕಾ ಅರೋರ ಜೊತೆ ಮುಂದಿನ ವರ್ಷ ಮದುವೆ ಆಗಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

Arjun kapoor 2

ಇತ್ತೀಚಿನ ಕೆಲವು ದಿನಗಳಲ್ಲಿ ಅರ್ಜುನ್ ಕಪೂರ್ ಮತ್ತು 45 ವರ್ಷದ ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಇಬ್ಬರ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡಿದುತಿತ್ತು. ಆದ್ರೆ ಇಬ್ಬರು ಒಂದು ವರ್ಷದಿಂದ ಸಾರ್ವಜನಿಕವಾಗಿ ಇಬ್ಬರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮಲೈಕಾ ಅರೋರಾ ಖಾಸಗಿ ವಾಹಿನಿಯ ರಿಯಾಲಿಟಿ ಶೋದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದ ಕಾರ್ಯಕ್ರಮದಲ್ಲಿ ಅರ್ಜುನ್ ಭಾಗಿಯಾಗಿದ್ದರು. ಸಿನಿಮಾ ಪ್ರಮೋಶನ್ ಅಂತಾ ಮೇಲ್ನೋಟಕ್ಕೆ ಹೇಳಿದ್ರೂ, ಮಲೈಕಾ ಪ್ರೀತಿಗಾಗಿ ಅರ್ಜುನ್ ಭಾಗಿಯಾಗಿದ್ದರು ಎಂಬುವುದು ಇನ್ ಸೈಡ್‍ಸ್ಟೋರಿ.

Arjun kapoor 3

ಇದೂವರೆಗೂ ಮಲೈಕಾ ಅಥವಾ ಅರ್ಜುನ್ ತಮ್ಮ ಪ್ರೀತಿ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ತಾವಿಬ್ಬರು ಪ್ರೀತಿಯಲ್ಲಿ ಇರೋದನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಮಾಧ್ಯಮಗಳ ಮುಂದೆ ನಾವಿಬ್ಬರು ಒಳ್ಳೆಯ ಗೆಳೆಯರು ಎಂಬುದನ್ನು ಹೇಳುತ್ತಾ ಬಂದಿದ್ದಾರೆ. ಮಲೈಕಾ ಈಗಾಗಲೇ ಪತಿ ಅರ್ಬಾಜ್ ಖಾನ್ ಗೆ ವಿಚ್ಛೇದನ ನೀಡಿ 16 ವರ್ಷದ ಮಗ ಅರ್ಹಾನ್ ಖಾನ್ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಇತ್ತೀಚೆಗೆ ಮಲೈಕಾ ಪತಿ, ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ತಮ್ಮ ಹೊಸ ಗೆಳತಿ ಜಾರ್ಜಿಯಾ ಆಂಡ್ರಿಯಾನಿ ಜೊತೆ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *