ಮುಂಬೈ: ಬಾಲಿವುಡ್ ನಟ ಅನುಪಮ್ ಖೇರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶನಿವಾರ ಭೇಟಿಯಾಗಿ ತಮ್ಮ ತಾಯಿ ನೀಡಿದ್ದ ರುದ್ರಾಕ್ಷಿ ಮಾಲೆಯನ್ನು ನೀಡಿದ್ದಾರೆ.
ಮೋದಿ ಅವರನ್ನು ಭೇಟಿ ಮಾಡಿದ ಅನುಪಮ್ ಖೇರ್ ಅವರು ಕೆಲವೊಂದು ಫೋಟೋಗಳನ್ನು ಅವರೊಂದಿಗೆ ಕ್ಲಿಕ್ಕಿಸಿಕೊಂಡು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರೇ, ನಿಮ್ಮನ್ನು ಭೇಟಿಯಾಗಿ ತುಂಬಾ ಸಂತೋಷವಾಯಿತು. ದೇಶದ ಜನತೆಗಾಗಿ ನೀವು ಹಗಲಿರುಳು ಪಡುತ್ತಿರುವ ಶ್ರಮ ಸ್ಪೂರ್ತಿದಾಯಕವಾಗಿದೆ. ನಿಮ್ಮನ್ನು ರಕ್ಷಿಸಲು ನನ್ನ ತಾಯಿ ಕಳುಹಿಸಿದ ರುದ್ರಾಕ್ಷಿ ಮಾಲೆಯನ್ನು ನೀವು ಗೌರವದಿಂದ ಸ್ವೀಕರಿಸಿದ್ದನ್ನು ನಾನು ಎಂದಿಗೂ ನೆನಪಿಸಿಕೊಳ್ಳುತ್ತೇನೆ. ಜೈ ಹೋ. ಜೈ ಹಿಂದ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯಾಕಣ್ಣ ನನ್ನೊಬ್ಬಳನ್ನೇ ಬಿಟ್ಟು ಹೋದೆ: ರಾಜ್ ನೆನೆದು ತಂಗಿ ಕಣ್ಣೀರು
आदरणीय प्रधानमंत्री @narendramodi जी। आज आपसे मिलकर मन अत्यंत प्रसन्न हुआ।आप देशवासियों के लिए दिन रात जो मेहनत कर रहें है, वो प्रेरणात्मक है! जिस श्रद्धा के साथ आपने मेरी माँ द्वारा आपकी रक्षा के लिए भेजी रुद्राक्ष की माला स्वीकार की वो हम हमेशा याद रखेंगे।जय हो।जय हिंद! ???????????????? pic.twitter.com/yBQN4UOvWy
— Anupam Kher (@AnupamPKher) April 23, 2022
ಇತ್ತೀಚೆಗಷ್ಟೇ ದೇಶದಲ್ಲಿ ಭಾರೀ ಸುದ್ದಿ ಮಾಡಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಲ್ಲಿ ನಟ ಅನುಪಮ್ ಖೇರ್ ಅವರು ಪುಷ್ಕರ್ ನಾಥ್ ಪಂಡಿತ್ ಪಾತ್ರದಲ್ಲಿ ಅಭಿನಯಿಸಿದ್ದರು. ಚಿತ್ರದಲ್ಲಿ ಅನುಪಮ್ ಖೇರ್ ಅದ್ಭುತವಾದ ನಟನೆ ಕಂಡು ಚಿತ್ರ ಪ್ರೇಮಿಗಳು ಶಹಭಾಷ್ ಎಂದಿದ್ದರು. ಇದನ್ನೂ ಓದಿ: ಜೋಕರ್ ಹೋಲಿಕೆಗೆ ದಿ ಕಾಶ್ಮೀರ್ ಫೈಲ್ಸ್ ನಟ ಅನುಪಮ್ ಖೇರ್ ಮೆಚ್ಚುಗೆ