ಬೆಂಗಳೂರು: ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರದ ಮೂಲಕ ಗೆಲುವೊಂದನ್ನು ತಮ್ಮದಾಗಿಸಿಕೊಂಡ ಅನೀಶ್ ತೇಜೇಶ್ವರ್ ಪಕ್ಕಾ ಹಳ್ಳಿ ಲುಕ್ಕಿನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಇನ್ನಷ್ಟೇ ಟೈಟಲ್ ಪಕ್ಕಾ ಆಗಬೇಕಿರೋ ಈ ಚಿತ್ರವನ್ನು ಯಶಸ್ವಿ ಸಂಭಾಷಣೆಕಾರ ಪ್ರಶಾಂತ್ ರಾಜಪ್ಪ ನಿರ್ದೇಶನ ಮಾಡಲಿದ್ದಾರೆ.
ಇದುವರೆಗಿನ ಚಿತ್ರಗಳಲ್ಲಿ ಸ್ಟೈಲಿಶ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದ ಅನೀಶ್ ಈ ಚಿತ್ರದಲ್ಲಿ ಸಂಪೂರ್ಣವಾಗಿ ಹಳ್ಳಿ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲಿರೋ ಸಂಭ್ರಮದಲ್ಲಿದ್ದಾರೆ. ಈಗಾಗಲೇ ಪ್ರಶಾಂತ್ ರಾಜಪ್ಪ ಸಂಭಾಷಣೆಕಾರರಾಗಿ ಗೆದ್ದಿದ್ದಾರೆ. ಅವರ ಕಾಮಿಡಿ ಕಿಕ್ಕಿಗೆ ಪ್ರೇಕ್ಷಕರೂ ಫಿದಾ ಆಗಿದ್ದಾರೆ. ಅಷ್ಟಕ್ಕೂ ಇದೀಗ ಸಂಭಾಷಣೆಕಾರರಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ಅವರ ಪ್ರಧಾನ ಉದ್ದೇಶವಾಗಿದ್ದದ್ದು ನಿರ್ದೇಶನ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ.
Advertisement
Advertisement
ಸಂಪೂರ್ಣವಾಗಿ ಹಳ್ಳಿಯಲ್ಲೇ ನಡೆಯುವ ಮಜವಾದ ಕಥೆಯೊಂದನ್ನು ಪ್ರಶಾಂತ್ ರಾಜಪ್ಪ ರೆಡಿ ಮಾಡಿಕೊಂಡಿದ್ದಾರೆ. ಈ ಕಥೆ ಹಳ್ಳಿಯ ಆಸುಪಾಸಿನ ಸಣ್ಣ ಪುಟ್ಟ ಪೇಟೆ ಬಿಟ್ರೆ ನಗರದ ಛಾಯೆಯಿಂದ ಸಂಪೂರ್ಣವಾಗಿ ಮುಕ್ತವಾಗಿರಲಿದೆಯಂತೆ. ಈಗಾಗಲೇ ತಾಂತ್ರಿಕ ವರ್ಗದವರ ಆಯ್ಕೆ ಕಾರ್ಯ ಮುಗಿದಿದೆ. ಗಣೇಶನ ಹಬ್ಬದಂದು ಟೈಟಲ್ ಲಾಂಚ್ ಆಗಲಿದೆ. ಬೆಂಗಳೂರು ಸುತ್ತ ಮುತ್ತಲ ಹಳ್ಳಿಗಳಲ್ಲಿಯೇ ಚಿತ್ರೀಕರಣ ನಡೆಸಲು ಯೋಜಿಸಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv