ದೈವದ ಕುರಿತಾದ ಸಿನಿಮಾವೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಕನ್ನಡ ಸಿನಿಮಾದಲ್ಲಿ ದೈವದ ಚಿತ್ರೀಕರಣ ನಡೆದಿರೋದು ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದೆ. ‘ಕಲ್ಜಿಗ’ (Kaljiga Film) ಸಿನಿಮಾದಲ್ಲಿ ಕೊರಗಜ್ಜ ದೈವದ ಅನುಕರಣೆ ಮಾಡಿ ಚಿತ್ರೀಕರಣ ಮಾಡಿರೋದಕ್ಕೆ ಚಿತ್ರತಂಡದ ವಿರುದ್ಧ ವಿರುದ್ಧ ಮಂಗಳೂರಿನ ದೈವಾರಾಧನೆ ಸಂರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
View this post on Instagram
ಕರಾವಳಿಗರೇ ನಿರ್ಮಿಸಿ ನಟಿಸಿದ ‘ಕಲ್ಜಿಗ’ ಅನ್ನೋ ಕನ್ನಡ ಸಿನಿಮಾದಲ್ಲಿ ಕರಾವಳಿಯ ಕಾರಣಿಕ ದೈವ ಕೊರಗಜ್ಜನ ಚಿತ್ರೀಕರಣ ಮಾಡಲಾಗಿದೆ. ಕೊರಗಜ್ಜನ ವೇಷಭೂಷಣ ಧರಿಸಿದ ನಟನೋರ್ವ ಸಿನಿಮಾದ ಶೂಟಿಂಗ್‌ಗಾಗಿ ನರ್ತನ ಮಾಡಿದ್ದಾರೆ. ಹೀಗಾಗಿ ಸಿನಿಮಾ ತಂಡದ ವಿರುದ್ಧ ಮಂಗಳೂರಿನ ದೈವಾರಾಧನೆ ಸಂರಕ್ಷಣಾ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅದಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲೂ ಬಾಯ್ಕಾಟ್ ಕಲ್ಜಿಗ ಅಭಿಯಾನ ಆರಂಭಗೊಂಡಿದೆ. ‘ಕಲ್ಜಿಗ’ ಸಿನಿಮಾ ಇಂದು (ಸೆ.13) ರಾಜ್ಯಾದ್ಯಂತ ತೆರೆಗೆ ಬಂದಿದ್ದು, ಕೋಸ್ಟಲ್‌ವುಡ್ ಕಲಾವಿದರೆ ನಿರ್ಮಿಸಿರುವ ಸ್ಯಾಂಡಲ್‌ವುಡ್ ಸಿನಿಮಾ ಇದಾಗಿದೆ. ನಟ ಅರ್ಜುನ್ ಕಾಪಿಕಾಡ್ (Arjun Kapikad) ನಟಿಸಿರುವ ಈ ಸಿನಿಮಾದಲ್ಲಿ ಕೊರಗಜ್ಜ ದೈವದ ಅನುಕರಣೆ ಮಾಡಿ ಚಿತ್ರೀಕರಣ ಮಾಡಿರುವುದಕ್ಕೆ ದೈವಾರಾಧಕರ ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ಚಿತ್ರದ ವಿರುದ್ಧ ಕಾನೂನು ಹೋರಾಟ ನಡೆಸುವುದಕ್ಕೂ ನಿರ್ಧಾರ ಮಾಡಿದ್ದಾರೆ.