ದಿ ಕಾಶ್ಮೀರ್ ಫೈಲ್ಸ್ (The Kashmiri Files)ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಬಾಲಿವುಡ್ ನಟ ಅನುಪಮ್ ಖೇರ್ (Anupam Kher), ಕಾಶ್ಮೀರಿ ಪಂಡಿತರಿಗೆ (Kashmiri Pandit) ನೆರವಿನ ಹಸ್ತ (Donation)ಚಾಚಿದ್ದಾರೆ. ದೆಹಲಿಯಲ್ಲಿ ನಡೆದ ಗ್ಲೋಬಲ್ ಕಾಶ್ಮೀರಿ ಪಂಡಿತರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ‘ನಿಮ್ಮಿಂದ ನಾವು ದುಡ್ಡು ಮಾಡಿದ್ದೇವೆ. ನಿಮಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ’ ಎಂದಿರುವ ಅವರು ಐದು ಲಕ್ಷ ರೂಪಾಯಿ ದೇಣಿಗೆ ಘೋಷಿಸಿದ್ದಾರೆ.
Advertisement
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ 2022 ಮಾರ್ಚ್ 11ರಂದು ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು. ಈ ಸಿನಿಮಾವನ್ನು ಎಲ್ಲರಿಗೂ ತೋರಿಸುವ ಉದ್ದೇಶದಿಂದ ನಾನಾ ರಾಜ್ಯಗಳ ಸರಕಾರವು ತೆರಿಗೆ ವಿನಾಯತಿ ಕೂಡ ಘೋಷಣೆ ಮಾಡಿದ್ದವು. ಅಲ್ಲದೇ, ಅನೇಕ ರಾಜ್ಯಗಳಲ್ಲಿ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿತು. ಫಲವಾಗಿ ಬರೋಬ್ಬರಿ 340 ಕೋಟಿ ರೂಪಾಯಿ ಸಿನಿಮಾ ಸಂಪಾದಿಸಿತು. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ
Advertisement
Advertisement
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತಾಗಿ ಈಗಲೂ ಭಿನ್ನಾಭಿಪ್ರಾಯಗಳು ಇದ್ದರೂ, ಆ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಸಿನಿಮಾ ಪ್ರದರ್ಶನವಾಯಿತು. ಅನೇಕ ಪ್ರಶಸ್ತಿಗಳು ಸಿನಿಮಾವನ್ನು ಹುಡುಕಿಕೊಂಡು ಬಂದವು. ಈಗಲೂ ಓಟಿಟಿಯಲ್ಲಿ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಚಿತ್ರ ಸಾಕಷ್ಟು ದುಡ್ಡು ಮಾಡಿದೆ.
Advertisement
ಈ ಎಲ್ಲ ಕಾರಣದಿಂದಾಗಿ ಕಾಶ್ಮೀರಿ ಪಂಡಿತ್ ಕಾನ್ ಕ್ಲೇವ್ ದಲ್ಲಿ ಮಾತನಾಡಿದ ಅನುಪಮ್ ಖೇರ್, ‘ನಮ್ಮ ಜನರಿಗೆ ನಾನು ನೆರವಿನ ಹಸ್ತ ಚಾಚುವಂತಹ ಸಮಯ ಬಂದಿದೆ. ಈ ಸಮಯದಲ್ಲಿ ನಾವು ಕಾಶ್ಮೀರಿ ಪಂಡಿತರ ಜೊತೆ ನಿಂತುಕೊಳ್ಳಬೇಕು. ಅವರಿಂದ ದುಡ್ಡು ಮಾಡಿದ್ದೇವೆ. ಆ ಎಚ್ಚರಿಕೆ ನಮ್ಮಲ್ಲಿ ಇರಬೇಕು’ ಎಂದು ಅವರು ಭಾವುಕರಾಗಿ ಮಾತನಾಡಿದ್ದಾರೆ.