ಜೊತೆ ಜೊತೆಯಲಿ ಸೀರಿಯಲ್ ನಿಂದ ಅನಿರುದ್ಧ ಅವರನ್ನು ಕೈ ಬಿಟ್ಟ ನಂತರ, ಅವರು ಆರ್ಯವರ್ಧನ್ ಪಾತ್ರವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿಯು ಅವರ ವೃತ್ತಿ ಬದುಕಿಗೆ ಬಹುದೊಡ್ಡ ತಿರುವು ನೀಡಿತ್ತು. ಮತ್ತು ಅಪಾರ ಪ್ರಮಾಣದಲ್ಲಿ ಅಭಿಮಾನಿಗಳನ್ನೂ ಸೃಷ್ಟಿ ಮಾಡಿತ್ತು. ಕನ್ನಡ ಕಿರುತೆರೆ ಲೋಕದಲ್ಲಿ ಅತ್ಯಂತ ಜನಪ್ರಿಯ ಧಾರಾವಾಹಿ ಇದಾಗಿದ್ದರಿಂದ, ಸಹಜವಾಗಿಯೇ ಅನಿರುದ್ಧ ಅವರು ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದರು. ಏಕಾಏಕಿ ಎಲ್ಲವೂ ಕೈ ಬಿಟ್ಟು ಹೋಗಿವೆ.
ಸಾಕಷ್ಟು ಜನಪ್ರಿಯತೆ, ಕೈತುಂಬಾ ದುಡ್ಡು, ಯಶಸ್ಸು ಎಲ್ಲವೂ ಒಟ್ಟಿಗೆ ಹೊರಟು ಹೋದಾಗ ನೊಂದುಕೊಳ್ಳುವುದು ಸಹಜ. ಸದ್ಯ ಅನಿರುದ್ಧ ಅವರು ನೊಂದುಕೊಂಡಿದ್ದಾರೆ. ಹಾಗಾಗಿಯೇ ಧಾರಾವಾಹಿ ತಂಡದ ಜೊತೆ ಕೂತು ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಲು ಮುಂದಾದರು. ಆದರೆ, ಅದು ಯಶಸ್ಸು ಕಾಣಲಿಲ್ಲ. ಇದೀಗ ನೊಂದುಕೊಳ್ಳುವುದಷ್ಟೇ ಅವರ ಮುಂದೆ ಉಳಿದಿದೆ. ಹಾಗಾಗಿ ಧಾರಾವಾಹಿ ನೆನಪುಗಳನ್ನು ಅವರು ದಿನವೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಅನಿರುದ್ಧ ಗಲಾಟೆ ಧಾರವಾಡಕ್ಕೆ ಶಿಫ್ಟ್: ಪ್ರಕರಣ ತಿಳಿಗೊಳಿಸಲು ಸ್ನೇಹಿತರ ಮನವಿ
ಆರ್ಯವರ್ಧನ್ ಪಾತ್ರದ ಫೋಟೋಗಳನ್ನು ಅವರು ತಮ್ಮೆಲ್ಲ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ದಿನಕ್ಕೊಂದು ಫೋಟೋವನ್ನು ಅವರು ಫೇಸ್ ಬುಕ್, ಟ್ವಿಟರ್, ವಾಟ್ಸಪ್, ಇನ್ಸಸ್ಟಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಆ ಪಾತ್ರವನ್ನು ತಾವೆಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎನ್ನುವುದನ್ನು ತೋರಿಸುತ್ತಿದ್ದಾರೆ. ಏನೇ ಆಗಲಿ ಅನಿರುದ್ಧ ಅವರೇ ಈ ಪಾತ್ರದಲ್ಲಿ ಮುಂದುವರೆಯಬೇಕು ಅನ್ನುವುದು ಅಭಿಮಾನಿಗಳ ಆಸೆ ಆಗಿತ್ತು. ಕೊನೆಗೂ ಅದೇ ಈಡೇರಲಿಲ್ಲ.